ಬಿಗ್ ಬಾಸ್ ಮನೆಯಲ್ಲಿ ರಜತ್​ಗೆ ಸಿಕ್ತು ವಿಶೇಷ ಅವಾರ್ಡ್; ಏನದು?

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಪ್ರವೇಶಿಸಿದ ರಜತ್, ಟಾಪ್ 6 ಸ್ಪರ್ಧಿಗಳಲ್ಲಿ ಒಬ್ಬರಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 50 ದಿನಗಳ ನಂತರ ಮನೆಗೆ ಪ್ರವೇಶಿಸಿದ್ದರೂ, ಟಾಸ್ಕ್‌ಗಳಲ್ಲಿ ಮತ್ತು ಮನರಂಜನೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರು ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ರಜತ್​ಗೆ ಸಿಕ್ತು ವಿಶೇಷ ಅವಾರ್ಡ್; ಏನದು?
ರಜತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 25, 2025 | 9:50 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಅವರು ಟಾಪ್ 6ರಲ್ಲಿ ಒಬ್ಬರಾಗಿದ್ದಾರೆ. ಅವರು 50 ದಿನಗಳ ಬಳಿಕ ದೊಡ್ಮನೆಗೆ ಎಂಟ್ರಿ ಕೊಟ್ಟರೂ ಮನರಂಜನೆಯಲ್ಲಿ, ಟಾಸ್ಕ್​ನಲ್ಲಿ ಅವರು ಕಡಿಮೆ ಆಗಿಲ್ಲ. ಅವರು ಟಾಪ್​ 6ರಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಒಂದು ವಿಶೇಷ ಅವಾರ್ಡ್ ಸಿಕ್ಕಿದೆ. ಅದುವೇ ಹಾರ್ಲಿಕ್ಸ್ ಶಾರ್ಪೆಸ್ಟ್ ಕಂಟೆಸ್ಟಂಟ್​. ಇದನ್ನು ಕೇಳಿ ರಜತ್ ಅವರು ಸಖತ್ ಖುಷಿಪಟ್ಟರು.

ಬಿಗ್ ಬಾಸ್ ಸ್ಪಾನ್ಸರ್​ಗಳಲ್ಲಿ ಹಾರ್ಲಿಕ್ಸ್ ಕೂಡ ಒಂದು. ಹಾರ್ಲಿಕ್ಸ್ ಕುಡಿದರೆ ಹೆಚ್ಚು ಶಾರ್ಪ್ ಆಗುತ್ತಾರೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಕಾರಣದಿಂದಲೇ ‘ಶಾರ್ಪೆಸ್ಟ್ ಕಂಟೆಸ್ಟಂಟ್’ ಅವಾರ್ಡ್​ನ ಕೊಡಲಾಯಿತು. ಈ ಅವಾರ್ಡ್​ ರಜತ್​ಗೆ ಹೋಗುತ್ತಿದೆ ಎಂದು ಸುದೀಪ್ ಅವರು ಘೋಷಣೆ ಮಾಡಿದರು. ಸ್ಟೋರ್ ರೂಂಗೆ ಹೋಗಿ ‘ಹಾರ್ಲಿಕ್​’ ಸಂಸ್ಥೆ ನೀಡಿದ ಅವಾರ್ಡ್​ನ ಸ್ವೀಕರಿಸಿದರು ರಜತ್.

ರಜತ್ ಅವರು ವಿನ್ನಿಂಗ್ ಸ್ಪೀಚ್ ಕೊಟ್ಟರು. ‘ವೈಲ್ಡ್ ಕಾರ್ಡ್​ ಮೂಲಕ ಬಂದರೆ ಗೆಲ್ಲೋಕೆ ಆಗಲ್ಲ ಎಂಬುದು ಅನೇಕರ ನಂಬಿಕೆ. ಆದರೆ, ನಾನು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಲ್ಲಿಯವರೆಗೆ ಬಂದಿದ್ದೇನೆ. ಬಿಗ್ ಬಾಸ್ ಮನೆಗೆ ಬಂದು ವೈಲ್ಡ್ ಆಗಿ ಆಡ್ತೀನಿ ಎನ್ನುವವರು ನನ್ನನ್ನು ಮಾದರಿಯಾಗಿ ಇಟ್ಟುಕೊಳ್ಳಬಹುದು’ ಎಂದು ರಜತ್ ಅವರು ಖುಷಿಯಿಂದ ಹೇಳಿಕೊಂಡರು.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಗಮನ ಸೆಳೆಯೋದು ಅಂದರೆ ಅದು ಸಣ್ಣ ಮಾತಲ್ಲ. ಅದರಲ್ಲೂ ಟಾಪ್ 6ರಲ್ಲಿ ಒಬ್ಬರಾಗೋದು ಎಂದರಂತೂ ಅದು ಸಣ್ಣ ವಿಚಾರ ಅಲ್ಲವೇ ಅಲ್ಲ. ಈ ಸಾಧನೆಯನ್ನು ರಜತ್ ಮಾಡಿ ತೋರಿಸಿದ್ದಾರೆ. ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಅವರು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಭವ್ಯಾಗಿಂತ ಫೇಮಸ್ ಆಗಿದ್ದು ಹೇಗೆ? ಸುದೀಪ್​ಗೆ ವಿವರಿಸಿದ ದಿವ್ಯಾ

ರಜತ್ ಅವರು ದೊಡ್ಮನೆಯಲ್ಲಿ ಸಾಕಷ್ಟು ವೈಲ್ಡ್ ಆಗಿ ಆಡಿದ್ದಾರೆ. ಅವರು ಟಾಸ್ಕ್​ನಲ್ಲಿ ಮಾತ್ರವಲ್ಲ, ಮನರಂಜನೆಯಲ್ಲೂ ಗಮನ ಸೆಳೆದಿದ್ದಾರೆ. ಅವರು ಮಾತಿನಲ್ಲೂ ಎಲ್ಲಿಯೋ ಸೋತಿಲ್ಲ. ಯಾರೇ ಮಾತಿಗೆ ನಿಂತರೂ ಅವರನ್ನು ಸೋಲಿಸಿದ್ದಾರೆ. ಕಿಚ್ಚ ಸುದೀಪ್ ಎದುರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವರು ಹಿಂದೇಟು ಹಾಕಿಲ್ಲ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್