‘ಇವರಿಬ್ಬರೂ ಸಾಕಷ್ಟು ಟ್ರೈ ಮಾಡ್ತಾರೆ’; ಏನೋ ಹೇಳಲು ಹೋಗಿ ಏನೋ ಹೇಳಿದ ನಿತ್ಯಾ
ನಿತ್ಯಾ ಮೆನನ್ ಅವರ ವೈರಲ್ ವಿಡಿಯೋ ಈಗ ಸಖತ್ ಸುದ್ದಿ ಮಾಡುತ್ತಿದೆ. ಮದುವೆ ಬಗ್ಗೆ ಅವರು ನೀಡಿದ ಹೇಳಿಕೆ ದ್ವಂದ್ವಾರ್ಥಕ್ಕೆ ತಿರುಗಿದಾಗ, ನಟಿ ನಗುನಗುತ್ತಲೇ ಸ್ಪಷ್ಟನೆ ನೀಡಿದ್ದಾರೆ. 'ಥಲೈವನ್ ಥಲೈವಿ' ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಸೇತುಪತಿ ಎದುರು ನಡೆದ ಈ ಮೋಜಿನ ಘಟನೆ ಫ್ಯಾನ್ಸ್‌ಗೆ ಅಚ್ಚುಮೆಚ್ಚು. ಈ ಕ್ಯೂಟ್ ವಿಡಿಯೋದಲ್ಲಿ ನಿತ್ಯಾ ಅವರ ಮಾತು ಹಾಗೂ ನಂತರದ ವಿವರಣೆ ಇಲ್ಲಿದೆ.

ನಿತ್ಯಾ ಮೆನನ್ (Nithya Menon) ಅವರು ದಕ್ಷಿಣ ಭಾರತದಲ್ಲೇ ಸಾಕಷ್ಟು ಹೆಸರು ಮಾಡಿದವರು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫಾಲೋವರ್ ಬಳಗ ಇದೆ. ಈಗ ಅವರ ಒಂದು ಫನ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಏನೋ ಹೇಳಲು ಹೋಗಿ ಇನ್ನೇನೋ ಹೇಳಿದ್ದಾರೆ. ಈ ವಿಡಿಯೋ ಸಖತ್ ಕ್ಯೂಟ್ ಆಗಿದೆ. ಇದನ್ನು ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ಆ ಸಂದರ್ಭದ ವಿಡಿಯೋ ಹಾಗೂ ಅಲ್ಲಿ ನಡೆದಿದ್ದು ಏನು ಎಂಬುದರ ವಿವರ ಇಲ್ಲಿದೆ.
ನಿತ್ಯಾ ಮೆನನ್ ಅವರು ‘ಥಲೈವನ್ ಥಲೈವಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆಯಿತು. ಕಥಾ ನಾಯಕನಾಗಿ ವಿಜಯ್ ಸೇತುಪತಿ, ನಾಯಕಿ ಆಗಿ ನಿತ್ಯಾ ಮೆನನ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕಥಾ ನಾಯಕ ಒಳ್ಳೆಯ ಅಡುಗೆ ಮಾಡುತ್ತಾನೆ. ಅಡುಗೆ ರುಚಿ ನೋಡಿ ಕಥಾ ನಾಯಕಿಗೆ ಲವ್ ಆಗುತ್ತದೆ. ಇಬ್ಬರೂ ವಿವಾಹ ಆಗುತ್ತಾರೆ. ಆ ಬಳಿಕ ದಿನ ಬೆಳಗಾದರೆ ಜಗಳ. ಇದೇ ಥೀಮ್ನ ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಿತ್ಯಾ ಮಾತನಾಡಿದ್ದರು.
ನಿಮ್ಮ ಮದುವೆ ಯಾವಾಗ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ್ದ ನಿತ್ಯಾ, ‘ಮದುವೆ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಏನು ಹೇಳಬೇಕೋ ಗೊತ್ತಿಲ್ಲ’ ಎಂದು ಹೇಳಿದರು. ‘ಈ ಸಿನಿಮಾ ಆದ ಬಳಿಕ ಮದುವೆ ಮಾಡಬೇಕು ಎಂದನಿಸಿದೆಯೇ ಅಥವಾ ಆಗಬಾರದು ಎಂದು ಅನಿಸಿದೆಯೇ’ ಎಂದು ಅವರಿಗೇ ಕೇಳಲಾಯಿತು. ಇದಕ್ಕೆ ನಿತ್ಯಾ ಉತ್ತರಿಸಿದ್ದಾರೆ.
‘ನಿರ್ದೇಶಕರು ಹಾಗೂ ನಟ ವಿಜಯ್ ಸೇತುಪತಿ ಸಾಕಷ್ಟು ಟ್ರೈ ಮಾಡುತ್ತಿದ್ದಾರೆ’ ಎಂದರು. ನಿತ್ಯಾ ಹೇಳಿದ ಈ ಮಾತು ದ್ವಂದ್ವಾರ್ಥ ಪಡೆದುಕೊಂಡಿತು. ‘ಸರಿಯಾಗಿ ಹೇಳಿ ಪ್ಲೀಸ್’ ಎಂದು ದಳಪತಿ ವಿಜಯ್ ಅವರು ಕೇಳಿದರು. ‘ಆ ರೀತಿ ಅಲ್ಲ, ಆ ರೀತಿ ಅಲ್ಲ. ಮದುವೆ ಆಗಲು ಇದು ಸರಿಯಾದ ಸಮಯ. ಮದುವೆ ಆಗಿ ಎಂದು ನನ್ನ ಒಪ್ಪಿಸಲು ಅವರು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲು ಬಂದೆ’ ಎಂದು ನಿತ್ಯಾ ವಿವರಣೆ ನೀಡಿದರು.
ಇದನ್ನೂ ಓದಿ: ‘ಇಡ್ಲಿ ಕಡೈ’ ಶೂಟಿಂಗ್ ಸೆಟ್ನಲ್ಲಿ ಕನ್ನಡತಿ ನಿತ್ಯಾ ಮೆನನ್
ನಿತ್ಯಾ ಮೆನನ್ ಅವರು ಕನ್ನಡದವರು. ಅವರು ಬೆಂಗಳೂರಿನಲ್ಲಿ ಶಿಕ್ಷಣ ಪಡೆದರು. ಈಗ ಮಲಯಾಳಂ ಹಾಗೂ ತಮಿಳು ಸಿನಿಮಾಗಳನ್ನು ಹೆಚ್ಚು ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:47 am, Wed, 26 November 25



