‘ಮಗನಿಂದಾಗಿ ನಾನು ಸೆಲೆಬ್ರಿಟಿ ಆದೆ, ಎಲ್ಲಾ ಕಡೆ ನನ್ನೇ ಕರೆಯುತ್ತಾರೆ’; ವರ್ತೂರು ಸಂತೋಷ್ ತಾಯಿ
ವರ್ತೂರು ಸಂತೋಷ್ ಅವರ ತಾಯಿ ಮಂಜುಳಾ ದೊಡ್ಮನೆಗೆ ಬಂದಿದ್ದಾರೆ. ಈ ವೇಳೆ ಅವರು ಕೆಲವು ಕಿವಿ ಮಾತು ಹೇಳಿದ್ದಾರೆ. ಆ ಬಳಿಕ ಹೊರಗೆ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದರು ಮಂಜುಳಾ.
ವರ್ತೂರು ಸಂತೋಷ್ (Varthur Santosh) ಅವರು ಬಿಗ್ ಬಾಸ್ಗೆ ಬರುವುದಕ್ಕೂ ಮೊದಲು ಒಂದಷ್ಟು ಹೆಸರು ಮಾಡಿದ್ದರು. ಹಳ್ಳಿಕಾರ್ ತಳಿಯ ಹೋರಿಗಳ ಸಂರಕ್ಷಣೆಗೆ ಅವರು ಶ್ರಮಿಸಿದ್ದಾರೆ. ಈ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ಗೆ ಬಂದ ಬಳಿಕ ಅವರ ಜನಪ್ರಿಯತೆ ಹೆಚ್ಚಿದೆ. ವಿಶೇಷ ಎಂದರೆ ವರ್ತೂರು ಸಂತೋಷ್ ಜೊತೆ ಅವರ ತಾಯಿ ಮಂಜುಳಾ ಜನಪ್ರಿಯತೆಯೂ ಹೆಚ್ಚಿದೆ. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಅವರು ಹೇಳಿದ್ದಾರೆ.
ಬಿಗ್ ಬಾಸ್ನಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬದವರು ಬಂದು ಮಾತನಾಡಿ ಹೋಗುತ್ತಿದ್ದಾರೆ. ವರ್ತೂರು ಸಂತೋಷ್ ಅವರ ತಾಯಿ ಮಂಜುಳಾ ದೊಡ್ಮನೆಗೆ ಬಂದಿದ್ದಾರೆ. ಈ ವೇಳೆ ಅವರು ಕೆಲವು ಕಿವಿ ಮಾತು ಹೇಳಿದ್ದಾರೆ. ‘ಎಲ್ಲರ ಜೊತೆಯೂ ಮಾತನಾಡು. ಕೋಪದಿಂದ ಆಡಬೇಡಿ’ ಎಂದು ಮಂಜುಳಾ ಅವರು ವರ್ತೂರಿಗೆ ಹೇಳಿದರು. ಆ ಬಳಿಕ ಹೊರಗೆ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದರು ಮಂಜುಳಾ.
‘ಸಂತೊಷನ ಬದಲಿಗೆ ನಾನೇ ಎಲ್ಲಾ ಕಾರ್ಯಕ್ರಮಕ್ಕೂ ತೆರಳುತ್ತಿದ್ದೇನೆ. ನನ್ನನ್ನೇ ಕರೆಯುತ್ತಿದ್ದಾರೆ. ನಾನು ಸೆಲೆಬ್ರಿಟಿ ಆಗಿದ್ದೇನೆ. ನನ್ನ ಮಗ ಎಂದು ನಾನು ಎಲ್ಲ ಕಡೆ ಪರಿಚಯಿಸುತ್ತಿದ್ದೆ. ಆದರೆ, ಈಗ ಎಲ್ಲವೂ ಬದಲಾಗಿದೆ. ನೀವು ಸಂತೋಷ್ ಅವರ ತಾಯಿನಾ ಎಂದು ಕೇಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ವರ್ತೂರು ಅವರ ತಾಯಿನಾ ಎನ್ನುತ್ತಾರೆ’ ಎಂದು ಖುಷಿಯಿಂದ ಬಿಗ್ ಬಾಸ್ನಲ್ಲಿ ವಿವರಿಸಿದರು ಮಂಜುಳಾ.
ಇದನ್ನೂ ಓದಿ: ‘ವರ್ತೂರು ಸಂತೋಷ್ಗೆ ಬಿಗ್ ಬಾಸ್ ಗೆಲ್ಲುವ ಚಾನ್ಸ್ ಇದೆ’: ಅವಿನಾಶ್ ಶೆಟ್ಟಿ
ಉಳಿದ ಸೀಸನ್ಗಳಿಗಿಂತ ಈ ಬಾರಿಯ ಬಿಗ್ ಬಾಸ್ ಸೀಸನ್ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಒಳ್ಳೆಯ ಟಿಆರ್ಪಿ ಕೂಡ ಬರುತ್ತಿದೆ. ಈ ಬಾರಿ ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶವಿದೆ ಅನ್ನೋದು ವಿಶೇಷ. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತಿದೆ ಎಂಬುದನ್ನು ಲೈವ್ನಲ್ಲೇ ತಿಳಿದುಕೊಳ್ಳಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ