ಬಿಗ್​ಬಾಸ್ ಎರಡನೇ ಸ್ಪರ್ಧಿ ಘೋಷಣೆ: ಮನೆ ಅಲ್ಲೋಲ ಕಲ್ಲೋಲ ಗ್ಯಾರೆಂಟಿ

ಬಿಗ್​ಬಾಸ್ ಕನ್ನಡ ಸೀಸನ್ 11 ನಾಳೆ ಆರಂಭವಾಗುತ್ತಿದೆ. ಆದರೆ ಇಂದೇ ಕೆಲವು ಸ್ಪರ್ಧಿಗಳ ಹೆಸರು ಘೋಷಣೆ ಮಾಡಲಾಗುತ್ತಿದೆ. ಮೊದಲ ಸ್ಪರ್ಧಿಯಾಗಿ ನಟಿ ಗೌತಮಿ ಜಾಧವ್ ಬಿಗ್​ಬಾಸ್​ ಮನೆಗೆ ಹೋಗುತ್ತಿದ್ದಾರೆ. ಎರಡನೇ ಸ್ಪರ್ಧಿ ಬಾಯಲ್ಲಿ ಬೆಂಕಿ ಉಂಡೆ ಉರುಳಿಸುವ ವಕೀಲ.

ಬಿಗ್​ಬಾಸ್ ಎರಡನೇ ಸ್ಪರ್ಧಿ ಘೋಷಣೆ: ಮನೆ ಅಲ್ಲೋಲ ಕಲ್ಲೋಲ ಗ್ಯಾರೆಂಟಿ
Follow us
ಮಂಜುನಾಥ ಸಿ.
|

Updated on: Sep 28, 2024 | 8:15 PM

ಬಿಗ್​ಬಾಸ್ ಮನೆ ಎಂದರೆ ಅದು ಭಿನ್ನ ವ್ಯಕ್ತಿತ್ವಗಳ ಸಮ್ಮಿಲನ ಕೆಲವರು ಸೌಮ್ಯವಾಗಿದ್ದರೆ ಕೆಲವರು ಹಾಹಾಕಾರ ಸೃಷ್ಟಿಸುತ್ತಾರೆ. ಆದರೆ ಬಿಗ್​ಬಾಸ್ ಮನೆಯ ಇತಿಹಾಸ ಗಮಿಸಿದರೆ ಹೀಗೆ ಜೋರಾಗಿ ಕಿರುಚಾಡುವ, ಜಗಳವಾಡುವ, ಇನ್ನೊಬ್ಬರನ್ನು ದೂಷಿಸಿ, ತಂತ್ರ-ಕುತಂತ್ರದ ಆಟ ಆಡುವ ಸ್ಪರ್ಧಿಗಳು ಗೆದ್ದಿಲ್ಲ ಆದರೆ ಕೊನೆಯ ವರೆಗೂ ಉಳಿದುಕೊಳ್ಳುತ್ತಾರೆ, ಹೊರಗಡೆ ಹೆಸರು ಮಾಡುತ್ತಾರೆ. ಹಾಗಾಗಿ ಬಿಗ್​ಬಾಸ್ ಪ್ರತಿಬಾರಿ ಇಂಥಹಾ ವ್ಯಕ್ತಿಗಳನ್ನು ಆರಿಸಿ ಬಿಗ್​ಬಾಸ್ ಮನೆ ಒಳಗೆ ಕಳಿಸುತ್ತದೆ. ಈ ಬಾರಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ದೊಡ್ಡ ಬಾಯಿಯಿಂದ, ಜಗಳ ಮಾಡಿಕೊಳ್ಳುವ ವ್ಯಕ್ತಿತ್ವದಿಂದಲೇ ಚಿರಪರಿಚಿತರಾದ ವ್ಯಕ್ತಿಯನ್ನು ಬಿಗ್​ಬಾಸ್ ಮನೆಯ ಒಳಗೆ ಕಳಿಸುತ್ತಿದೆ.

‘ಫೇಸ್​ಬುಕ್ ಲಾಯರ್’ ಎಂದು ಟೀಕಾಕಾರರಿಂದ ಕರೆಸಿಕೊಳ್ಳುವ, ತಮ್ಮ ವಕೀಲಿಕೆಗಿಂತಲೂ ಸಾಮಾಜಿಕ ಜಾಲತಾಣದಿಂದ ಭಾರಿ ಹೆಸರು ಮಾಡಿರುವ ವಕೀಲ ಜಗದೀಶ್ ಅವರನ್ನು ಬಿಗ್​ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಕಳಿಸಲಾಗುತ್ತಿದೆ. ಲಾಯರ್ ಜಗದೀಶ್​ರದ್ದು ವರ್ಣಮಯ ವ್ಯಕ್ತಿತ್ವ ಮಾತ್ರವಲ್ಲ, ಅವರದ್ದು ಬಹಳ ವರ್ಣಮಯ ವೈಯಕ್ತಿಕ ಜೀವನ ಸಹ. ಬಿಗ್​ಬಾಸ್​ಗೆ ಹೇಳಿ ಮಾಡಿಸಿದ ವ್ಯಕ್ತಿ ಜಗದೀಶ್.

ಜಗದೀಶ್​ರದ್ದು ಕೊಡಿಗೇಹಳ್ಳಿ, ಒಕ್ಕಲಿಗ ಕುಟುಂಬದ ಜಗದೀಶ್​, ಅವರೇ ಹೇಳಿಕೊಂಡಿರುವಂತೆ ಅವರ ತಂದೆ ಶ್ರೀಮಂತರು, ಅವರು ವಾಸಿಸುವುದು ಭಾರಿ ದೊಡ್ಡ ಮನೆಯಲ್ಲಿ. ಅವರು ಯುವಕರಾಗಿದ್ದಾಗ ಅವರ ಮೇಲೆ ಪೊಲೀಸರು ಸುಳ್ಳು ಕೇಳು ದಾಖಲಿಸಿ ಅವರನ್ನು ರೌಡಿ ಶೀಟರ್ ಮಾಡಿ ಅವಮಾನ ಮಾಡಿದ್ದರಂತೆ. ದೌರ್ಜನ್ಯ ಮಾಡಿದರಂತೆ. ಅದೇ ಕಾರಣಕ್ಕೆ ಸ್ವಂತ ಪರಿಶ್ರಮದಿಂದ ಎಲ್​ಎಲ್​ಬಿ ಓದಿ ಅವರ ಕೇಸುಗಳನ್ನು ಅವರೇ ವಾದಿಸಿದರಂತೆ. ಆ ನಂತರ ಸಾಮಾಜಿಕ ಹೋರಾಟಕ್ಕೂ ಧುಮುಕಿದ ಅವರು ಮೊದಲು ಬೆಳಕಿಗೆ ಬಂದಿದ್ದು ಏರ್​ಪೋರ್ಟ್​ ಬಳಿಯ ಟೋಲ್​ ಬಗ್ಗೆ ಅವರು ಮಾಡಿದ್ದ ವಿಡಿಯೋ ಮೂಲಕ.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 11ರ ಮೊದಲ ಸ್ಪರ್ಧಿ ಘೋಷಣೆ, ಯಾರು ಈ ಗೌತಮಿ?

ಆ ಬಳಿಕ ಪುನೀತ್ ಕೆರೆಹಳ್ಳಿ ವಿರುದ್ಧ ಅವರ ಸಾಮಾಜಿಕ ಜಾಲತಾಣದ ಹೋರಾಟ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಬ್ಬರೂ ಸಹ ಪರಸ್ಪರರ ಬಗ್ಗೆ ಏಕವಚನದಲ್ಲಿ ಬೈದಾಡಿಕೊಂಡಿದ್ದರು. ಅದಾದ ಬಳಿಕ ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣ ಪ್ರಕರಣದಲ್ಲಿಯೂ ಸಹ ಜಗದೀಶ್​ ಸುದ್ದಿಯಾಗಿದ್ದರು. ಸಂತ್ರಸ್ಥೆಯ ಪರವಾಗಿ ನಿಂತಿದ್ದ ಜಗದೀಶ್, ಸಂತ್ರಸ್ತೆಯನ್ನು ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಕರೆತರುವ ಕೆಲಸ ಮಾಡಿದ್ದರು.

ಅದಾದ ಬಳಿಕ ಜಾತಿ ನಿಂದನೆ ಪ್ರಕರಣದಲ್ಲಿ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ ಪ್ರಕರಣವೂ ಆಗಿತ್ತು. ಆ ಘಟನೆ ಬಳಿಕ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದ ಜಗದೀಶ್, ಇತ್ತೀಚೆಗೆ ದರ್ಶನ್ ವಿಚಾರ ನಡೆದ ಬಳಿಕ ಮತ್ತೆ ಪ್ರತ್ಯಕ್ಷವಾಗಿದ್ದರು. ದರ್ಶನ್ ಪರವಾಗಿ ಪ್ರತಿಭಟನೆ ಮಾಡೋಣ ಬನ್ನಿ ಎಂದು ಕರೆ ನೀಡಿದ್ದರು. ಮುನಿರತ್ನ ವಿರುದ್ಧವೂ ವಿಡಿಯೋ ಮಾಡಿದ್ದರು. ಮಾಜಿ ಸಿಎಂ ಒಬ್ಬರ ಅಕ್ರಮದ ದಾಖಲೆಗಳು ತಮ್ಮ ಬಳಿ ಇರುವುದಾಗಿ ಹೇಳಿಕೊಂಡಿದ್ದರು.

ಸಿಟ್ಟಿನ ವ್ಯಕ್ತಿತ್ವದ ಜಗದೀಶ್​, ಮಾತುಗಾರ. ಏಕವಚನ, ಅಶ್ಲೀಲ ಪದಗಳು ಅವರಿಗೆ ತೀರಾ ಸಾಮಾನ್ಯ ಎಂಬುದು ಅವರ ಸಾಮಾಜಿಕ ಜಾಲತಾಣ ವಿಡಿಯೋ ನೋಡಿದರೆ ತಿಳಿಯುತ್ತದೆ. ಅಂದಹಾಗೆ ಜಗದೀಶ್​ಗೆ ಮದುವೆಯಾಗಿದ್ದು ಆದರೆ ಅವರಿಗೆ ಡಿವೋರ್ಸ್ ಆಗಿದ್ದು, ಪತ್ನಿ ಹಾಗೂ ಮಗ ಅವರಿಂದ ದೂರ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು