ತುಕಾಲಿಗೆ ಕೊನೆಗೂ ಸಿಕ್ತು ಉತ್ತಮ, ಜೈಲಿಗೆ ಹೋಗಿದ್ದು ಯಾರು?

|

Updated on: Dec 15, 2023 | 10:39 PM

Bigg Boss: ಈ ಶುಕ್ರವಾರದ ಎಪಿಸೋಡ್​ನಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಇರಲಿಲ್ಲ. ಆದರೆ ಉತ್ತಮ ಮತ್ತು ಕಳಪೆ ಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಾಯ್ತು, ಸಂತುಗೆ ಉತ್ತಮ ದೊರಕಿತು, ಕಳಪೆ ಸಿಕ್ಕಿದ್ದು ಯಾರಿಗೆ?

ತುಕಾಲಿಗೆ ಕೊನೆಗೂ ಸಿಕ್ತು ಉತ್ತಮ, ಜೈಲಿಗೆ ಹೋಗಿದ್ದು ಯಾರು?
ತುಕಾಲಿ ಸಂತು
Follow us on

ಬಿಗ್​ಬಾಸ್ (BiggBoss) ಮನೆಯಲ್ಲಿ ವಾರವೆಲ್ಲ ಟಾಸ್ಕ್​ಗಳ ಕಲರವ, ಶುಕ್ರವಾರದ ವೇಳೆ ಟಾಸ್ಕ್​ಗಳೆಲ್ಲ ಮುಗಿದು ಕ್ಯಾಪ್ಟನ್ ಆಯ್ಕೆ ನಡೆದಿರುತ್ತದೆ. ಆದರೆ ಕಳೆದ ವಾರ ಕ್ಯಾಪ್ಟನ್ ರೂಂಗೆ ಬೀಗ ಹಾಕಿದ ಕಾರಣ ಈ ಶುಕ್ರವಾರ ಕ್ಯಾಪ್ಟನ್ ಟಾಸ್ಕ್ ಇರಲಿಲ್ಲ. ಆದರೆ ಶುಕ್ರವಾರದ ಎಪಿಸೋಡ್​ನಲ್ಲಿ ನಡೆಯುವ ಮತ್ತೊಂದು ಪ್ರಮುಖ ಇವೆಂಟ್ ಎಂದರೆ ಅದುವೇ ಉತ್ತಮ ಮತ್ತು ಕಳಪೆ ಆಯ್ಕೆ ಮಾಡುವ ಪ್ರಕ್ರಿಯೆ. ಪ್ರತಿ ವಾರದಂತೆ ಈವಾರವೂ ಬಿಗ್​ಬಾಸ್ ಮನೆಯಲ್ಲಿ ಒಬ್ಬರು ಉತ್ತಮ ಇನ್ನೊಬ್ಬರು ಕಳಪೆಯನ್ನು ಮನೆ ಮಂದಿ ಆರಿಸಿದ್ದಾರೆ.

ಈ ವಾರ ತುಸು ಲಘುವಾದ ಟಾಸ್ಕ್​ಗಳನ್ನು ಮನೆ ಮಂದಿಗೆ ನೀಡಲಾಗಿತ್ತು. ವಾರ ಪೂರ್ತಿ, ಬಿಗ್​ಬಾಸ್ ಮನೆ ಪಾಠ ಶಾಲೆಯಾಗಿ ಬದಲಾಗಿತ್ತು, ಸ್ಪರ್ಧಿಗಳು ಶಾಲೆಯ ವಿದ್ಯಾರ್ಥಿಗಳಾಗಿ, ಶಿಕ್ಷಕರಾಗಿ ಬದಲಾಗಿದ್ದರು. ತರಗತಿಗಳಲ್ಲಿ ಪಾಲ್ಗೊಂಡು, ತರ್ಲೆ ಮಾಡಿದರು, ಜಗಳ ಮಾಡಿದರು, ಕೆಲವು ತರಗತಿಯಲ್ಲಿ ವಿಷಯಗಳನ್ನು ಕಲಿತರು ಸಹ. ಆದರೆ ವಾರವೆಲ್ಲ ತರಗತಿಯಲ್ಲಿ ಸಖತ್ ತರ್ಲೆ ಮಾಡುತ್ತಾ ಯಾವ ಸಮಯದಲ್ಲಿಯೂ ಎನರ್ಜಿ ಕಡಿಮೆ ಕೊಳ್ಳದೆ ಎಲ್ಲರನ್ನೂ ರಂಜಿಸಿದ ತುಕಾಲಿ ಸಂತು ಅವರಿಗೆ ಈ ವಾರದ ಉತ್ತಮ ನೀಡಲಾಯ್ತು.

ತುಕಾಲಿ ಸಂತು, ಬಿಗ್​ಬಾಸ್ ಮನೆಗೆ ಬಂದ ಮೊದಲ ವಾರದಿಂದಲೂ ಉತ್ತಮ ಬೇಕೆಂದು ಹಂಬಲಿಸಿದ್ದರು ಅಂತೆಯೇ ಅವರಿಗೆ ಉತ್ತಮ ಸಿಕ್ಕಿದ್ದರ ಬಗ್ಗೆ ಖುಷಿ ಪಟ್ಟರು, ತಮಗೆ ಬೆಂಬಲ ನೀಡಿದ ಮನೆಯ ಸದಸ್ಯರಿಗೆ ಉತ್ತಮವನ್ನು ಡೆಡಿಕೇಟ್ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 10ರ ಟಾಪ್ 5 ಯಾರು?​ ವಿನ್ನರ್ ಯಾರಾಗ್ತಾರೆ? ಸ್ನೇಹಿತ್ ಕೊಟ್ಟರು ಉತ್ತರ

ಇನ್ನು ಈ ವಾರದ ಟಾಸ್ಕ್​ನಲ್ಲಿ ಅಷ್ಟು ಉತ್ತಮವಾಗಿ ಪ್ರದರ್ಶನ ನೀಡದ ಪವಿ ಅವರಿಗೆ ಕಳಪೆಯನ್ನು ಮನೆ ಮಂದಿ ನೀಡಿದರು. ಯೋಗ ಶಿಕ್ಷಕಿ ಆಗಿದ್ದ ಪವಿ, ತರಗತಿಯನ್ನು ಸರಿಯಾಗಿ ನಡೆಸಲಿಲ್ಲ, ವಿದ್ಯಾರ್ಥಿಯಾಗಿದ್ದಾಗಲೂ ಸಹ ಸರಿಯಾಗಿ ತರಗತಿಯಲ್ಲಿ ಭಾಗವಹಿಸಲಿಲ್ಲ ಎಂಬುದು ಮನೆ ಮಂದಿಯ ಕಾರಣವಾಗಿತ್ತು. ಮೊದಲ ಬಾರಿ ಜೈಲಿಗೆ ಹೋದ ಪವಿ, ಖುಷಿಯಿಂದಲೇ ಹೋದರು, ಮನೆ ಮಂದಿಯೆಲ್ಲ ಜೈಲಿನ ಬಳಿ ಬಂದು ಪವಿಯನ್ನು ಕಳಿಸಿಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ