Ugram Manju: ಮಂಜುಗೆ ಬಿದ್ದಿದೆ ಕಳ್ಳೋಟು; ವೇದಿಕೆಯ ಮೇಲೆ ರಿವೀಲ್ ಮಾಡಿದ ಬಿಗ್ ಬಾಸ್
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮಂಜು ಅವರ ಜನಪ್ರಿಯತೆ ಹೆಚ್ಚುತ್ತಿರುವಾಗಲೇ, ಅವರ ಮತಗಳಿಕೆಯಲ್ಲಿ ಅಕ್ರಮವಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಒಂದು ವಿಡಿಯೋ ತೋರಿಸಲಾಗಿದ್ದು, ಮಂಜು ಅವರ ಪರವಾಗಿ ಮತ ಹಾಕಲು ಒಂದು ಕ್ಯಾಂಪೇನ್ ನಡೆದಿರುವ ಬಗ್ಗೆ ಹೇಳಲಾಗಿದೆ. ಇದರಲ್ಲಿ ಅಸಲಿ ವಿಚಾರ ರಿವೀಲ್ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಉಗ್ರಂ ಮಂಜು ಅವರು ವಿನ್ ಆಗುವ ಕನಸು ಕಾಣುತ್ತಿದ್ದಾರೆ. ಟಾಪ್ 6ರಲ್ಲಿ ಅವರಿದ್ದಾರೆ. ಅವರಿಗೆ ವೋಟ್ ಮಾಡುವಂತೆ ಅನೇಕ ಸೆಲೆಬ್ರಿಟಿಗಳು ಕೋರಿದ್ದಾರೆ. ಅವರ ಊರಲ್ಲಿ ಕೆಲವು ಸಾಮಾಜಿಕ ಕೆಲಸ ಮಾಡಿ ಮಂಜುಗೆ ವೋಟ್ ಮಾಡುವಂತೆ ಕೆಲವರು ಕೋರಿದ್ದಾರೆ. ಹೀಗಿರುವಾಗಲೇ ಮಂಜುಗೆ ಕಳ್ಳೋಟು ಬಿದ್ದ ಬಗ್ಗೆ ಮಾಹಿತಿ ರಿವೀಲ್ ಆಗಿದೆ. ಇದನ್ನು ಬಿಗ್ ಬಾಸ್ ವೇದಿಕೆ ಮೇಲೆ ಫನ್ ರೀತಿಯಲ್ಲಿ ರಿವೀಲ್ ಮಾಡಲಾಗಿದೆ.
ಮಂಜು ಅವರು ಸಿನಿಮಾ ಮೂಲಕ ಗಮನ ಸೆಳೆದವರು. ಅವರು ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿಸಿಯೂ ಜನಪ್ರಿಯರಾಗಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸಿ ಜಮನಗೆದ್ದರು. ಆರಂಭದಲ್ಲಿ ಜೋಶ್ನಲ್ಲಿ ಇದ್ದ ಅವರು, ಇತ್ತೀಚೆಗೆ ಚಾರ್ಮ್ ಕಳೆದುಕೊಂಡಿದ್ದಾರೆ. ಹೀಗೇಕೆ ಎನ್ನುವ ಪ್ರಶ್ನೆಗೆ ಅವರ ಬಳಿಯೂ ಉತ್ತರ ಇಲ್ಲ. ಈಗ ದೊಡ್ಮನೆಯಲ್ಲಿ ಒಂದು ಅಚ್ಚರಿಯ ವಿಚಾರ ರಿವೀಲ್ ಆಗಿದೆ.
‘ಮಂಜು ಅವರೇ ನಿಮಗಾಗಿ ವಿಶೇಷ ಕ್ಯಾಂಪೇನ್ ನಡೆದಿದೆ’ ಎಂದರು ಸುದೀಪ್. ಈ ವೇಳೆ ವಿಡಿಯೋದಲ್ಲಿ ಮದ್ಯದ ಬಾಟಲಿಗಳು ಮಾತನಾಡುತ್ತಿರುವ ರೀತಿಯಲ್ಲಿ ತೋರಿಸಲಾಯಿತು. ಮಂಜು ಅವರು ಮದ್ಯ ಪ್ರಿಯರು. ಈ ಕಾರಣಕ್ಕೆ ಮೂರು ಬಾಟಲಿಗಳು ಮಾತನಾಡುವಂತೆ ತೋರಿಸಿದರು.
View this post on Instagram
‘ಮಂಜಣ್ಣ ನೀವು ಗೆಲ್ಲಬೇಕು. ನೀವು ತರೋ ಕಪ್ನಲ್ಲಿ ಎಣ್ಣೆ ಹಾಕಿಕೊಂಡು ಕುಡಿಯಬೇಕು. ನಿಮಗೆ 90, 90 ವೋಟ್ ಹಾಕಿದೀವಿ. ನಾರ್ಮಲ್ ವೋಟ್ ಇಂದ ಗೆಲ್ಲೋಕೆ ಆಗುತ್ತದಾ? ಹೀಗಾಗಿ ಕಳ್ಳೋಟು ಹಾಕಿಸಿದ್ದೀವಿ’ ಎಂದು ಬಾಟಲಿಗಳು ರಿವೀಲ್ ಮಾಡಿವೆ. ಇದನ್ನು ಬಿಗ್ ಬಾಸ್ ವೇದಿಕೆ ಮೇಲೆಯೇ ರಿವೀಲ್ ಮಾಡಲಾಯಿತು. ಇದನ್ನು ಫನ್ಆಗಿ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮೂವರು ಸ್ಪರ್ಧಿಗಳಿಗೆ ಭರ್ಜರಿ ಸರ್ಪ್ರೈಸ್ ಕೊಟ್ಟ ಕಲರ್ಸ್
ಪ್ರತಿ ಸ್ಪರ್ಧಿಗೆ ಜಿಯೋ ಸಿನಿಮಾದಲ್ಲಿ ನಿತ್ಯ 99 ವೋಟ್ಗಳನ್ನು ಹಾಕಲು ಅವಕಾಶ ಇದೆ. ಇದನ್ನು ಬಿಟ್ಟು ಹೆಚ್ಚುವರಿಯಾಗಿ ಒಂದೇ ಒಂದು ವೋಟ್ನ ಮಾಡಲು ಅವಕಾಶ ಬರುವುದಿಲ್ಲ. ಹೀಗಾಗಿ, ಕಳ್ಳೋಟು ಎಂಬುದು ಇಲ್ಲಿ ಬರೋದೇ ಇಲ್ಲ. ಅದನ್ನು ಮಾಡಿದ್ದು ಕೇವಲ ಫನ್ಗಾಗಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:00 pm, Sat, 25 January 25