ಬಿಗ್​​ಬಾಸ್ ಎಲಿಮಿನೇಷನ್: ವಿಶೇಷ ಅಧಿಕಾರ ಬಳಸಿದ ಸುಧಿ, ಹೊರಬಂದಿದ್ದು ಯಾರು?

Bigg Boss Kannada 12: ಪ್ರತಿ ಭಾನುವಾರ ಬಿಗ್​​ಬಾಸ್ ಮನೆಯಿಂದ ಒಬ್ಬರು ಹೊರ ಹೋಗುತ್ತಾರೆ. ಕಳೆದ ಭಾನುವಾರ ಮಲ್ಲಮ್ಮ ಎಲಿಮಿನೇಟ್ ಆಗಿ ಹೊರಬಂದಿದ್ದರು. ಮಲ್ಲಮ್ಮ ಹೊರಗೆ ಬಂದಿದ್ದು ಹಲವು ವೀಕ್ಷಕರಿಗೆ ಬೇಸರ ತರಿಸಿತ್ತು. ಅದರಿಂದ ಸಾವರಿಸಿಕೊಳ್ಳುವ ಮುಂಚೆಯೇ ಇದೀಗ ಮತ್ತೊಂದು ಎಲಿಮಿನೇಷನ್ ಬಿಗ್​​ಬಾಸ್ ಮನೆಯಲ್ಲಿ ಆಗಿದೆ. ಆದರೆ ಈ ಬಾರಿಯ ಎಲಿಮಿನೇಷನ್​​ಗೆ ಸಖತ್ ಟ್ವಿಸ್ಟ್ ಸಹ ಇತ್ತು ಎಂಬುದು ವಿಶೇಷ.

ಬಿಗ್​​ಬಾಸ್ ಎಲಿಮಿನೇಷನ್: ವಿಶೇಷ ಅಧಿಕಾರ ಬಳಸಿದ ಸುಧಿ, ಹೊರಬಂದಿದ್ದು ಯಾರು?
Bigg Boss Kannada Elimination

Updated on: Nov 09, 2025 | 11:05 PM

ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಕಳೆದ ಭಾನುವಾರದ ಎಪಿಸೋಡ್​​ನಲ್ಲಿ ಮಲ್ಲಮ್ಮ ಎಲಿಮಿನೇಟ್ ಆಗಿ ಹೊರಬಂದಿದ್ದರು. ಮಲ್ಲಮ್ಮ ಹೊರಗೆ ಬಂದಿದ್ದು ಹಲವು ವೀಕ್ಷಕರಿಗೆ ಬೇಸರ ತರಿಸಿತ್ತು. ಅದರಿಂದ ಸಾವರಿಸಿಕೊಳ್ಳುವ ಮುಂಚೆಯೇ ಇದೀಗ ಮತ್ತೊಂದು ಎಲಿಮಿನೇಷನ್ ಬಿಗ್​​ಬಾಸ್ ಮನೆಯಲ್ಲಿ ಆಗಿದೆ. ಆದರೆ ಈ ಬಾರಿಯ ಎಲಿಮಿನೇಷನ್​​ಗೆ ಸಖತ್ ಟ್ವಿಸ್ಟ್ ಸಹ ಇತ್ತು ಎಂಬುದು ವಿಶೇಷ.

ಈ ವಾರ ನಾಮಿನೇಟ್ ಆದವರಲ್ಲಿ ಅಶ್ವಿನಿ, ರಕ್ಷಿತಾ ಇನ್ನೂ ಕೆಲವರು ನಿನ್ನೆಯ ಎಪಿಸೋಡಿನಲ್ಲೇ ಪಾರಾಗಿದ್ದರು. ಭಾನುವಾರದ ಎಪಿಸೋಡ್​​ನಲ್ಲಿ ಸ್ಪಂದನ, ಧನುಶ್, ರಾಶಿಕಾ ಇನ್ನೂ ಕೆಲವರು ಸೇಫ್ ಆದರು. ಕೊನೆಯದಾಗಿ ಕಾಕ್ರೂಚ್ ಸುಧಿ ಮತ್ತು ಚಂದ್ರಪ್ರಭ ಉಳಿದುಕೊಂಡರು. ಆ ಸಮಯದಲ್ಲಿ ಕಾಕ್ರೂಚ್ ಸುಧಿ ತಮ್ಮಲ್ಲಿದ್ದ ವಿಶೇಷ ಅಧಿಕಾರ ಬಳಸಿದರು. ಆ ಅಧಿಕಾರ ಬಳಸುವ ಮೂಲಕ ಬಿಗ್​​ಬಾಸ್ ಮನೆಯಲ್ಲೇ ಉಳಿದುಕೊಂಡರು. ಚಂದ್ರಪ್ರಭಾ ಅವರು ಮತಗಳ ಲೆಕ್ಕಾಚಾರವಿಲ್ಲದೆ ಹೊರಗೆ ಬರಲೇ ಬೇಕಾಯ್ತು.

ಅಸಲಿಗೆ ಚಂದ್ರಪ್ರಭ ಅವರಿಗೂ ಸಹ ಅದೇ ಬೇಕಿತ್ತು. ಚಂದ್ರಪ್ರಭ ಅವರು ಬಿಗ್​​ಬಾಸ್ ಮನೆಯಿಂದ ಹೊರಗೆ ಬರಬೇಕೆಂದು ಮೊದಲೇ ನಿಶ್ಚಯ ಮಾಡಿದ್ದರು. ವಾರದ ಪಂಚಾಯಿತಿ ನಡೆಯುವ ಸಂದರ್ಭದಲ್ಲಿ ಬ್ರೆಕ್ ಬಿಟ್ಟಾಗ ಚಂದ್ರಪ್ರಭಾ ಅವರು ಯಾರಿಗೂ ಹೇಳದೆ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗುವ ಪ್ರಯತ್ನ ಸಹ ಮಾಡಿದ್ದರು. ಬಿಗ್​​ಬಾಸ್ ಬಾಗಿಲು ತೆರೆದು, ಗೇಟು ಡೋರನ್ನು ಬಡಿಯುತ್ತಾ ಬಾಗಿಲು ತೆಗೆಯುವಂತೆ ಕೇಳಿ ಕೊಳ್ಳುತ್ತಿದ್ದರು. ಗಿಲ್ಲಿ ಸೇರಿದಂತೆ ಇನ್ನೂ ಕೆಲವರು ಹೋಗಿ ಅವರನ್ನು ಮತ್ತೆ ಒಳಗೆ ಕರೆದುಕೊಂಡು ಬಂದರು. ಆದರೆ ಅಂತಿಮವಾಗಿ ಅವರು ಬಯಸಿದಂತೆ ಅವರೇ ಹೊರಗೆ ಬಂದರು.

ಇದನ್ನೂ ಓದಿ:ಬಿಗ್​ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಹೊರಗೆ ಬಂದ ಬಳಿಕವೂ ಸಹ ಅವರು ಖುಷಿಯಾಗಿರಲಿಲ್ಲ. ನನಗೆ ಬಿಗ್​​ಬಾಸ್ ಮನೆಯಲ್ಲಿ ಹೇಗಿರಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದರು. ಅಲ್ಲದೆ ಇದೇ ದಿನ ಸುದೀಪ್ ಆಡಿಸಿದ ಒಂದು ಚಟುವಟಿಕೆಯಲ್ಲಿ ಚಂದ್ರಪ್ರಭ ಅವರಿಗೆ ಊಸರವಳ್ಳಿ ಎಂಬ ಬಿರುದನ್ನು ಸ್ಪರ್ಧಿ ಒಬ್ಬರು ನೀಡಿದರು. ಅದು ಸಹ ಅವರಿಗೆ ಬಹಳ ಬೇಸರ ತರಿಸಿತು. ಒಟ್ಟಾರೆಯಾಗಿ ಬೇಸರದಿಂದಲೇ ಬಿಗ್​​ಬಾಸ್ ಮನೆಯಿಂದ ಚಂದ್ರಪ್ರಭ ಅವರು ಹೊರಗೆ ಬಂದರು. ವಿಶೇಷತೆ ಏನೆಂದರೆ ಇದೇ ವಾರ ಅವರು ಮನೆ ಮಂದಿಯಿಂದ ಉತ್ತಮ ಎನಿಸಿಕೊಂಡಿದ್ದರು. ಆದರೆ ಇದೇ ವಾರವೇ ಅವರು ಬಿಗ್​​ಬಾಸ್ ಮನೆಯಿಂದ ಎಲಿಮಿನೇಟ್ ಸಹ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ