‘ಕರುಳು ತೆಗೆದುಕೊಟ್ಟರೂ ಹಗ್ಗ ಅಂತಾನೆ’; ಪ್ರತಾಪ್ ಬಗ್ಗೆ ಸಂಗೀತಾ ಅಸಮಾಧಾನ
ಪ್ರತಾಪ್ ವಿರುದ್ಧ ಸಂಗೀತಾ ರೆಬೆಲ್ ಆಗಿದ್ದಾರೆ. ಈ ವಾರ ಸಂಗೀತಾ ಅವರು ಪ್ರತಾಪ್ನ ನಾಮಿನೇಟ್ ಮಾಡಿದ್ದಾರೆ. ಈ ಮೂಲಕ ಪ್ರತಾಪ್ ಮೇಲೆ ಎಷ್ಟು ಕೋಪ ಇದೆ ಎಂಬುದನ್ನು ಅವರು ತೋರಿಸಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಸಂಗೀತಾ ಶೃಂಗೇರಿ (Sangeetha Sringeri) ಹಾಗೂ ಪ್ರತಾಪ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಇತ್ತೀಚೆಗೆ ಅದು ಹಾಳಾಗುತ್ತಿದೆ. ಪ್ರತಾಪ್ ಮಾಡುತ್ತಿರುವ ಕೆಲವು ತಪ್ಪುಗಳಿಂದ ಸಂಗೀತಾ ಶೃಂಗೇರಿ ಅಸಮಾಧಾನಗೊಂಡಿದ್ದಾರೆ. ಹಾಗಂತ ಅವರು ಇದನ್ನು ಮುಚ್ಚಿಟ್ಟುಕೊಂಡಿಲ್ಲ. ಸಮಯ ಸಿಕ್ಕಾಗಲೆಲ್ಲ ಪ್ರತಾಪ್ಗೆ ಈ ಬಗ್ಗೆ ತಿದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಪ್ರತಾಪ್ ಇದನ್ನು ಕೇಳಿಸಿಕೊಳ್ಳಲೇ ಇಲ್ಲ. ಇದರಿಂದ ಸಂಗೀತಾ ಶೃಂಗೇರಿ ಅವರು ಅಸಮಾಧಾನಗೊಂಡಿದ್ದಾರೆ. ಮುಖಕ್ಕೆ ಹೊಡೆದಂತೆ ಅವರು ಮಾತನಾಡಿದ್ದಾರೆ.
ಪ್ರತಾಪ್ ಬಗ್ಗೆ ಸಂಗೀತಾಗೆ ಒಳ್ಳೆಯ ಅಭಿಪ್ರಾಯ ಇತ್ತು. ಈ ಕಾರಣಕ್ಕೆ ಕಳೆದ ವಾರ ಪ್ರತಾಪ್ನ ನಾಮಿನೇಷನ್ನಿಂದ ಅವರು ಬಚಾವ್ ಮಾಡಿದ್ದರು. ಇದಕ್ಕೆ ಸಂತೋಷ ವ್ಯಕ್ತಪಡಿಸುವ ಬದಲು ಪ್ರತಾಪ್ ಅವರು ಹಳೆಯ ಘಟನೆ ಇಟ್ಟುಕೊಂಡು ಸಂಗೀತಾನ ಪ್ರಶ್ನೆ ಮಾಡೋಕೆ ಶುರು ಮಾಡಿದರು. ಇದು ಸಂಗೀತಾ ಕೋಪಕ್ಕೆ ಕಾರಣವಾಯ್ತು. ಆ ಬಳಿಕ ಸಂಗೀತಾ ರೆಬೆಲ್ ಆದರು. ಈ ವಾರ ಸಂಗೀತಾ ಅವರು ಪ್ರತಾಪ್ನ ನಾಮಿನೇಟ್ ಮಾಡಿದ್ದಾರೆ. ಈ ಮೂಲಕ ಪ್ರತಾಪ್ ಮೇಲೆ ಎಷ್ಟು ಕೋಪ ಇದೆ ಎಂಬುದನ್ನು ತೋರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ರೀಯೂನಿಯನ್ ನಡೆದಿದೆ. ನೀತು ವನಜಾಕ್ಷಿ ಕೂಡ ದೊಡ್ಮನೆಗೆ ಬಂದಿದ್ದಾರೆ. ನೀತು ಹಾಗೂ ಪ್ರತಾಪ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಈ ಕಾರಣಕ್ಕೆ ಪ್ರತಾಪ್ ಹಾಗೂ ಸಂಗೀತಾನ ಒಟ್ಟಿಗೆ ಕರೆದು ಬುದ್ಧಿವಾದ ಹೇಳಿದರು. ‘ನಿನಗೆ ಗ್ರ್ಯಾಟಿಟ್ಯೂಡ್ ಇರಬೇಕು. ನಿನಗೋಸ್ಕರ ಅವರು ಇಷ್ಟೆಲ್ಲ ಮಾಡಿದಾರೆ. ಅವರನ್ನು ದೂರ ಮಾಡಿದರೆ ನೀನು ಏಕಾಂಗಿ ಆಗ್ತೀಯಾ’ ಎಂದು ಪ್ರತಾಪ್ಗೆ ಹೇಳಿದರು ನೀತು.
ಇದನ್ನೂ ಓದಿ: ಕಾರ್ತಿಕ್ ಮಹೇಶ್-ಸಂಗೀತಾ ಶೃಂಗೇರಿ ಒಟ್ಟಾಗಿ ತನಿಷಾ ಕುಪ್ಪಂಡ ವಿರುದ್ಧ ತಿರುಗಿ ಬಿದ್ದಿದ್ದು ಯಾಕೆ?
ಸಂಗೀತಾ ಈ ವಿಚಾರ ಮಾತನಾಡೋಕೆ ಸಿದ್ಧವಿರಲಿಲ್ಲ. ‘ಈ ಖುಷಿಯ ಸಂದರ್ಭದಲ್ಲಿ ಈ ಬಗ್ಗೆ ಮಾತಾಡೋಕೆ ಇಷ್ಟ ಇಲ್ಲ. ಪ್ರತಾಪ್ ತುಂಬಾನೇ ಬದಲಾಗಿದ್ದಾರೆ. ಅವನ ವಿರುದ್ಧ ಏನಾದರೂ ಹೇಳಿದರೆ ಸಿಟ್ಟು ಬರುತ್ತದೆ. ಕರುಳು ತೆಗೆದುಕೊಟ್ಟರೂ ಹಗ್ಗ ಅಂತಾನೆ. ಅಷ್ಟು ಬದಲಾಗಿದ್ದಾನೆ’ ಎಂದು ಅಸಮಾಧಾನ ಹೊರಹಾಕಿದರು ಸಂಗೀತಾ. ಬಿಗ್ ಬಾಸ್ ಫಿನಾಲೆ ಹಂತ ತಲುಪಿದೆ. 24 ಗಂಟೆ ಜಿಯೋ ಸಿನಿಮಾದಲ್ಲಿ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:53 am, Wed, 17 January 24