
ಪ್ರತಿ ಬಾರಿಯೂ ಬಿಗ್ ಬಾಸ್‌ನಲ್ಲಿ ಸ್ಕೂಲ್ ಟಾಸ್ಕ್, ರೆಸಾರ್ಟ್ ಟಾಸ್ಕ್ಗಳನ್ನು ನೀಡಲಾಗುತ್ತದೆ. ಈ ಬಾರಿಯೂ ಅದು ಮುಂದುವರಿದಿದೆ. ರಜತ್ (Rajat), ಮಂಜು, ಚೈತ್ರಾ, ಮೋಕ್ಷಿತಾ ಹಾಗೂ ತ್ರಿವಿಕ್ರಂ ಅವರು ಶೋಗೆ ಅತಿಥಿಗಳಾಗಿ ಬಂದಿದ್ದಾರೆ. ಇದರಿಂದ ಇಡೀ ಮನೆಯ ವಾತಾವರಣ ಹಾಳಾಗಿದೆ. ಅತಿಥಿಗಳಾಗಿ ಬಂದವರು ಡಾಮಿನೇಟ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಕಳೆದ ಸೀಸನ್ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸುದೀಪ್ ಅವರು ರಜತ್ಗೆ ಕ್ಲಾಸ್ ತೆಗೆದುಕೊಂಡಿದ್ದರು.
ಕಳೆದ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ನೀಡಲಾಗಿತ್ತು. ಸ್ಪರ್ಧಿಗಳಲ್ಲೇ ಎರಡು ಗುಂಪನ್ನು ಮಾಡಲಾಗಿತ್ತು. ಒಂದು ಗುಂಪು ಆತಿಥ್ಯ ನೋಡಿಕೊಳ್ಳಬೇಕು, ಮತ್ತೊಂದು ಗುಂಪು ಅತಿಥಿಗಳಾಗಬೇಕು. ನಂತರ ಇದು ಉಲ್ಟಾ ಆಗುತ್ತದೆ. ಅಂದರೆ ಆತಿಥ್ಯ ಪಡೆದವರು ಅತಿಥಿಗಳಾಗಬೇಕು, ಅತಿಥಿಗಳಾಗಿ ಇದ್ದವರು ಆತಿಥ್ಯ ನೀಡಬೇಕು. ರಜತ್ ಅತಿಥಿಯಾದಾಗ ಯಾವ ರೀತಿ ನಡೆದುಕೊಂಡಿದ್ದರು ಎಂಬ ಬಗ್ಗೆ ಸುದೀಪ್ ಅಭಿಪ್ರಾಯ ಹೊರಹಾಕಿದ್ದರು.
‘ಎಲ್ಲರೂ ಲೋಕಲ್ ಬಾರ್ ಅಲ್ಲಿ ಇರೋ ತರ ಇದ್ರಿ. ರಜತ್ ಎಂಟ್ರಿ ಕೊಟ್ಮೇಲೆ ಅದು ರೆಸಾರ್ಟ್ ಅಲ್ಲವೇ ಅಲ್ಲ. ರೆಸಾರ್ಟ್ನ ಪಕ್ಕಾ ಲೋಕಲ್ ಬಾರ್ ಆಗಿ ಬದಲಾಯಿಸಿದ್ರು’ ಎಂದು ಸುದೀಪ್ ಅವರು ವೀಕೆಂಡ್ನಲ್ಲಿ ಹೇಳದ್ದರು. ಈ ವಿಡಿಯೋನ ಗಿಲ್ಲಿ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.
Let’s start this weekend with this question😇
What say? @ColorsKannada @KicchaSudeep #BBK12 pic.twitter.com/81OyA7iqcQ
— Ullas (@ullasshettyy48) November 27, 2025
ರಜತ್ ಹಾಗೂ ಮಂಜು ಬಿಗ್ ಬಾಸ್ ಮನೆಯಲ್ಲಿ ಅತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಅಭಿಪ್ರಾಯ ವ್ಯಕ್ತವಾಗಿದೆ.ಇನ್ನೂ ಕೆಲವರು ಗಿಲ್ಲಿಯದ್ದು ತಪ್ಪು ಎಂದಿದ್ದಾರೆ. ರಜತ್ ಹಾಗೂ ಮಂಜು ಕೆರಳಿಸಿದ್ದರಿಂದಲೇ ಗಿಲ್ಲಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಅನೇಕರದ್ದು.
ಇದನ್ನೂ ಓದಿ: ಗಿಲ್ಲಿ ಅಭಿಮಾನಿಗಳ ಕಾಟಕ್ಕೆ ಹೆದರಿ ಕಮೆಂಟ್ಸ್ ಆಫ್ ಮಾಡಿದ ರಜತ್
ಇಂದು ಅಥವಾ ನಾಳೆ ಈ ಅತಿಥಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವೀಕೆಂಡ್ವರೆಗೆ ಈ ಅತಿಥಿಗಳು ಇರೋದು ಅನುಮಾನ ಎಂದು ಹೇಳಲಾಗುತ್ತಾ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.