ಮದ್ವೆ ಆಗ್ತೀನಿ ಹುಡುಗಿ ಹುಡುಕಿ, ಅಪ್ಪನಿಗೆ ಮಾತು ಕೊಟ್ಟ ಉಗ್ರಂ ಮಂಜು

|

Updated on: Jan 25, 2025 | 8:45 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಆರು ಜನ ತಲುಪಿದ್ದು ಅವರಲ್ಲಿ ಉಗ್ರಂ ಮಂಜು ಸಹ ಒಬ್ಬರು. ಈಗ ಫಿನಾಲೆ ತಲುಪಿರುವವರಲ್ಲಿ ಹಿರಿಯರೆಂದರೆ ಅದು ಮಂಜು ಅವರೇ ಆದರೆ ಅವರಿಗಿನ್ನೂ ಮದುವೆ ಆಗಿಲ್ಲ. ಆದರೆ ಇದೀಗ ಅವರ ತಂದೆಗೆ ಹೆಣ್ಣು ಹುಡುಕಲು ಹೇಳಿದ್ದಾರೆ.

ಮದ್ವೆ ಆಗ್ತೀನಿ ಹುಡುಗಿ ಹುಡುಕಿ, ಅಪ್ಪನಿಗೆ ಮಾತು ಕೊಟ್ಟ ಉಗ್ರಂ ಮಂಜು
Ugram Manju
Follow us on

ಉಗ್ರಂ ಮಂಜು ಫಿನಾಲೆ ವಾರಕ್ಕೆ ಬಂದಿದ್ದಾರೆ. ನಾಳೆ (ಜನವರಿ 25) ವಿಜೇತರ ಘೋಷಣೆ ಆಗಲಿದ್ದು, ಉಗ್ರಂ ಮಂಜು ಗೆಲ್ಲುವ ಸಾಧ್ಯತೆ ಇದೆ. ಉಗ್ರಂ ಮಂಜು ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಕೆಲಸ ಮಾಡುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬ್ಲಾಕ್ ಬಸ್ಟರ್ ಆದ ‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಜೊತೆಗೆ ಮಂಜು ಸಹ ನಟಿಸಿದ್ದಾರೆ. ನೋಡಲು ಸ್ಮಾರ್ಟ್ ಆಗಿ ಕಾಣುವ ಮಂಜು ಇನ್ನೂ ಮದುವೆ ಆಗಿಲ್ಲ. ಇದೇ ವಿಷಯಕ್ಕೆ ಸುದೀಪ್ ಸಹ ಆಗಾಗ್ಗೆ ಕಾಲೆಳೆಯುತ್ತಿರುತ್ತಾರೆ. ಆದರೆ ಇದೀಗ ಉಗ್ರಂ ಮಂಜು ತಾವು ಮದುವೆ ಆಗುವುದಾಗಿ ಹೇಳಿದ್ದಾರೆ.

ಫಿನಾಲೆಯ ಮೊದಲ ದಿನ ಅಂದರೆ ಶನಿವಾರದ ಎಪಿಸೋಡ್​ನಲ್ಲಿ ಉಗ್ರಂ ಮಂಜು ಅವರ ತಂದೆ ಬಿಗ್​ಬಾಸ್ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದರು. ಮಗನಿಗಾಗಿ ಕುಣಿದು ಎಲ್ಲರ ಮನ ರಂಜಿಸಿದರು. ಅದಾದ ಬಳಿಕ ಸುದೀಪ್ ಜೊತೆಗೆ ಮಾತನಾಡಿದ ಮಂಜು ಅವರ ತಂದೆ, ‘ಒಂದು ಬಾರಿ ಬಿಗ್​ಬಾಸ್ ಮನೆಗೆ ಬಂದಿದ್ದರಿಂದ ನಾನು ಬಹಳ ಫೇಮಸ್ ಆಗಿಬಿಟ್ಟಿದ್ದೀನಿ. ನೂರಾರು ಜನ ಈಗ ನನ್ನನ್ನು ಗುರುತಿಸುತ್ತಿದ್ದಾರೆ. ಯಾರ್ಯಾರೋ ಬಂದು ಸೆಲ್ಫಿ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ.

‘ನಿಮ್ಮ ತಂದೆ ನಿನಗಾಗಿ ಫರ್ಮಾಮೆನ್ಸ್ ಮಾಡಿ ಗಿಫ್ಟ್ ಕೊಟ್ಟಿದ್ದಾರೆ. ನೀನು ಅಪ್ಪನಿಗೆ ಏನು ಗಿಫ್ಟ್ ಕೊಡುತ್ತೀರ’ ಎಂದು ಸುದೀಪ್, ಮಂಜು ಅನ್ನು ಪ್ರಶ್ನೆ ಮಾಡಿದರು. ಅದಕ್ಕೆ ಮಂಜು, ‘ಮದ್ವೆ ಆಗ್ತೀನಿ ಹುಡುಗಿ ಹುಡುಕಪ್ಪ’ ಎಂದರು. ಅದಕ್ಕೆ ಮಂಜು ಅವರ ತಂದೆ, ನಾವು ಮದುವೆ ಮಾಡಲು ರೆಡಿ ಇದ್ದೀವಿ. ಯಾರನ್ನಾದರೂ ಪ್ರೀತಿಸಿದ್ದರೆ ಹೇಳು ಅವರೊಟ್ಟಿಗೆ ಮದುವೆ ಮಾಡೋಣ ಎಂದರು.

ಇದನ್ನೂ ಓದಿ:ಸುದೀಪ್ ಇಲ್ಲದ ಬಿಗ್​ ಬಾಸ್ ಊಹಿಸೋಕೆ ಆಗಲ್ಲ; ಮುಂದಿನ ಆಯ್ಕೆ ಏನು?

‘ಮುಂಚೆ ಪ್ರೀತಿಸಿದ್ದೆ ಆದರೆ ಈಗ ಇಲ್ಲ’ ಎಂದು ಉತ್ತರಿಸಿದರು ಮಂಜು. ಆ ವಿಷಯ ತಮಗೂ ಗೊತ್ತೆಂದು ಮಂಜು ಅವರ ತಂದೆ, ಮುಂಚೆ ಯಾವುದೋ ಹುಡುಗಿಯನ್ನು ಪ್ರೀತಿಸಿದ್ದಾಗಿ ಮಂಜು ಹೇಳಿದ್ದರು. ಆದರೆ ಆಗ ನಾನೇ ಬೇಡ ಅಂದಿದ್ದೆ. ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಮೊದಲು ಅವರ ಮದುವೆ ಆಗಬೇಕು ಅದಾದ ಮೇಲೆ ನೋಡೋಣ ಎಂದಿದ್ದೆ. ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸುವಷ್ಟರಲ್ಲಿ ಆಕೆಯ ಮದುವೆ ಆಗಿ ಹೋಗಿತ್ತು. ಅದಾದ ಮೇಲೆ ಎಷ್ಟು ಬಾರಿ ಸಂಬಂಧಗಳನ್ನು ನೋಡಿ ಬಂದರೂ ಎಲ್ಲರನ್ನೂ ಬೇಡ ಬೇಡ ಎನ್ನುತ್ತಲೇ ಇದ್ದ’ ಎಂದರು ಉಗ್ರಂ ಮಂಜು ಅವರ ತಂದೆ.

ಸಿನಿಮಾ ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ