ಅದ್ದೂರಿಯಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ಶೋಗೆ ಚಾಲನೆ ಸಿಕ್ಕಿದೆ. ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳು ಬಿಗ್ ಬಾಸ್ (Bigg Boss Kannada) ಮನೆಯೊಳಗೆ ಎಂಟ್ರಿ ನೀಡಿದ್ದಾರೆ. ದೊಡ್ಮನೆಗೆ ಹೋಗುವುದಕ್ಕೂ ಮುನ್ನವೇ ವೇದಿಕೆಯಲ್ಲಿ ಈ ಸ್ಪರ್ಧಿಗಳು ಅರ್ಹರು ಹೌದೋ ಅಲ್ಲವೋ ಎಂಬುದಕ್ಕೆ ಓಟಿಂಗ್ ನಡೆಯಿತು. ಅಗತ್ಯ ಇರುವಷ್ಟು ಓಟ್ ಪಡೆದವರಿಗೆ ಮಾತ್ರ ಬಿಗ್ ಬಾಸ್ ಮನೆಯನ್ನು ಪ್ರವೇಶಿಸುವ ಚಾನ್ಸ್ ಸಿಕ್ಕಿತು. ಮೂರನೇ ಸ್ಪರ್ಧಿಯಾಗಿ ರ‍್ಯಾಪ್ ಸಿಂಗರ್ ಈಶಾನಿ (Rap Singer Eshani) ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಕಿಚ್ಚ ಸುದೀಪ್ ಅವರು ಎಂದಿನ ಉತ್ಸಾಹದಲ್ಲಿ ಶೋ ನಿರೂಪಣೆ ಮಾಡುತ್ತಿದ್ದಾರೆ.
ಮೊದಲ ಸ್ಪರ್ಧಿಯಾಗಿ ನಟಿ ನಮ್ರತಾ ಗೌಡ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ನಂತರ ಎರಡನೇ ಸ್ಪರ್ಧಿಯಾಗಿ ಸ್ನೇಹಿತ್ ಗೌಡ ಅವರು ದೊಡ್ಮನೆ ಪ್ರವೇಶಿಸಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಮೂರನೇ ಸ್ಪರ್ಧಿ ಈಶಾನಿ. ಇದು 10ನೇ ಸೀಸನ್ ಆಗಿರುವುದರಿಂದ ಈ ಬಾರಿ ಅದ್ದೂರಿತನ ಜಾಸ್ತಿಯೇ ಇದೆ. ವಿವಿಧ ಕ್ಷೇತ್ರಗಳ ಸ್ಪರ್ಧಿಗಳು ದೊಡ್ಮನೆಯಲ್ಲಿ ಪೈಪೋಟಿ ನೀಡುವ ಅವಕಾಶ ಪಡೆದಿದ್ದಾರೆ. ಈ ಸಲ ಮನೆಯ ವಿನ್ಯಾಸ ಸಖತ್ ಗ್ರ್ಯಾಂಡ್ ಆಗಿದೆ. 100 ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ. ಪ್ರತಿ ದಿನದ ಎಪಿಸೋಡ್ಗಳು ‘ಕಲರ್ಸ್ ಕನ್ನಡ’ ವಾಹಿಯಲ್ಲಿ ರಾತ್ರಿ 9.30ಕ್ಕೆ ಬಿತ್ತರ ಆಗಲಿವೆ.
ಲಾಸ್ ಏಂಜಲಿಸ್ನಲ್ಲಿ ಇದ್ದ ಈಶಾನಿ ಅವರು ನಂತರ ದುಬೈಗೆ ಹೋದರು. ಕನ್ನಡದ ಹುಡುಗಿಯೇ ಆದ ಅವರು ಮೂಲತಃ ಮೈಸೂರಿನವರು. ಬೆಳೆದಿದ್ದು ಬೆಂಗಳೂರು, ಲಾಸ್ ಎಂಜಲೀಸ್ ಮತ್ತು ದುಬೈನಲ್ಲಿ. ಬಳಿಕ ಬಿಗ್ ಬಾಸ್ಗೆ ಹೋಗಬೇಕು ಎಂದು ಅವರು ತೀರ್ಮಾನಿಸಿದರು. ಹೈಸ್ಕೂಲ್ನಲ್ಲಿ ಇದ್ದಾಗಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು ನಂತರ ರ‍್ಯಾಪ್ ಸಿಂಗರ್ ಆಗಿ ಬೆಳೆದರು. ಬಿಗ್ ಬಾಸ್ ವೇದಿಕೆಯಲ್ಲಿ 83 ಪರ್ಸೆಂಟ್ ಓಟ್ ಪಡೆದ ಅವರಿಗೆ ದೊಡ್ಮನೆ ಒಳಗೆ ಪ್ರವೇಶ ಮಾಡುವ ಅವಕಾಶ ಸಿಕ್ಕಿದೆ.
ಇದನ್ನೂ ಓದಿ: Namratha Gowda: ‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೊದಲ ಸ್ಪರ್ಧಿ ನಮ್ರತಾ ಗೌಡ; ನಟಿಯ ಪರಿಚಯ ಇಲ್ಲಿದೆ..
ಅಪ್ಪ-ಅಮ್ಮನನ್ನು ಬಿಟ್ಟು ಬಿಗ್ ಬಾಸ್ ಮನೆಯೊಳಗೆ ಹೋಗಲಾರದೇ ಈಶಾನಿ ಅವರು ವೇದಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತರು. ಸಿಕ್ಕಾಪಟ್ಟೆ ಎಮೋಷನಲ್ ಆದ ಅವರನ್ನು ಆತ್ಮೀಯವಾಗಿ ಬಿಗ್ ಬಾಸ್ ಮನೆಗೆ ಕಳಿಸಿಕೊಡಲಾಯಿತು. ಈಶಾನಿ ಅವರು ವಿದೇಶದಲ್ಲಿ ಬೆಳೆದವರ ಆದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.