ಗಿಲ್ಲಿ ಅಭಿಮಾನಿಗಳ ಕಾಟಕ್ಕೆ ಹೆದರಿ ಕಮೆಂಟ್ಸ್ ಆಫ್ ಮಾಡಿದ ರಜತ್
ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಗಿಲ್ಲಿ ಅಭಿಮಾನಿಗಳು ಅತಿಥಿ ರಜತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದಾರೆ. ಗಿಲ್ಲಿಯನ್ನು ಕೆಣಕಿದ್ದಕ್ಕೆ ರಜತ್ ಅವರ ಕಮೆಂಟ್ ಬಾಕ್ಸ್‌ನಲ್ಲಿ ‘ಗಿಲ್ಲಿ ತಂಟೆಗೆ ಹೋಗಬೇಡ’ ಎಂದು ಕಮೆಂಟ್ ಮಾಡಿದ್ದಾರೆ. ಈ ಕಾಟದಿಂದ ರಜತ್ ತಮ್ಮ ಇನ್‌ಸ್ಟಾಗ್ರಾಮ್ ಕಮೆಂಟ್‌ಗಳನ್ನು ಆಫ್ ಮಾಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ (BBK 12) ಸ್ಪರ್ಧಿ ಗಿಲ್ಲಿ ನಟ ಅವರಿಗೆ ಹೊರಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿಯ ಬಗ್ಗೆ ಪಾಸಿಟಿವ್ ಕಮೆಂಟ್ ಹಾಕುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಗಿಲ್ಲಿ ಬಗ್ಗೆ ಯಾರಾದರೂ ನೆಗೆಟಿವ್ ಆಗಿ ಮಾತನಾಡಿದರೆ ಅವರನ್ನು ಅಭಿಾಡುತ್ತಿದ್ದಾರೆ. ಈಗ ರಜತ್ ಅವರಿಗೂ ಹಾಗೆಯೇ ಆಗಿದೆ.
ರಜತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಯಾಗಿದ್ದರು. ಅವರು ಈ ಬಾರಿ ದೊಡ್ಮನೆಗೆ ಅತಿಥಿಯಾಗಿ ಬಂದಿದ್ದಾರೆ. ಅವರ ಜೊತೆ ಮಂಜು, ಚೈತ್ರಾ ಮೊದಲಾದವರು ಇದ್ದಾರೆ. ಈ ವೇಳೆ ಗಿಲ್ಲಿಯನ್ನು ರಜತ್ ಕೆಣಕಿದ್ದಾರೆ. ಇದಕ್ಕೆ ಗಿಲ್ಲಿ ಕೂಡ ಖಡಕ್ ಆಗಿ ಉತ್ತರ ನೀಡಿದ್ದಾರೆ.
ಗಿಲ್ಲಿ ನಟ ಅವರನ್ನು ಒಂದೇ ಶೂನಲ್ಲಿ ಇರುವಂತೆ ಸೂಚಿಸಿದರು. ಇದು ಅವರ ಮನಸಿಗೆ ಸಾಕಷ್ಟು ನೋವನ್ನುಂಟು ಮಾಡಿದೆ. ಇದಕ್ಕೆ ಅವರು ಸೇಡು ತೀರಿಸಿಕೊಳ್ಳಲು ಮುಂದಾದರು. ಆ ಬಳಿಕ ಗಿಲ್ಲಿ ನಟ ಅವರು ರಜತ್ಗೆ ಕೌಂಟರ್ ಕೊಡುತ್ತಾ ಬಂದರು. ಇದರಿಂದ ಉರಿದುಕೊಂಡ ರಜತ್ ಅವರು ಗಿಲ್ಲಿ ವಿರುದ್ಧ ಧ್ವನಿ ಎತ್ತಿದ್ದಾರೆ.
ಇದು ಗಿಲ್ಲಿ ಅಭಿಮಾನಿಗಳಿಗೆ ಸ್ವಲ್ಪವೂ ಇಷ್ಟ ಆಗಿಲ್ಲ. ಹೀಗಾಗಿ, ರಜತ್ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಹೋಗಿ ಪೋಸ್ಟ್ಗಳ ಕಮೆಂಟ್ ಬಾಕ್ಸ್‌ನಲ್ಲಿ ‘ಗಿಲ್ಲಿ ತಂಟೆಗೆ ಹೋಗಬೇಡ’ ಎಂದೆಲ್ಲ ಬರೆದಿದ್ದಾರೆ. ಈ ಕಾರಣಕ್ಕೆ ರಜತ್ ಅವರ ಸೋಶಿಯಲ್ ಮೀಡಿಯಾ ಖಾತೆ ನೋಡಿಕೊಳ್ಳುವವರು ಕಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ. ಇದು ಗಿಲ್ಲಿ ತಾಕತ್ತು ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ಮನುಷ್ಯರ ಜಾತಿಗೆ ಸೇರಿದವರು ಅರ್ಥಮಾಡಿಕೊಳ್ಳಬೇಕು; ಗಿಲ್ಲಿ ಮಾತಿಗೆ ಉರಿದು ಬಿದ್ದ ರಜತ್ ಸಭ್ಯತೆಯ ಚೌಕಟ್ಟಿನಲ್ಲಿ ಅತಿಥಿಗಳನ್ನ ರೋಸ್ಟ್ ಮಾಡುವಂತೆ ಬಿಗ್ ಬಾಸ್ ಸೂಚನೆ ಕೊಟ್ಟಿದ್ದರು. ಆದರೆ, ಗಿಲ್ಲಿ ಅವರು ಈ ಸಂದರ್ಭದಲ್ಲಿ ಎಲ್ಲೆ ಮೀರಿದಂತೆ ಇದೆ. ಈ ಬಗ್ಗೆ ಅನೇಕರಿಗೆ ಬೇಸರ ಇದೆ. ಬಂದ ಅತಿಥಿಗಳ ಊಟದ ವಿಷಯದಲ್ಲಿ ಗಿಲ್ಲಿ ಕೆಟ್ಟದಾಗಿ ಮಾತನಾಡಿದ್ದು, ಅನೇಕರಿಗೆ ಬೇಸರ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:13 am, Wed, 26 November 25




