‘ನಿಮ್ಮನ್ನು ಕಳಿಸಿಯೇ ನಾನು ಹೋಗೋದು’; ಅಶ್ವಿನಿ ಎದುರು ಶಪಥ ಮಾಡಿದ ರಕ್ಷಿತಾ

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ಇತ್ತೀಚಿನ ಟಾಸ್ಕ್‌ನಲ್ಲಿ ರಕ್ಷಿತಾ ಅವರು ಅಶ್ವಿನಿಗೆ ನೇರ ಸವಾಲೆಸೆದು, ಅವರ ವ್ಯಕ್ತಿತ್ವದ ಬಗ್ಗೆ ಪ್ರಶ್ನಿಸಿದರು. "ನಿಮ್ಮನ್ನು ಕಳಿಸಿಯೇ ನಾನು ಮನೆಯಿಂದ ಹೋಗುವುದು" ಎಂದು ರಕ್ಷಿತಾ ಶಪಥ ಮಾಡಿರುವುದು ಮನೆಯಲ್ಲಿ ಹೊಸ ಸಂಚಲನ ಮೂಡಿಸಿದೆ.

‘ನಿಮ್ಮನ್ನು ಕಳಿಸಿಯೇ ನಾನು ಹೋಗೋದು’; ಅಶ್ವಿನಿ ಎದುರು ಶಪಥ ಮಾಡಿದ ರಕ್ಷಿತಾ
ರಕ್ಷಿತಾ-ಅಶ್ವಿನಿ

Updated on: Nov 04, 2025 | 7:41 AM

ಬಿಗ್ ಬಾಸ್​ನಲ್ಲಿ ಅಶ್ವಿನಿ ಗೌಡ (Ashwini Gowda) ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಶುರುವಾದ ಶೀಥಲ ಸಮರ ಇನ್ನೂ ಕೊನೆಯಾಗಿಲ್ಲ. ಆರಂಭದ ವಾರಗಳಲ್ಲಿ ಅಶ್ವಿನಿ ಗೌಡ ಅವರು ಜಾನ್ವಿ ಜೊತೆ ಸೇರಿ ರಕ್ಷಿತಾಗೆ ಕಿರುಕುಳ ನೀಡುವ ಪ್ರಯತ್ನ ಮಾಡಿದ್ದರು. ಆ ಬಳಿಕ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡ ಬಳಿಕ ಕ್ಷಮೆ ಕೇಳಿದ್ದರು. ಈಗಲೂ ಇಬ್ಬರ ಮಧ್ಯೆ ಇರುವ ವೈಮನಸ್ಸು ಮುಂದುವರಿದಿದೆ.

ಅಶ್ವಿನಿ ಗೌಡ ಹಾಗೂ ರಕ್ಷಿತಾ ಮಧ್ಯೆ ಆಗಾಗ ಕಿರಿಕ್​ಗಳು ಆಗುತ್ತಲೇ ಇರುತ್ತವೆ. ಕಳೆದ ವಾರವೂ ಅಶ್ವಿನಿ ಹಾಗೂ ರಕ್ಷಿತಾ ಮಧ್ಯೆ ಕಿರಿಕ್ ಏರ್ಪಟ್ಟಿತ್ತು. ‘ನೀವು ವೋಟ್ ಹಾಕಿದರೆ ಅದನ್ನು ಕಾಲಲ್ಲಿ ತುಳಿದು ಹಾಕ್ತೀನಿ’ ಎಂದು ರಕ್ಷಿತಾ ಹೇಳಿದ್ದರು. ಆದರೆ, ಇದಕ್ಕೆ ಅಶ್ವಿನಿ ಗೌಡ ಅವರು ಬೇರೆಯದೇ ಅರ್ಥ ಕಲ್ಪಿಸಿದ್ದರು. ‘ಕಲಾವಿದೆ ಆಗಿರೋ ನನಗೆ ರಕ್ಷಿತಾ ಚಪ್ಪಲಿ ತೋರಿಸಿದ್ದಾರೆ’ ಎಂದು ಬಣ್ಣಿಸೋ ಪ್ರಯತ್ನ ಮಾಡಿದರು. ಆ ಬಳಿಕ ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆ ಆಯಿತು.

ಈಗ ವಾರದ ಮಧ್ಯದಲ್ಲಿ ಮತ್ತೆ ಈ ವಿಚಾರ ಚರ್ಚೆಗೆ ಬಂದಿದೆ. ಈ ಮನೆಯಲ್ಲಿ ಉಳಿದುಕೊಳ್ಳಲು ಯಾರು ಅರ್ಹರಲ್ಲ ಎಂದು ಹೇಳಬೇಕಿತ್ತು. ಜೊತೆಗೆ ಮುಖಕಕ್ಕೆ ಮಸಿ ಬಳಿಯಬೇಕಿತ್ತು. ಈ ವೇಳೆ ಅಶ್ವಿನಿ ಗೌಡ ಅವರು ರಕ್ಷಿತಾಗೆ ಹಾಗೂ ರಕ್ಷಿತಾ ಅವರು ಅಶ್ವಿನಿಗೆ ಮಸಿ ಬಳಿದರು. ಆಗ ನಡೆದ ಚರ್ಚೆಗಳು ಸಾಕಷ್ಟು ಕುತೂಹಲ ಮೂಡಿಸಿದೆ.

ರಕ್ಷಿತಾ ಅವರು ಅಶ್ವಿನಿ ಗೌಡ ಅವರನ್ನು ಆಯ್ಕೆ ಮಾಡಿ ಮುಖಕ್ಕೆ ಮಸಿ ಬಳಿದರು. ಈ ವೇಳೆ ಮಾತನಾಡಿದ ರಕ್ಷಿತಾ, ‘ನೀವು 100 ಸಿನಿಮಾ ಮಾಡಿರಬಹುದು. ಆದರೆ, ವ್ಯಕ್ತಿಯನ್ನು ಹಾಕಿ ತುಳೀತೀರಲ್ಲ. ಹೀಗಾಗಿ ನೀವು ಮಾಡಿರೋ ಸಿನಿಮಾಗಳೆಲ್ಲ ವೇಸ್ಟ್’ ಎಂದು ರಕ್ಷಿತಾ ನೇರವಾಗಿ ಹೇಳಿದರು. ಆ ಬಳಿಕ ಅಶ್ವಿನಿ ಗೌಡ ಅವರು ರಕ್ಷಿತಾನ ಕರೆದು ಮಸಿ ಬಳೆದರು.

ಇದನ್ನೂ ಓದಿ: ಸುದೀಪ್ ಎದುರೇ ರಿಷಾ ಎಲಿಮಿನೇಷನ್; ಸಾಲುಗಳ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್

ಈ ವೇಳೆ ಅಶ್ವಿನಿ ಹಾಗೂ ರಕ್ಷಿತಾ ಮಧ್ಯೆ ಸಾಕಷ್ಟು ಮಾತಿನ ಚಕಮಕಿಗಳು ನಡೆದವು. ಈ ವೇಳೆ ರಕ್ಷಿತಾ ಅವರು ಅಶ್ವಿನಿಗೆ ಒಂದು ಚಾಲೆಂಜ್ ಮಾಡಿದರು. ‘ನಿಮ್ಮನ್ನು ಕಳಿಸಿಯೇ ನಾನು ಹೊರಕ್ಕೆ ಹೋಗೋದು’ ಎಂದು ಶಪಥ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.