
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಇತ್ತೀಚೆಗೆ ಹೊರಬಂದಿರುವ ಸ್ಪರ್ಧಿ ಮಂಜುನಾಥ್ (ಮಂಜು) ಅವರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಶೋನಿಂದ ಹೊರಬಂದ ತಕ್ಷಣವೇ ಅವರಿಗೆ ಸ್ನೇಹಿತರಿಂದ ಮರೆಯಲಾಗದ ಸರ್ಪ್ರೈಸ್ ಸಿಕ್ಕಿದೆ. ಈ ವಿಶೇಷ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಕೆಲ ವಾರ ಹಿಂದಷ್ಟೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದ ಲಿಖಿತ್ ಅವರು ಮಂಜು ಅವರ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಯೋಜಿಸಿದ್ದಾರೆ. ಬರ್ತ್‌ಡೇ ಆಚರಿಸಿಕೊಳ್ಳಲು ಮಂಜು ಅಂದುಕೊಂಡಿರಲಿಲ್ಲವಾದರೂ, ಲಿಖಿತ್ ಅವರು ಮುಂಚಿತವಾಗಿ ಎಲ್ಲವನ್ನೂ ಸಿದ್ಧಪಡಿಸಿದ್ದರು. ಸ್ನೇಹಿತನ ಹುಟ್ಟುಹಬ್ಬವನ್ನು ವಿಶೇಷವಾಗಿಸಲು ಲಿಖಿತ್ ಮಾಡಿದ ಮಂಜುಗೆ ಇಷ್ಟವಾಗಿದೆ.
ಬಿಗ್ ಬಾಸ್ ಮನೆಯಲ್ಲಿದ್ದಾಗ ಈ ಇಬ್ಬರೂ ಸ್ಪರ್ಧಿಗಳು ಪರಸ್ಪರ ಉತ್ತಮ ಒಡನಾಟವನ್ನು ಹೊಂದಿದ್ದರು. ಅಲ್ಲದೆ ಕಷ್ಟದ ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಬಲವಾದ ಬೆಂಬಲವಾಗಿ ನಿಂತಿದ್ದರು. ಈಗ ಆಟದ ಮೈದಾನದಿಂದ ಹೊರಬಂದ ಮೇಲೆಯೂ ತಮ್ಮ ಬಾಂಧವ್ಯವನ್ನು ಹೀಗೆಯೇ ಮುಂದುವರಿಸಿರುವುದು ವಿಶೇಷವಾಗಿದೆ.
ರಸ್ತೆಯ ಬದಿಯಲ್ಲಿಯೇ ಕೇಕ್ ಕಟ್ ಮಾಡಿಸಿ, ಮಂಜುಗೆ ಟೋಪಿ ಹಾಕಿ ಲಿಖಿತ್ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಈ ಸುಂದರ ಕ್ಷಣದಲ್ಲಿ ಇಬ್ಬರೂ ಖುಷಿಯಿಂದ ಕೇಕ್ ತಿನ್ನಿಸಿಕೊಂಡು ಸಂತಸ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರ ನಡುವಿನ ಅಚಲ ಸ್ನೇಹ ಮತ್ತು ಹರ್ಷ ಸ್ಪಷ್ಟವಾಗಿ ಗೋಚರಿಸುತ್ತದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಬಳಿಕವೂ ಇವರ ಸ್ನೇಹ ಗಟ್ಟಿಯಾಗಿರುವುದನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಮಾಜಿ ಸ್ಪರ್ಧಿಗಳ ಈ ರೋಚಕ ಹಾಗೂ ಮಧುರ ಒಡನಾಟ ಎಲ್ಲರ ಗಮನ ಸೆಳೆದಿದೆ. ಅವಾಚ್ಯ ಪದ ಬಳಕೆ ಮಾಡಿದ್ದಕ್ಕೆ ಮಂಜು ಎಲಿಮಿನೇಟ್ ಆಗಿದ್ದಾರೆ. ನಿಯಮ ಉಲ್ಲಂಘನೆ ಕಾರಣಕ್ಕೆ ಅವರು ಹೊರಹೋಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:27 am, Mon, 12 October 26