AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಥಿಗಳು ನಡೆದುಕೊಂಡ ರೀತಿಗೆ ಒಂದಾದ ಗಿಲ್ಲಿ-ಅಶ್ವಿನಿ; ಮೂಡಿತು ಗೆಳೆತನ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಅತಿಥಿಗಳ ಗದ್ದಲದಿಂದಾಗಿ ಗಿಲ್ಲಿ ಮತ್ತು ಅಶ್ವಿನಿ ಗೌಡರು ಅನಿರೀಕ್ಷಿತವಾಗಿ ಒಂದಾಗಿದ್ದಾರೆ. ಸದಾ ಕಿತ್ತಾಡುತ್ತಿದ್ದ ಇವರ ನಡುವೆ ಅತಿಥಿಗಳ ವರ್ತನೆ ಹೊಸ ಗೆಳೆತನಕ್ಕೆ ನಾಂದಿ ಹಾಡಿದೆ. ಗಿಲ್ಲಿಯನ್ನು ಅಶ್ವಿನಿ ಸಮಾಧಾನಪಡಿಸಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಗೆಳೆತನ ಮುಂದುವರಿಯಲಿ ಎಂಬುದು ವೀಕ್ಷಕರ ಆಶಯವಾಗಿದೆ.

ಅತಿಥಿಗಳು ನಡೆದುಕೊಂಡ ರೀತಿಗೆ ಒಂದಾದ ಗಿಲ್ಲಿ-ಅಶ್ವಿನಿ; ಮೂಡಿತು ಗೆಳೆತನ
ಗಿಲ್ಲಿ-ಅಶ್ವಿನಿ
ರಾಜೇಶ್ ದುಗ್ಗುಮನೆ
|

Updated on:Nov 27, 2025 | 7:38 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಈ ವಾರ ಅತಿಥಿಗಳು ಬಂದಿದ್ದಾರೆ. ಕಳೆದ ಸೀಸನ್ ಸ್ಪರ್ಧಿಗಳಾದ ಗಿಲ್ಲಿ ನಟ, ಮಂಜು ಮೊದಲಾದವರು ಅತಿಥಿಗಳು. ಬಂದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಬಿಗ್ ಬಾಸ್ ಆದೇಶ ಆಗಿತ್ತು. ಆದರೆ, ಅದನ್ನು ಗಿಲ್ಲಿ ಮೀರಿದ್ದಾರೆ. ಎಲ್ಲರೂ ಅವರನ್ನು ಚೆನ್ನಾಗಿ ನೋಡಿಕೊಂಡರೆ ಗಿಲ್ಲಿ ಮಾತ್ರ ಅವರಿಗೆ ಟಾರ್ಚರ್ ಕೊಟ್ಟಿದ್ದಾರೆ. ಇದರಿಂದ ಸಿಟ್ಟಾದ ಅತಿಥಿಗಳು ಕೂಗಾಡಿದ್ದಾರೆ. ಇದರಿಂದ ಬೇಸರಗೊಂಡು ಗಿಲ್ಲಿ ಹಾಗೂ ಅಶ್ವಿನಿ ಗೌಡ ಒಂದಾಗಿದ್ದಾರೆ. ಇವರ ಮಧ್ಯೆ ಗೆಳೆತನ ಮೂಡಿದೆ. ಅಶ್ವಿನಿ ಅವರು ಸ್ವತಃ ಗಿಲ್ಲಿಯನ್ನು ಸಮಾಧಾನ ಮಾಡಿದ್ದಾರೆ.

ಗಿಲ್ಲಿ ಹಾಗೂ ಅಶ್ವಿನಿ ಅವರ ಮಧ್ಯೆ ಮೊದಲಿನಿಂದಲೂ ಕಿತ್ತಾಟ ನಡೆದೇ ಇದೆ. ಇವರು ಒಮ್ಮೆಯೂ ಪ್ರೀತಿಯಿಂದ ಮಾತನಾಡಿಕೊಂಡ ಉದಾಹರಣೆಯೇ ಇಲ್ಲ. ಆದರೆ, ಈ ವಾರ ಎಲ್ಲವೂ ಅದಲುಬದಲಾಗಿದೆ. ಮನೆಯವರ ತಂಟೆಗೆ ಅತಿಥಿಗಳು ಬಂದಿರೋದು ಅಶ್ವಿನಿ ಹಾಗೂ ಗಿಲ್ಲಿಗೆ ಕೋಪ ತರಿಸಿದೆ. ಈ ಕಾರಣದಿಂದಲೇ ಇಬ್ಬರೂ ಒಂದಾಗಿದ್ದಾರೆ. ಇವರ ಮಧ್ಯೆ ಇದೇ ಗೆಳೆತನ ಮುಂದುವರಿಯಲಿ ಎಂಬುದು ಫ್ಯಾನ್ಸ್ ಕೋರಿಕೆ.

ಗಿಲ್ಲಿ ನಡುವಳಿಕೆಯಿಂದ ಬೇಸರಗೊಂಡ ಅತಿಥಿಗಳು ಅಸಮಧಾನ ಹೊರಹಾಕಿದರು. ಆ ಬಳಿಕ ಇಡೀ ಮನೆ ಗಿಲ್ಲಿ ವಿರುದ್ಧ ತಿರುಗಿಬಿತ್ತು. ಈ ಕಾರಣದಿಂದಲೇ ಗಿಲ್ಲಿ ಅವರು ಸೈಲೆಂಟ್ ಆದರು. ಗಿಲ್ಲಿ ಸೈಲೆಂಟ್ ಆಗಿರೋದನ್ನು ಅಶ್ವಿನಿ ಅವರಿಗೆ ನೋಡೋಕೆ ಆಗಿಲ್ಲ. ಗಿಲ್ಲಿಯನ್ನು ಕರೆದು ಅಶ್ವಿನಿ ಸಮಧಾನ ಮಾಡಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ; ನೇರವಾಗಿ ಹೇಳಿದ ಬಿಗ್ ಬಾಸ್ ಅತಿಥಿಗಳು

‘ಸಾಮಾನ್ಯವಾಗಿರು. ಕೂಲ್ ಆಗಿರು. ಹಿಂಸೆ ಆದರೆ ಕರಿ ಜೊತೆಗೆ ಬರ್ತೀನಿ’ ಎಂದು ಗಿಲ್ಲಿಗೆ ಬಲ ತುಂಬಿದ್ದಾರೆ. ಅವರ ಮಾತು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಕೆಲವರು ಅತಿಥಿಗಳದ್ದು ಅತಿಯಾಯಿತು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಗಿಲ್ಲಿ ಮೇಲೆ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಆರೋಪ-ಪ್ರತ್ಯಾರೋಪ ಮುಂದುವರಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:37 am, Thu, 27 November 25

ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ