ಕೊನೆಯ ವಾರದಲ್ಲಿ ನಾಮಿನೇಟ್ ಆಗಿದ್ದು ಯಾರು? ಅಚ್ಚರಿಯ ನಾಮಿನೇಷನ್ಸ್

Bigg Boss Kannada Season 10: ಬಿಗ್​ಬಾಸ್​ ಸೀಸನ್ 10ರ ಕೊನೆಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಆಗಿದ್ದು ಯಾರ್ಯಾರು?

ಕೊನೆಯ ವಾರದಲ್ಲಿ ನಾಮಿನೇಟ್ ಆಗಿದ್ದು ಯಾರು? ಅಚ್ಚರಿಯ ನಾಮಿನೇಷನ್ಸ್

Updated on: Jan 16, 2024 | 9:53 PM

ಬಿಗ್​ಬಾಸ್ (BiggBoss)​ ಫಿನಾಲೆಗೆ ಇನ್ನೊಂದು ವಾರವಷ್ಟೆ ಉಳಿದಿದೆ. ಫಿನಾಲೆ ವಾರಕ್ಕೆ ಉಳಿದುಕೊಳ್ಳಲು ಮನೆಯ ಸ್ಪರ್ಧಿಗಳು ಶಕ್ತಿ ಮೀರಿ ಯತ್ನಿಸುತ್ತಿದ್ದಾರೆ. ಸಂಗೀತಾ ಈಗಾಗಲೇ ಫಿನಾಲೆ ತಲುಪಿದ್ದಾರೆ. ಮಂಗಳವಾರದ ಎಪಿಸೋಡ್​ನಲ್ಲಿ ನಾಮಿನೇಷನ್ಸ್​ ಪ್ರಕ್ರಿಯೆ ನಡೆದಿದ್ದು, ಇದು ಬಿಗ್​ಬಾಸ್ ಮನೆಯ ಕೊನೆಯ ನಾಮಿನೇಷನ್ಸ್ ಆಗಿದೆ. ಈ ವಾರ ಕೆಲವು ಅಚ್ಚರಿಯ ನಾಮಿನೇಷನ್​ ಆಗಿದೆ.

ಸ್ಪರ್ಧಿಗಳು ಯಾರನ್ನು ನಾಮಿನೇಟ್ ಮಾಡುತ್ತಾರೆ ಅವರ ಹೆಸರು ತೆಗೆದುಕೊಂಡು ಅವರ ಫೋಟೊವನ್ನು ಉರಿಯುತ್ತಿರುವ ಬೆಂಕಿಗೆ ಹಾಕಬೇಕಿತ್ತು. ಅದರಂತೆ ವರ್ತೂರು ಸಂತು ನಮ್ರತಾ ಹಾಗೂ ವಿನಯ್ ಹೆಸರು ಹೇಳಿದರು. ವಿನಯ್, ವರ್ತೂರು ಸಂತು ಹಾಗೂ ಪ್ರತಾಪ್ ಹೆಸರು ಹೇಳಿದರು. ಡ್ರೋನ್ ಪ್ರತಾಪ್, ಮಾಮೂಲಿನಂತೆ ತುಕಾಲಿ ಸಂತು ಹಾಗೂ ವಿನಯ್ ಹೆಸರು ಹೇಳಿದರು.

ತನಿಷಾ, ಕಾರ್ತಿಕ್ ಹಾಗೂ ನಮ್ರತಾ ಹೆಸರು ಹೇಳಿದರು. ನಮ್ರತಾ, ತನಿಷಾ ಹಾಗೂ ವರ್ತೂರು ಹೆಸರು ಹೇಳಿದರು. ಕಾರ್ತಿಕ್, ಡ್ರೋನ್ ಪ್ರತಾಪ್ ಹೆಸರು ಹೇಳಿದರು. ಆದರೆ ಎಲ್ಲರಿಗೂ ಅಚ್ಚರಿ ತಂದಿದ್ದು ಸಂಗೀತಾ ಮಾಡಿದ ನಾಮಿನೇಷನ್ಸ್. ಈ ಹಿಂದೆ ಅವರೇ ಉಳಿಸಿದ್ದ ಡ್ರೋನ್ ಪ್ರತಾಪ್​ರ ಹೆಸರನ್ನು ಸಂಗೀತಾ ಹೇಳಿದರು. ಹಲವು ವಾರಗಳ ಕಾಲ ಗೆಳತಿ ಆಗಿದ್ದ ತನಿಷಾರನ್ನು ಸಹ ಅವರು ನಾಮಿನೇಟ್ ಮಾಡಿದರು.

ಇದನ್ನೂ ಓದಿ:ಈ ಸೀಸನ್​ನಲ್ಲಿ ಬಿಗ್​ಬಾಸ್ ಮನೆಗೆ ಬಂದ ಅತಿಥಿಗಳ್ಯಾರು? ಇಲ್ಲಿದೆ ಪಟ್ಟಿ

ನಾಮಿನೇಷನ್ ಪ್ರಕ್ರಿಯೆ ಮುಗಿದಾಗ ಬಿಗ್​ಬಾಸ್ ನಾಮಿನೇಟ್ ಆದವರ ಹೆಸರು ಘೋಷಿಸಿದರು. ತನಿಷಾ, ಕಾರ್ತಿಕ್, ನಮ್ರತಾ, ಡ್ರೋನ್ ಪ್ರತಾಪ್, ವಿನಯ್ ಹಾಗೂ ತನಿಷಾ ಅವರುಗಳು ಫಿನಾಲೆಗೆ ಮುಂಚಿನ ಕೊನೆಯ ಎಲಿಮಿನೇಷನ್​ಗೆ ನಾಮಿನೇಟ್ ಆದರು.

ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ತುಕಾಲಿ ಸಂತು ಆಶ್ಚರ್ಯ ವ್ಯಕ್ತಪಡಿಸಿದರು. ಏಕೆಂದರೆ ನಾಮಿನೇಷನ್​ನಲ್ಲಿ ಅವರ ಹೆಸರು ಇರಲಿಲ್ಲ. ಇದು ಸ್ವತಃ ಅವರಿಗೆ ಆಶ್ಚರ್ಯವಾಯ್ತು. ಮನೆಯ ಸದಸ್ಯರು ಸಹ ತುಕಾಲಿ ಸಂತುಗೆ ಶುಭಾಶಯಗಳನ್ನು ಹೇಳಿದರು.

ಕಳೆದ ವಾರವೇ ತುಕಾಲಿ ಸಂತು ನಾಮಿನೇಟ್ ಆಗಿದ್ದರು. ಅಂತಿಮವಾಗಿ ತುಕಾಲಿ ಸಂತು ಹಾಗೂ ವರ್ತೂರು ಸಂತು ಅವರುಗಳು ಎಲಿಮಿನೇಷನ್​ಗೆ ಉಳಿದಿದ್ದರು. ಆದರೆ ಸುದೀಪ್ ಅವರು ಎಲಿಮಿನೇಷನ್ ಮಾಡಿರಲಿಲ್ಲ. ಆ ಕಾರಣ ಇಬ್ಬರೂ ಸಹ ಸೇವ್ ಆಗಿದ್ದರು. ಆದರೆ ಈ ವಾರ ವರ್ತೂರು ಸಂತು ನಾಮಿನೇಟ್ ಆದರೆ ತುಕಾಲಿ ಸಂತು ಸೇವ್ ಆಗಿದ್ದಾರೆ. ಆ ಮೂಲಕ ತುಕಾಲಿ ಸಂತು ಫಿನಾಲೆ ವಾರಕ್ಕೆ ಹೋಗುವ ಸಾಧ್ಯತೆ ಇದೆ. ಅಥವಾ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಹೊರ ಹೋದರೂ ಆಶ್ಚರ್ಯವಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ