
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಫಿನಾಲೆ ವಾರ ತಲುಪಿದೆ. ಸದ್ಯಕ್ಕೆ ಏಳು ಮಂದಿ ಸ್ಪರ್ಧಿಗಳಿದ್ದು ಇಂದು (ಬುಧವಾರ) ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಲಿದ್ದಾರೆ. ಫಿನಾಲೆಗೆ ಉಳಿದುಕೊಂಡಿರುವ ಸ್ಪರ್ಧಿಗಳ ಮಾತು, ಹಾವ ಭಾವ ಎಲ್ಲವೂ ಪ್ರೇಕ್ಷಕರಿಗೆ ಪರಿಚಿತವಾಗಿಬಿಟ್ಟಿದೆ. ಗಿಲ್ಲಿಯ ಕಾಮಿಡಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಬಿಗ್ಬಾಸ್ ಮನೆಯಲ್ಲಿ ಜೋಡಿಗಳು ಏರ್ಪಟ್ಟಿದ್ದವು. ಅದರಲ್ಲಿ ಬಹಳ ಜನಪ್ರಿಯತೆ ಪಡೆದಿದ್ದು ಗಿಲ್ಲಿ ಮತ್ತು ಕಾವ್ಯಾ ಜೋಡಿ. ಆದರೆ ಇತ್ತೀಚೆಗೆ ರಕ್ಷಿತಾ ಸಹ ಗಿಲ್ಲಿ ಜೊತೆ ಆಪ್ತವಾಗಿದ್ದು, ಗಿಲ್ಲಿಯನ್ನು ಇಷ್ಟಪಡುತ್ತಿರುವ ಅನುಮಾನ ಪ್ರೇಕ್ಷಕರಿಗೆ ಮೂಡಿದೆ.
ಗಿಲ್ಲಿ ಜೊತೆಗೆ ಹೆಚ್ಚು ಇರಲು ರಕ್ಷಿತಾ ಬಯಸುತ್ತಾರೆ, ಗಿಲ್ಲಿ ಜೊತೆಗೆ ಕಾವ್ಯಾ ಅಥವಾ ಮುಂಚೆ ಸ್ಪಂದನಾ ಮಾತನಾಡಿದರೆ ಬೇಜಾರು ಮಾಡಿಕೊಳ್ಳುತ್ತಿದ್ದರು. ಮೊನ್ನೆಯಂತೂ ಗಿಲ್ಲಿ ಜೊತೆ ತಾವು ಮಾತ್ರ ಕೂರಬೇಕೆಂದು ಹೆಚ್ಚುವರಿ ಇದ್ದ ಬೀನ್ ಬ್ಯಾಗ್ಗಳನ್ನು ಬೇರೆಡೆ ತೆಗೆದುಕೊಂಡು ಹೋಗಿ ಇಟ್ಟು ಬಂದಿದ್ದರು. ಒಮ್ಮೆಯಂತೂ ಗಿಲ್ಲಿಯಂಥ ಬಾಯ್ಫ್ರೆಂಡ್ ಬೇಕು ಎಂದು ಸಹ ರಕ್ಷಿತಾ ಹೇಳಿದ್ದರು. ವೀಕೆಂಡ್ ಎಪಿಸೋಡ್ನಲ್ಲಿ ಸಹ ಈ ಬಗ್ಗೆ ಚರ್ಚೆ ಮಾಡಲಾಯ್ತು.
ಆದರೆ ವೀಕೆಂಡ್ ಚರ್ಚೆ ಬಳಿಕ ರಕ್ಷಿತಾ ತಮ್ಮ ವರಸೆ ಬದಲಿಸಿದ್ದಾರೆ. ಗಿಲ್ಲಿ ನನಗೆ ಇಷ್ಟವಿಲ್ಲ. ನನ್ನ ಬಾಯ್ಫ್ರೆಂಡ್ ಅಥವಾ ಪತಿ ಆಗುವ ಅರ್ಹತೆಯೇ ಗಿಲ್ಲಿಗೆ ಇಲ್ಲ ಎಂದಿದ್ದಾರೆ ರಕ್ಷಿತಾ. ಗಿಲ್ಲಿ, ಖಾಲಿ ಸಮಯದಲ್ಲಿ ಬಿಗ್ಬಾಸ್ ಸದಸ್ಯರಿಗೆ ಸಿನಿಮಾ ಕತೆ ಹೇಳುವುದು ಅಭ್ಯಾಸ. ಅದರಲ್ಲೂ ಬಿಗ್ಬಾಸ್ ಮನೆಯಲ್ಲಿ ನಡೆದಿದ್ದನ್ನೇ ಕತೆಯ ರೀತಿ ಹೇಳುತ್ತಾರೆ. ಹಾಗೆಯೇ ತಮ್ಮ ಹಾಗೂ ಕಾವ್ಯಾರ ಕತೆಯನ್ನು ಇತ್ತೀಚೆಗೆ ಹೇಳುತ್ತಿದ್ದರು. ಆಗ ರಕ್ಷಿತಾರ ವಿಷಯವನ್ನೂ ಎಳೆದು ತಂದು, ರಕ್ಷಿತಾ ತಮ್ಮ ಬಗ್ಗೆ ಇಷ್ಟ ಇರಿಸಿಕೊಂಡಿದ್ದಾರೆ ಎಂದು ಕತೆಯ ರೂಪದಲ್ಲಿ ಹೇಳಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಬಿಗ್ಬಾಸ್ ಕತೆಯನ್ನೇ ಹೇಳಿದ ಗಿಲ್ಲಿ: ವಿಡಿಯೋ
ಆಗ ಅಲ್ಲಿಯೇ ಇದ್ದ ರಕ್ಷಿತಾ, ಸಿಟ್ಟಿನಲ್ಲಿ, ‘ನೀವು ನನಗೆ ಏನೂ ಬೇಡ. ನಿಮ್ಮ ಬಗ್ಗೆ ನನಗೆ ಯಾವ ಅಭಿಪ್ರಾಯವೂ ಇಲ್ಲ. ನನ್ನ ಗಂಡ ಅಥವಾ ಬಾಯ್ಫ್ರೆಂಡ್ ಆಗುವ ಯಾವ ಅರ್ಹತೆಯೂ ನಿಮಗೆ ಇಲ್ಲ. ನಾನು ಮದುವೆ ಆಗುವ ಹುಡುಗನಲ್ಲಿ ಏನೇನು ಗುಣಗಳು ಇರಬೇಕು ಎಂದುಕೊಂಡಿದ್ದೆನೊ ಅದು ಯಾವುದು ಸಹ ಗಿಲ್ಲಿ ಅಲ್ಲಿ ಇಲ್ಲ’ ಎಂದು ರಕ್ಷಿತಾ ಹೇಳಿದ್ದಾರೆ.
ಬಳಿಕ ಕಾವ್ಯಾ, ‘ಹಾಗಿದ್ದರೆ ಗಿಲ್ಲಿ ಥರ ಹುಡುಗ ಬೇಕು ಎಂದು ಹೇಳಿದ್ದೆಯಲ್ಲ?’ ಎಂದು ಕೇಳಿದಾಗ, ರಕ್ಷಿತಾ, ‘ಹೌದು, ಆದರೆ ಅವರ ಕೆಲವು ಸ್ವಭಾವ ಇದೆಯಲ್ಲ ಅದು ನನಗೆ ಬೇಡ. ನಾನು ಅವರಿಗೆ ಕೆಲವು ಸ್ವಭಾವಗಳನ್ನು ಬದಲಾಯಿಸಿಕೊಳ್ಳಿ ಎಂದು ಹೇಳುತ್ತಲೇ ಇರುತ್ತೇನೆ. ಗಿಲ್ಲಿ ಬಗ್ಗೆ ಕೆಲವು ಕಂಪ್ಲೆಟ್ಸ್ ಸಹ ಹೇಳಿದ್ದೇನೆ. ಅವೆಲ್ಲ ಗುಣಗಳು ನನಗೆ ಬೇಡ. ಹೌದು, ನಾನು ಇಷ್ಟಪಡುವ ಕೆಲವು ಗುಣಗಳು ಅವರ ಬಳಿ ಇವೆ ಆದರೆ ಎಲ್ಲವೂ ಇಲ್ಲ’ ಎಂದಿದ್ದಾರೆ ರಕ್ಷಿತಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ