Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಾಪ್ ಬಗ್ಗೆ ಈಶಾನಿ ಕೀಳು ಮಾತು; ‘ಅವರನ್ನು ಒಳಗೆ ಬಿಡಲೇ ಬಾರದಿತ್ತು’ ಎಂದ ವೀಕ್ಷಕರು

ಈಶಾನಿ ಕೂಡ ಪ್ರತಾಪ್​ ಬಗ್ಗೆ ಕೀಳಾಗಿ ಮಾತುಗಳನ್ನು ಆಡಿದ್ದಾರೆ. ಪ್ರತಾಪ್ ಹೇಳಿದ ಮಾತಿನ ಬಗ್ಗೆ ಅವರಿಗೆ ಕೋಪ ಇದೆ. ಇದನ್ನು ಅವರು ಬೇರೆ ರೀತಿಯಲ್ಲಿ ಹೇಳಿದ್ದಾರೆ. ಇದನ್ನು ಅನೇಕರು ವಿರೋಧಿಸಿದ್ದಾರೆ.

ಪ್ರತಾಪ್ ಬಗ್ಗೆ ಈಶಾನಿ ಕೀಳು ಮಾತು; ‘ಅವರನ್ನು ಒಳಗೆ ಬಿಡಲೇ ಬಾರದಿತ್ತು’ ಎಂದ ವೀಕ್ಷಕರು
ಈಶಾನಿ-ಪ್ರತಾಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 17, 2024 | 12:25 PM

ಈಶಾನಿ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿದ್ದಾಗ ಅನೇಕರಿಗೆ ಟಾಕ್ಸಿಕ್ ಫೀಲ್ ಆಗಿದ್ದಿದೆ. ಅವರು ಒಂದು ತಿಂಗಳಿಗೂ ಅಧಿಕ ಕಾಲ ದೊಡ್ಮನೆಯಲ್ಲಿದ್ದು ಔಟ್ ಆಗಿದ್ದರು. ಅವರು ನಡೆದುಕೊಳ್ಳುತ್ತಿದ್ದ ರೀತಿ ಅನೇಕರಿಗೆ ಇಷ್ಟ ಆಗುತ್ತಿರಲಿಲ್ಲ. ಬಿಗ್ ಬಾಸ್​ನಲ್ಲಿ ಇತ್ತೀಚೆಗೆ ರೀ ಯೂನಿಯನ್ ಆಗಿದೆ. ಈ ವೇಳೆ ಈಶಾನಿ ಕೂಡ ಬಂದಿದ್ದಾರೆ. ಅವರು ಬಳಕೆ ಮಾಡಿದ ಶಬ್ದ ಅನೇಕರಿಗೆ ಇಷ್ಟ ಆಗಿಲ್ಲ. ‘ಮಾತಿನ ಬಗ್ಗೆ ಹಿಡಿತ ಇರಲಿ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅವರಿಗೆ ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೂ ಅವರು ಬಳಕೆ ಮಾಡಿದ ಮಾತೇನು? ಆ ಬಗ್ಗೆ ಇಲ್ಲಿದೆ ವಿವರ.

ಇತ್ತೀಚೆಗೆ ಡ್ರೋನ್ ಪ್ರತಾಪ್ ಅವರು ಒಂದು ಮಾತನ್ನು ನೇರವಾಗಿ ಹೇಳಿದ್ದರು. ‘ವಿನಯ್ ಗೌಡ ಅವರು ಗ್ರೂಪಿಸಂ ಮಾಡಿದರು. ಅವರ ಗುಂಪಿನ ಎಲ್ಲರೂ ಹೊರ ಹೋದರು. ಈಗ ಅವರ ಬೆಡ್​ಶೀಟ್ ವಿನಯ್ ಅವರ ಬೆಡ್ ಸೇರಿದೆ. ಅವರು ಒಬ್ಬರನ್ನು ತುಳಿದು ಮೇಲೆ ಬಂದಿದ್ದಾರೆ’ ಎಂದಿದ್ದರು ಪ್ರತಾಪ್. ಈ ಮಾತನ್ನು ಕೇಳಿ ವಿನಯ್ ಗೌಡ ಅವರು ಸಿಟ್ಟಾಗಿದ್ದರು. ಡ್ರೋನ್ ಪ್ರತಾಪ್​ಗೆ ಕೆಟ್ಟ ಶಬ್ದಗಳ ಬಳಕೆ ಮಾಡಿದ್ದರು. ನಂತರ ಅವರು ಕ್ಷಮೆ ಕೇಳಿದ್ದರು.

ಈಗ ಈಶಾನಿ ಕೂಡ ಪ್ರತಾಪ್​ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಪ್ರತಾಪ್ ಹೇಳಿದ ಮಾತಿನ ಬಗ್ಗೆ ಅವರಿಗೆ ಕೋಪ ಇದೆ. ಇದನ್ನು ಅವರು ಬೇರೆ ರೀತಿಯಲ್ಲಿ ಹೇಳಿದ್ದಾರೆ. ‘ಕಾಗೆ ಕಕ್ಕ ಮಾಡಿ ಎಲ್ಲ ಕಡೆ ಓಡಾಡುತ್ತಿದೆ. ನೀವು ಸಿಂಪತಿ ಕಾರ್ಡ್​ ಪ್ಲೇ ಮಾಡಿ. ಅದರಿಂದ ಕೆಲವರು ಉಳಿದುಕೊಂಡಿದ್ದಾರೆ’ ಎಂದು ಈಶಾನಿ ಹೇಳಿದ್ದಾರೆ. ಇದನ್ನು ಅನೇಕರು ಟೀಕಿಸಿದ್ದಾರೆ. ಈಶಾನಿ ಅವರು ಈ ರೀತಿ ಮಾತನಾಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಈಶಾನಿ ಮಾತನ್ನು ಕೇಳುತ್ತಾ ಬೆಂಬಲಿಸಿದ್ದನ್ನು ಅನೇಕರು ಟೀಕಿಸಿದ್ದಾರೆ.

ವಿನಯ್ ಗೌಡ ಅವರು ಗ್ರೂಪ್ ಮಾಡಿಕೊಂಡಾಗ ‘ನಾನೇ ಆನೆ’ ಎಂದು ಕೂಗಾಡುತ್ತಾ, ಅಗ್ರೆಷನ್ ತೋರಿಸುತ್ತಿದ್ದರು. ಎಲ್ಲರೂ ಔಟ್ ಆದ ಬಳಿಕ ಅವರು ಸೈಲೆಂಟ್ ಆದರು. ಈಗ ಅವರ ಟೀಂ ಬಂದ ಬಳಿಕ ಅವರಿಗೆ ಬೂಸ್ಟ್ ಸಿಕ್ಕಿದೆ. ಇದರಿಂದ ಅವರು ಮತ್ತೆ ಅಗ್ರೆಸ್ ಆಗುವ ಸೂಚನೆ ಸಿಕ್ಕಿದೆ. ಫಿನಾಲೆ ಸಂದರ್ಭದಲ್ಲಿ ಅವರ ಆಟ ಮತ್ತೆ ಬದಲಾದರೆ ಅವರಿಗೆ ಹಿನ್ನಡೆ ಆಗಬಹುದು.

ಇದನ್ನೂ ಓದಿ: ವಿನಯ್​​ನ ವಹಿಸಿಕೊಂಡು ಬಂದ ಸ್ನೇಹಿತ್​ಗೆ ನಮ್ರತಾ ಖಡಕ್ ಪ್ರಶ್ನೆ; ಮರುಮಾತೇ ಇಲ್ಲ

ಫಿನಾಲೆಗೆ ಇನ್ನು ಉಳಿದಿರೋದು ಕೆಲವೇ ದಿನಗಳು ಮಾತ್ರ. ಈ ಸಂದರ್ಭದಲ್ಲಿ ಹೊರಗಿನಿಂದ ಬಂದು ಇನ್​ಪುಟ್ ನೀಡೋದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ. ಒಂದೊಮ್ಮೆ ಹೊರಗಿನವರು ನೀಡಿದ ಮಾಹಿತಿಯನ್ನು ನಂಬಿ ವಿನಯ್ ಗೌಡ ಅವರು ಮತ್ತೆ ಅಗ್ರೆಸ್ ಆದರೆ ಅವರ ಆಟದ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ