ಬಿಗ್​ಬಾಸ್ ಮನೆಗೆ ಮತ್ತೆ ಬಂತು ಚಿನ್ನದ ಹುಲಿ ಉಗುರು? ಯಾರು ಈ ನಡೆದಾಡುವ ಚಿನ್ನದ ಅಂಗಡಿ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ರ ನಾಲ್ಕನೇ ಸ್ಪರ್ಧಿಯಾಗಿ ಅಚ್ಚರಿಯ ಅಭ್ಯರ್ಥಿಯನ್ನು ಕರೆತರಲಾಗಿದೆ. ಮೈಮೇಲೆ ಎರಡು ಕೋಟಿ ಬೆಲೆಯ ಚಿನ್ನದ ಆಭರಣ ಹಾಕಿಕೊಂಡು ಓಡಾಡುವ ವ್ಯಕ್ತಿಯನ್ನು ಬಿಗ್​ಬಾಸ್ ಮನೆಯ ಒಳಗೆ ಕಳಿಸಲಾಗುತ್ತಿದೆ.

ಬಿಗ್​ಬಾಸ್ ಮನೆಗೆ ಮತ್ತೆ ಬಂತು ಚಿನ್ನದ ಹುಲಿ ಉಗುರು? ಯಾರು ಈ ನಡೆದಾಡುವ ಚಿನ್ನದ ಅಂಗಡಿ
Follow us
ಮಂಜುನಾಥ ಸಿ.
|

Updated on:Sep 28, 2024 | 10:16 PM

ಬಿಗ್​ಬಾಸ್ ಕನ್ನಡ ಸೀಸನ್ 11ರ ಮೂರು ಸ್ಪರ್ಧಿಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ನಟಿ ಗೌತಮಿ ಜಾಧವ್, ಲಾಯರ್ ಜಗದೀಶ್ ಹಾಗೂ ಹಿಂದೂ ಕಾರ್ಯಕರ್ತೆ ಎಂದು ಹೆಸರಾಗಿದ್ದ ಚೈತ್ರಾ ಕುಂದಾಪುರ್ ಅವರು ಮೊದಲ ಮೂರು ಸ್ಪರ್ಧಿಗಳಾಗಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ಇದೀಗ ನಾಲ್ಕನೇ ಸ್ಪರ್ಧಿಯನ್ನು ಘೋಷಣೆ ಮಾಡಲಾಗಿದ್ದು, ಯಾರೂ ಊಹಿಸದ ಅಚ್ಚರಿಯ ಹೆಸರನ್ನು ಆಯೋಜಕರು ಘೋಷಣೆ ಮಾಡಿದ್ದಾರೆ.

ಕಳೆದ ಬಾರಿ ಮೈತುಂಬಾ ಚಿನ್ನ ಧರಿಸಿ ಬಿಗ್​ಬಾಸ್ ಮನೆಗೆ ಹೋಗಿದ್ದ ವರ್ತೂರು ಸಂತೋಷ್, ಬಿಗ್​ಬಾಸ್ ಮನೆಗೆ ಹೋದ ಬಳಿಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಈಗ ಅದೇ ಮಾದರಿಯ ಸ್ಪರ್ಧಿಯೊಬ್ಬರನ್ನು ಆಯೋಜಕರು ಹುಡುಕಿ ತಂದಿದ್ದಾರೆ. ವರ್ತೂರು ಸಂತೋಷ್ ಮಾದರಿಯಲ್ಲಿಯೇ ಮೈಮೇಲೆ ಕೆಜಿಗಟ್ಟಲೆ ಚಿನ್ನ ಧರಿಸಿ, ಬಿಳಿ ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುವ ವ್ಯಕ್ತಿಯೊಬ್ಬರನ್ನು ಬಿಗ್​ಬಾಸ್​ನ ನಾಲ್ಕನೇ ಸ್ಪರ್ಧಿಯಾಗಿ ಘೋಷಣೆ ಮಾಡಿದ್ದಾರೆ. ಅಂದ ಹಾಗೆ ಈ ನಾಲ್ಕನೇ ಸ್ಪರ್ಧಿಯ ಹೆಸರು ಗೋಲ್ಡ್ ಸುರೇಶ್.

ಪ್ರೋಮೋನಲ್ಲಿ ಹೇಳಿರುವಂತೆ ಗೋಲ್ಡ್ ಸುರೇಶ್ ಅವರನ್ನು ಉತ್ತರ ಕರ್ನಾಟಕದ ಊರು. ಸಣ್ಣವರಿದ್ದಾಗ ಬಹಳ ತರ್ಲೆಯಾಗಿದ್ದ ಸುರೇಶ್ ಅವರನ್ನು ಊರಿಂದ ದೂರ ಇಟ್ಟು ಓದಿಸಲು ಪ್ರಾರಂಭಿಸಿದರಂತೆ. ಹತ್ತನೇ ತರಗತಿ ವರೆಗೂ ಓದಿದ ಸುರೇಶ್ ಆ ನಂತರ ಊರು ಬಿಟ್ಟು ಓಡಿ ಹೋಗಿದ್ದರಂತೆ. ಆ ನಂತರ ಅಲ್ಲಲ್ಲಿ ಕೆಲಸ ಮಾಡಿದ್ದಾರೆ. ಆರ್​ಎಸ್​ಎಸ್​ ಕಾರ್ಯಕರ್ತರೂ ಆಗಿದ್ದಾರೆ. ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ, ಕನ್ಸ್​ಟ್ರಕ್ಷನ್ ಸೂಪರ್​ವೈಸರ್ ಆಗಿದ್ದಾರೆ. ಈಗ ಭಾರಿ ಶ್ರೀಮಂತರು ಆಗಿರುವುದಾಗಿ ಹೇಳಿಕೊಂಡಿರುವ ಸುರೇಶ್, ಸಣ್ಣ ವಯಸ್ಸಿನಲ್ಲಿ ಕಾರುಗಳ ಬಗ್ಗೆ ವಿಶೇಷ ಪ್ರೀತಿ ಇತ್ತು. ಈಗ ಹಲವು ಕಾರುಗಳನ್ನು ಇಟ್ಟುಕೊಂಡಿದ್ದೇನೆ. ಚಿನ್ನದ ಬಗ್ಗೆ ನನಗೆ ವಿಶೇಷ ಪ್ರೀತಿ, ಒಂದು ಸಣ್ಣ ಲಕ್ಷ್ಮಿ ಡಾಲರ್ ಅನ್ನು ಧರಿಸಲು ಪ್ರಾರಂಭ ಮಾಡಿದೆ. ಈಗ ಎಲ್ಲ ರೀತಿಯ ಡಿಸೈನ್​ನ ಚಿನ್ನ ನನ್ನ ಬಳಿ ಇದೆ’ ಎಂದಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡದ ಮೂರನೇ ಸ್ಪರ್ಧಿ ಘೋಷಣೆ: ಇವರಿಗೆ ಮೈಕ್, ಜೈಲು ಎರಡೂ ಹೊಸದಲ್ಲ

ಖಾಸಗಿ ಜೀವನದ ಬಗ್ಗೆ ಮಾತನಾಡಿರುವ ಗೋಲ್ಡ್ ಸುರೇಶ್, ನನ್ನ ಪತ್ನಿ ಚೆನ್ನಾಗಿ ಓದಿಕೊಂಡಿದ್ದಾರೆ. ಅವರು ಶಿಕ್ಷಣದ ಹಿನ್ನೆಲೆಯಿಂದಲೇ ಬಂದವರು, ನಾನು ಕಡಿಮೆ ಓದಿದ್ದೀನಿ ಆದರೂ ಸಹ ಅವರು ನನ್ನನ್ನು ಮದುವೆ ಆದರು. ಅವರಿಗೆ ಹೀಗೆಲ್ಲ ಚಿನ್ನ ಧರಿಸಿಕೊಂಡು ಓಡಾಡುವುದು, ಹೊಸ ಕಾರುಗಳನ್ನು ತೆಗೆದುಕೊಳ್ಳುವುದು ಎಲ್ಲ ಇಷ್ಟವಾಗುವುದಿಲ್ಲ, ಆದರೆ ನನಗೆ ಇಷ್ಟ ಎಂಬ ಕಾರಣಕ್ಕೆ ಏನೂ ಹೇಳುವುದಿಲ್ಲ. ನನಗೆ ಒಂದು ಹೆಣ್ಣು ಮಗು ಇದೆ. ಹೆಣ್ಣು ಮಗುವೇ ಬೇಕೆಂದು ನಾನು ಕೋರಿಕೊಂಡಿದ್ದೆ ಹಾಗೆ ಹೆಣ್ಣು ಮಗು ಆಗಿದೆ. ಬಿಗ್​ಬಾಸ್ ಮನೆಯಲ್ಲಿ ದೊಡ್ಡ ತಿಮಿಂಗಲಗಳು ಇರುತ್ತವೆ, ನಮಗೆ ಅವಕಾಶ ಸಿಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಅವಕಾಶ ಸಿಕ್ಕಿದೆ. ಅಲ್ಲಿಗೆ ಹೋಗಿ ನಮ್ಮ ತನ ಏನು ಅನ್ನೋದು ತೋರಿಸಬೇಕು, ಹೊರಗೆ ಹಲವರ ವಿರುದ್ಧ ಗೆದ್ದಿದ್ದೀನಿ ಒಳಗೆ ಗೆಲ್ಲುತ್ತೀನಿ’ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಗೋಲ್ಡ್ ಸುರೇಶ್ ಇನ್​ಸ್ಟಾಗ್ರಾಂ ನೋಡಿದರೆ ಕೆಲವು ರಾಜಕಾರಣಿಗಳ ಜೊತೆಗೆ ಫೋಟೊ, ವಿಡಿಯೋಗಳನ್ನು ಹಾಕಿದ್ದಾರೆ. ಕಳೆದ ಬಿಗ್​ಬಾಸ್​ನ ಸ್ಪರ್ಧಿ ನೀತು ಜೊತೆಗೆ ಕೆಲವು ವಿಡಿಯೋಗಳನ್ನು ಹಾಕಿದ್ದಾರೆ. ಜೀ ಕನ್ನಡದ ಯುವರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ವಿಡಿಯೋ ಸಹ ಅವರ ಇನ್​ಸ್ಟಾಗ್ರಾಂನಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:09 pm, Sat, 28 September 24

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು