ಬಿಗ್ ಬಾಸ್: ಮಂಗಳವಾರ ಸಂಜೆವರೆಗೆ ಮಾತ್ರ ವೋಟ್ ಹಾಕಲು ಅವಕಾಶ

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈಗ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ ಶೈವ, ಧನುಶ್, ಧ್ರುವಂತ್, ರಘು ಹಾಗೂ ಅಶ್ವಿನಿ ಗೌಡ ಇದ್ದಾರೆ. ಇವರ ಪೈಕಿ ಧನುಶ್ ನೇರವಾಗಿ ಟಾಪ್ 6ಕ್ಕೆ ಏರಿದ್ದಾರೆ. ಉಳಿದಿರೋದು ಆರು ಮಂದಿ ಮಾತ್ರ. ಅವರೆಲ್ಲರೂ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಬಿಗ್ ಬಾಸ್: ಮಂಗಳವಾರ ಸಂಜೆವರೆಗೆ ಮಾತ್ರ ವೋಟ್ ಹಾಕಲು ಅವಕಾಶ
ಬಿಗ್ ಬಾಸ್

Updated on: Jan 12, 2026 | 12:03 PM

‘ಬಿಗ್ ಬಾಸ್ ಕನ್ನಡ’ 12ನೇ (BBK 12) ಸೀಸನ್​ನ ಕೊನೆಯ ವಾರ ಬಂದಿದೆ. ಈಗ ದೊಡ್ಮನೆಯಲ್ಲಿ ಉಳಿದುಕೊಂಡಿರೋದು ಕೇವಲ ಏಳು ಜನರು ಮಾತ್ರ. ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿ ಹೊರ ಹೋಗಿದ್ದಾರೆ.ಈಗ ಜಿಯೋ ಹಾಟ್​ಸ್ಟಾರ್​​ನಲ್ಲಿ ವೋಟ್ ಹಾಕಲು ಅವಕಾಶ ನಿಡಲಾಗಿದೆ. ಈ ವೋಟಿಂಗ್ ಲೈನ್ ಜನವರಿ 13ರ ಸಂಜೆವರೆಗೆ ತೆರೆದಿರಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈಗ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ ಶೈವ, ಧನುಶ್, ಧ್ರುವಂತ್, ರಘು ಹಾಗೂ ಅಶ್ವಿನಿ ಗೌಡ ಇದ್ದಾರೆ. ಇವರ ಪೈಕಿ ಧನುಶ್ ನೇರವಾಗಿ ಟಾಪ್ 6ಕ್ಕೆ ಏರಿದ್ದಾರೆ. ಉಳಿದಿರೋದು ಆರು ಮಂದಿ ಮಾತ್ರ. ಅವರೆಲ್ಲರೂ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಈ ಆರು ಮಂದಿ ಪೈಕಿ ಒಬ್ಬರು ಈ ವಾರ ಮನೆಯಿಂದ ಹೊರಕ್ಕೆ ಹೋಗಲಿದ್ದಾರೆ. ಮಂಗಳವಾರ ರಾತ್ರಿ ಎಲಿಮಿನೇಷನ್ ನಡೆಯಲಿದ್ದು, ಬುಧವಾರದ ಎಪಿಸೋಡ್​​ನಲ್ಲಿ ಇದು ಪ್ರಸಾರ ಕಾಣುವ ಸಾಧ್ಯತೆ ಇದೆ. ಅವರು ಯಾರು ಎನ್ನುವ ಪ್ರಶ್ನೆ ಮೂಡಿದೆ.

ಸದ್ಯ ವೋಟಿಂಗ್​ ಲೈನ್ ಓಪನ್ ಆಗಿದ್ದು, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ ಶೈವ, ಧ್ರುವಂತ್, ರಘು ಹಾಗೂ ಅಶ್ವಿನಿ ಗೌಡ ಹೆಸರು ಇದೆ. ಇವರಿಗೆ ವೋಟ್ ಮಾಡಬೇಕು. ಮಂಗಳವಾರ ಸಂಜೆ 6 ಗಂಟೆವರೆಗೆ ಮಾತ್ರ ವೋಟ್ ಮಾಡಲು ಅವಕಾಶ ಇದೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ಮರಳಿದ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್

ಹಾಗಂದ ಮಾತ್ರಕ್ಕೆ ಈ ಮತಗಳನ್ನು ಫಿನಾಲೆಗೆ ಪರಿಗಣಿಸೋದಿಲ್ಲ. ಈ ಮತಗಳು ಪರಿಗಣನೆಗೆ ಬರೋದು ಕೇವಲ ಮಧ್ಯವಾರದ ಎಲಿಮಿನೇಷನ್​ಗೆ ಮಾತ್ರ. ಆ ಬಳಿಕ ಬುಧವಾರ ರಾತ್ರಿ ಫಿನಾಲೆ ವಾರಕ್ಕೆ ವೋಟಿಂಗ್ ಲೈನ್ ಆರಂಭ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.