- Kannada News Photo gallery Hanumantha Rajat And Bhavya Gowda Joins Boys Vs Girls Reality Show Cinema News in Kannada
Bigg Boss: ಬಿಗ್ ಬಾಸ್ ಮೂವರು ಸ್ಪರ್ಧಿಗಳಿಗೆ ಭರ್ಜರಿ ಸರ್ಪ್ರೈಸ್ ಕೊಟ್ಟ ಕಲರ್ಸ್
ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಹಂತ ತಲುಪಿದೆ. ಹೀಗಿರುವಾಗಲೇ ದೊಡ್ಮನೆಯಲ್ಲಿ ಇರುವ ಆರು ಸ್ಪರ್ಧಿಗಳ ಪೈಕಿ ಮೂವರಿಗೆ ದೊಡ್ಡ ಸರ್ ಪ್ರೈಸ್ ಒಂದು ಸಿಕ್ಕಿದೆ. ಅಷ್ಟಕ್ಕೂ ಏನು ಆ ಸರ್ ಪ್ರೈಸ್? ಮೂವರು ಸ್ಪರ್ಧಿಗಳು ಮಾತ್ರ ಹಾರ ಹಾಕಿ ನಿಂತಿದ್ದು ಏಕೆ?
Updated on: Jan 25, 2025 | 7:20 PM

ಕಲರ್ಸ್ ಕನ್ನಡದಲ್ಲಿ ಶೀಘ್ರವೇ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಈ ರಿಯಾಲಿಟಿ ಶೋಗೆ ಬಿಗ್ ಬಾಸ್ ಮನೆಯ ಮೂರು ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೀತಿ ಆಯ್ಕೆ ಆದ ಸ್ಪರ್ಧಿಗಳಿಗೆ ಹಾರ ಹಾಕಲಾಗಿದೆ.

ಮೊದಲು ರಜತ್ ಅವರಿಗೆ ಶೋಭಾ ಶೆಟ್ಟಿ ಅವರು ಹಾರ ಹಾಕಿದರು. ಈ ಮೂಲಕ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋಗೆ ಅವರನ್ನು ಆಯ್ಕೆ ಮಾಡಿದರು. ರಜತ್ ಅವರಿಗೆ ರಿಯಾಲಿಟಿ ಶೋ ಆಡಿದ ಅನುಭವ ಇದೆ. ಹೊಸ ಶೋಗೆ ಆಯ್ಕೆ ಆದ ವಿಚಾರ ಅವರಿಗೆ ಖುಷಿ ಕೊಟ್ಟಿದೆ.

ಭವ್ಯಾ ಗೌಡ ಅವರು ಕೂಡ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಆಯ್ಕೆ ಆಗಿದ್ದಾರೆ. ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಇದ್ದಾರೆ. ಅವರಿಗೆ ಈ ಆಫರ್ ಸಿಕ್ಕಿದ್ದಕ್ಕೆ ಭರ್ಜರಿ ಖುಷಿ ಇದೆ. ಅವರು ಸಂತಸ ಹೊರಹಾಕಿದ್ದಾರೆ.

ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಟಾಸ್ಕ್ ಆಡಿದ್ದಾರೆ. ಮೂರು ಬಾರಿ ಕ್ಯಾಪ್ಟನ್ ಕೂಡ ಆದರು. ಈ ಮೂಲಕ ಸ್ಟ್ರ್ರಾಂಗ್ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೆ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಅವರು ಉತ್ತಮವಾಗಿ ಆಡಬಹುದು.

ಹನುಮಂತ ಅವರು ದೊಡ್ಮನೆಯಲ್ಲಿ ಗಮನ ಸೆಳೆದರು. ಜೀ ಕನ್ನಡದಲ್ಲಿ ರಿಯಾಲಿಟಿ ಶೋ ಮಾಡಿದ್ದ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಈಗ ಮತ್ತೊಂದು ಆಫರ್ ಸಿಕ್ಕಿದೆ.

‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋಗೆ ಹನುಮಂತ ಅವರು ಬರಲಿದ್ದಾರೆ. ಧನರಾಜ್ ಅವರು ಹನುಮಂತನಿಗೆ ಮಾಲೆ ಹಾಕಿ ಹೊಸ ರಿಯಾಲಿಟಿ ಶೋಗೆ ಸ್ವಾಗತಿಸಿದರು ಅನ್ನೋದು ವಿಶೇಷ.
























