ಕಾರ್ತಿಕ್, ಸಿರಿಗೆ ಸಖತ್ ಶಾಕ್ ಕೊಟ್ಟ ಬಿಗ್​ಬಾಸ್

Bigg Boss Kannada: ಬಿಗ್​ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಬಂದಿದ್ದರು. ಈ ವೇಳೆ ಕಾರ್ತಿಕ್ ಹಾಗೂ ಸಿರಿ ಅವರಿಗೆ ಬಿಗ್​ಬಾಸ್ ಒಳ್ಳೆಯ ಶಾಕ್ ನೀಡಿದರು.

ಕಾರ್ತಿಕ್, ಸಿರಿಗೆ ಸಖತ್ ಶಾಕ್ ಕೊಟ್ಟ ಬಿಗ್​ಬಾಸ್
ಕಾರ್ತಿಕ್-ಸಿರಿ
Follow us
ಮಂಜುನಾಥ ಸಿ.
|

Updated on: Dec 27, 2023 | 11:27 PM

ಬಿಗ್​ಬಾಸ್ (BiggBoss) ಮನೆಯಲ್ಲಿ ಈ ವಾರ ಟಾಸ್ಕ್​ಗಳಿಲ್ಲ ಬದಲಿಗೆ ಮನೆಯ ಸದಸ್ಯರ ಕುಟುಂಬದವರು ಒಬ್ಬೊಬ್ಬರಾಗಿ ಮನೆಗೆ ಭೇಟಿ ನೀಡಿ ತಮ್ಮವರನ್ನು ಭೇಟಿ ಆಗುತ್ತಿದ್ದಾರೆ. ನಮ್ರತಾ, ವರ್ತೂರು ಸಂತು, ತುಕಾಲಿ ಸಂತು ಅವರುಗಳ ಮನೆಯವರು ಮಂಗಳವಾರದ ಎಪಿಸೋಡ್​ನಲ್ಲಿ ಮನೆಗೆ ಭೇಟಿ ನೀಡಿದ್ದರು. ತುಕಾಲಿ ಸಂತು ಪತ್ನಿ ಮಾನಸ ಅಂತೂ ಮನೆಯಲ್ಲಿ ಹಲ್​-ಚಲ್ ಎಬ್ಬಿಸಿದ್ದರು. ಇಂದು ಸಹ ಕೆಲ ಸ್ಪರ್ಧಿಗಳ ಕುಟುಂಬದವರು ಬಂದಿದ್ದರು. ಈ ನಡುವೆ ಕಾರ್ತಿಕ್ ಹಾಗೂ ಸಿರಿ ಅವರಿಗೆ ಬಿಗ್​ಬಾಸ್ ಸಖತ್ ಶಾಕ್ ಕೊಟ್ಟರು.

ಕಾರ್ತಿಕ್​ರ ತಾಯಿ ಮನೆಯ ಒಳಗೆ ಬರುವ ಮುಂಚೆ ಹಾಡೊಂದನ್ನು ಹಾಡಿದರು. ಆಗಲೇ ಕಾರ್ತಿಕ್ ಭಾವುಕರಾಗಿಬಿಟ್ಟರು. ಅದಾದ ಬಳಿಕ ಕಾರ್ತಿಕ್​ ತಾಯಿಯವರು ಮನೆಗೆ ಎಂಟ್ರಿ ಆಗುತ್ತಿದ್ದಂತೆ ಮನೆಯ ಸದಸ್ಯರನ್ನು ತಟಸ್ಥವಾಗಿರುವಂತೆ ಬಿಗ್​ಬಾಸ್ ಆದೇಶಿಸಿದರು. ಈ ಕಾರಣಕ್ಕೆ ಸ್ವತಃ ಕಾರ್ತಿಕ್ ಸಹ ತಾಯಿಯವರನ್ನು ಸರಿಯಾಗಿ ಮಾತನಾಡಿಸಲು, ತಬ್ಬಿಕೊಳ್ಳಲು ಆಗಲಿಲ್ಲ. ಎಲ್ಲರೂ ತಟಸ್ಥವಾಗಿರುವಾಗಲೇ ಕಾರ್ತಿಕ್​ರ ತಾಯಿ ಮನೆಯಿಂದ ಹೊರಗೆ ಹೋಗಿಬಿಟ್ಟರು. ಇದು ಕಾರ್ತಿಕ್​ಗೆ ತೀವ್ರ ದುಃಖ ತಂದಿತು.

ಅದಾದ ಬಳಿಕ ಸಿರಿ ಅವರನ್ನು ಸೀಕ್ರೆಟ್ ರೂಂಗೆ ಕರೆದ ಬಿಗ್​ಬಾಸ್, ನಿಮ್ಮ ಕುಟುಂಬದಿಂದ ಯಾರೂ ಬರುತ್ತಿಲ್ಲ, ನೀವೇನಾದರೂ ಸಂದೇಶ ನೀಡುವಂತಿದ್ದರೆ ನೀಡಿ ಎಂದರು. ಅಲ್ಲಿಯೇ ಅಳಲು ಆರಂಭಿಸಿದ ಸಿರಿ, ‘ಅವರಿಗೆ ಕಷ್ಟವಾಗಿದ್ದರೆ ಪರವಾಗಿಲ್ಲ, ರಿಸ್ಕ್ ತೆಗೆದುಕೊಳ್ಳುವುದು ಬೇಡ’ ಎಂದಷ್ಟೆ ಹೇಳಿ ಹೊರಗೆ ಹೋದರಾದರು. ಸಿರಿ ಅವರಿಗೆ ದುಃಖ ತಡೆದುಕೊಳ್ಳಲಾಗಲಿಲ್ಲ. ನಾನು ಹೊರಗೆ ಹೋಗುತ್ತೇನೆ, ನನ್ನನ್ನು ಕಳಿಸಿಬಿಡಿ ಎಂದು ಅಳಲು ಪ್ರಾರಂಭಿಸಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ತುಕಾಲಿ ಸಂತು ಬಿತ್ತು ಹೆಂಡತಿ ಕೈಲಿ ಏಟು

ಆದರೆ ಅದಾಗಲೇ ಸಿರಿ ಅವರ ಸಹೋದರಿ ಮನೆಯ ಒಳಗೆ ಬಂದು ಬಚ್ಚಿಟ್ಟುಕೊಂಡಿದ್ದರು. ಅಳುತ್ತಿದ್ದ ಸಿರಿಯನ್ನು ಅವರು ಎದುರಾದಾಗ ಸಿರಿ ಒಮ್ಮೆಲೆ ಖುಷಿಯಲ್ಲಿ ಜಿಗಿದು ನಿಂತರು. ಅದಾದ ಬಳಿಕ ಅವರ ಮೆಚ್ಚಿನ ಮಗಳು (ಸಹೋದರಿಯ ಮಗಳು) ಮನೆ ಪ್ರವೇಶಿಸಿದರು. ಆಗಂತೂ ಸಿರಿ ಅವರ ಮುಖ ಇನ್ನಷ್ಟು ಅರಳಿತು. ಕೊನೆಗೆ ಎಲ್ಲರೂ ಬಿಗ್​ಬಾಸ್​ಗೆ ಧನ್ಯವಾದ ಹೇಳಿದರು.

ಅದಾದ ಬಳಿಕ ಲಾಕರ್ ರೂಂನ ಬೆಲ್ ಭಾರಿಸಿತು, ಏನು ಬಂದಿದೆಯೋ ಎಂಬ ನಿರೀಕ್ಷೆಯಲ್ಲಿ ಹೋದವರಿಗೆ ಅಚ್ಚರಿ ಕಾದಿತ್ತು, ಅಲ್ಲಿ ಕಾರ್ತಿಕ್​ರ ತಾಯಿ ನಿಂತಿದ್ದರು. ಇದಕ್ಕೂ ಮುಂಚೆ ಹಾಗೆ ಬಂದು-ಹೀಗೆ ಹೋಗಿದ್ದ ಕಾರ್ತಿಕ್​ರ ತಾಯಿ ಮತ್ತೆ ಬಂದಿದ್ದು ಕಾರ್ತಿಕ್​ಗೆ ಬಹಳ ಖುಷಿಯಾಯಿತು. ಮನೆಯ ಮಂದಿಗೆ ಅವರನ್ನು ಪರಿಚಯಿಸುವ ಜೊತೆಗೆ ತಮ್ಮ ತಾಯಿಗಾಗಿ ಒಂದು ಮನೆ ಕಟ್ಟುವ ಕನಸು ತಮ್ಮದೆಂದು ಕಾರ್ತಿಕ್ ಹೇಳಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ