ಅಪ್ಪನ ಮುಂದೆ ವಿನಯ್​ ಬಗ್ಗೆ ದೂರು ಹೇಳಿದ ಸಂಗೀತಾ

|

Updated on: Dec 27, 2023 | 11:46 PM

Bigg Boss Kannada: ಬಿಗ್​ಬಾಸ್ ಮನೆಗೆ ಬಂದ ತಂದೆಯ ಬಳಿ ವಿನಯ್​ ಮೇಲೆ ದೂರು ಹೇಳಿದರು ಸಂಗೀತಾ.

ಅಪ್ಪನ ಮುಂದೆ ವಿನಯ್​ ಬಗ್ಗೆ ದೂರು ಹೇಳಿದ ಸಂಗೀತಾ
ವಿನಯ್-ಸಂಗೀತಾ
Follow us on

ಬಿಗ್​ಬಾಸ್ (BiggBoss) ಮನೆಗೆ ಸ್ಪರ್ಧಿಗಳ ಮನೆಯವರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಬುಧವಾರದ ಎಪಿಸೋಡ್​ನಲ್ಲಿ ಮನೆಗೆ ಕಾರ್ತಿಕ್, ಸಿರಿ ಹಾಗೂ ಸಂಗೀತಾ ಅವರುಗಳ ಕುಟುಂಬ ಸದಸ್ಯರು ಆಗಮಿಸಿದ್ದರು. ಇತರೆ ಸ್ಪರ್ಧಿಗಳ ಕುಟುಂಬದ ಒಬ್ಬರು ಅಥವಾ ಇಬ್ಬರು ಮನೆಗೆ ಬಂದರೆ ಸಂಗೀತಾ ಕುಟುಂಬದ ಎಲ್ಲರೂ ಮನೆಗೆ ಬಂದಿದ್ದರು. ಮನೆಯಲ್ಲಿ ಸಂಗೀತಾರ ವೈರಿ ಆಗಿರುವ ವಿನಯ್​, ಆರಂಭದಲ್ಲಿ ಸಂಗೀತಾರ ಕುಟುಂಬದವರನ್ನು ಎದುರುಗೊಳ್ಳದೆ ತುಕಾಲಿ ಹಾಗೂ ಮೈಖಲ್ ಜೊತೆ ಕೋಣೆಯಲ್ಲಿ ಕೂತಿದ್ದರು.

ಮೊದಲಿಗೆ ಸಂಗೀತಾರ ಅತ್ತಿಗೆ ಸುಚಿ ಅವರು ಬಂದರು. ಅದಾದ ಬಳಿಕ ಅವರ ಸಹೋದರ ಬಂದರು. ಸಂಗೀತಾರ ಅಣ್ಣ ವಿನಯ್ ಬಳಿ ಮಾತನಾಡಿ, ‘ನಾನು ನಿಮ್ಮ ಅಭಿಮಾನಿ’ ಎಂದರು. ಬಳಿಕ ‘ನೀವು ಬಹಳ ಚೆನ್ನಾಗಿ ಆಡುತ್ತಿದ್ದೀರಿ. ನಿಮ್ಮ ಸ್ಟ್ರಾಟಜಿ ಬಹಳ ಚೆನ್ನಾಗಿದೆ. ಆಟವೇ ಅಗ್ರೆಸ್ಸಿವ್ ಆಗಿದೆ. ಅವಳೂ (ಸಂಗೀತಾ) ಸಹ ಅಗ್ರೆಸ್ಸಿವ್ ನನಗೆ ನಿಮ್ಮ ಯೋಚನೆ ಅರ್ಥವಾಗುತ್ತದೆ. ನೀವು ಬಹಳ ಚೆನ್ನಾಗಿ ಆಡುತ್ತಿದ್ದೀರಿ’ ಎಂದು ಹುರಿದುಂಬಿಸಿದರು.

ಆ ಬಳಿಕ ಸಂಗೀತಾರ ತಾಯಿ ಮತ್ತು ತಂದೆ ಮನೆಗೆ ಬಂದರು. ಸಂಗೀತಾರ ತಂದೆ ಮಾಜಿ ಸೈನಿಕ, ಈಗಲೂ ಫಿಟ್ ಆಗಿ ಕುಸ್ತಿ ಪಟುವಿನಂತೆ ಇದ್ದಾರೆ, ಅವರ ಮೈಕಟ್ಟು ನೋಡಿ ಮನೆಯ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರು. ಸಂಗೀತಾ, ವಿನಯ್​ ಅನ್ನು ಉದ್ದೇಶಿಸಿ, ‘ನಮ್ಮ ಅಪ್ಪ ಬಂದಿದ್ದಾರೆ, ನಿಮಗೆ ಹೊಡೆಯುತ್ತಾರೆ, ಮಿಲ್ಟ್ರಿ ಮ್ಯಾನ್ ಅವರು ಗನ್ ತಂದಿದ್ದಾರೆ’ ಎಂದು ತಮಾಷೆಯಾಗಿ ದೂರು ಹೇಳಿದರು. ಸಂಗೀತಾರ ತಂದೆ ನಗುತ್ತಲೇ ಅಯ್ಯೋ ಹಾಗೆಲ್ಲ ಇಲ್ಲ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ತುಕಾಲಿ ಸಂತು ಬಿತ್ತು ಹೆಂಡತಿ ಕೈಲಿ ಏಟು

ಸಂಗೀತಾರ ಬಗ್ಗೆ ಗೊತ್ತಿರದ ವಿಷಯವನ್ನು ಮನೆಯ ಸದಸ್ಯರಿಗೆ ಹೇಳಬೇಕಿತ್ತು, ಈ ವೇಳೆ ಮಾತನಾಡಿದ ಅವರ ಸಹೋದರ, ‘‘ಸಂಗೀತಾ ಕಾರಿನ ಡ್ರೈವರ್​ ಸೀಟಿನಲ್ಲಿ ಕುಳಿತರೆ ಅವರ ಮೈಮೇಲಿ ಕಾಳಿ ಆವಾಹನೆ ಆಗುತ್ತದೆ. ಯಾರಾದರೂ ಎದುರಿನಿಂದ ಕಾರಿಗೆ ಅಡ್ಡ ಬಂದು, ಅಪ್ಪಿ ತಪ್ಪಿ ಸಂಗೀತಾ ಕಡೆ ಗುರಾಯಿಸಿದರೆ ಮುಗಿಯಿತು ಅವರ ಕತೆ ಒಮ್ಮೆಲೆ ಹಾರಿ ಬೀಳುತ್ತಾಳೆ’’ ಎಂದರು.

ಆಗ ಸಂಗೀತಾರ ತಂದೆ, ಸಂಗೀತಾ ವರ್ತೂರುಗೆ ಆವಾಜ್ ಹಾಕಿದ್ದನ್ನು ನೆನಪು ಮಾಡಿಕೊಂಡರು. ವರ್ತೂರು ಸಂತುಗೆ ಕೇಳಿದಳಲ್ಲ, ‘ಏನು ವರ್ತೂರು ಗುರಾಯಿಸುತ್ತಿದ್ದೀರ, ಏನ್ ಸಮಾಚಾರ’ ಎಂದು ಆಗ ವರ್ತೂರು ‘ಅಮ್ಮಾ ನಿಮ್ಮ ಸಹವಾಸ ಬೇಡ ಎಂದು ಕೈಮುಗಿದರಲ್ಲ’ ಅದೇ ಪರಿಸ್ಥಿತಿ ಆಗುತ್ತದೆ ಸಂಗೀತಾರ ಕಾರಿಗೆ ಎದುರು ಬಂದವರಿಗೆ ಎಂದರು. ಜೊತೆಗೆ ಸಂಗೀತಾ ಹೇಗೆ ಚಿಕ್ಕವಳಿದ್ದಾಗ, ‘ಪಿ ಸಂಗೀತಾ’ ಎಂದರೆ ಸಿಟ್ಟು ಮಾಡಿಕೊಳ್ಳುತ್ತಿದ್ದರು ಎಂಬುದನ್ನೂ ಸಹ ರಸವತ್ತಾಗಿ ವಿವರಿಸಿದರು. ಸಂಗೀತಾರ ತಂದೆ, ಡ್ರೋನ್ ಪ್ರತಾಪ್ ನಾಯಕನಾಗಬೇಕು ಎಂದು ಆಯ್ಕೆ ಮಾಡಿ ಕುಟುಂಬದವರನ್ನು ಕರೆದುಕೊಂಡು ಹೊರನಡೆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ