
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ವಾರದಿಂದ ವಾರಕ್ಕೆ ಆಟದ ರಂಗು ಬದಲಾಗುತ್ತಿದೆ. ಇದೀಗ ಸ್ಪರ್ಧಿಗಳ ನಡುವೆ ಬಿರುಕು ಮೂಡಿಸುವಂತಹ ಹೊಸ ಟಾಸ್ಕ್ ಒಂದನ್ನು ಬಿಗ್ ಬಾಸ್ ನೀಡಿದ್ದಾರೆ. ಕ್ಯಾಪ್ಟನ್ಸಿ ಓಟಕ್ಕೆ ನೇರವಾಗಿ ಆಯ್ಕೆಯಾಗಲು ಸಹ ಸ್ಪರ್ಧಿಯ ರಹಸ್ಯವನ್ನು ಬಯಲು ಮಾಡುವ ಸವಾಲನ್ನು ನೀಡಲಾಗಿದ್ದು, ಗಾನವಿ ಅವರು ಗಗನ್ ಚಿನ್ನಪ್ಪ ಅವರ ಸೀಕ್ರೆಟ್ ಅನ್ನು ಇಡೀ ಮನೆಯ ಮುಂದೆ ಎಕ್ಸ್‌ಪೋಸ್ ಮಾಡಿದ್ದಾರೆ.
‘ಯಾರ ಹತ್ತಿರವೂ ಹೇಳಿಕೊಂಡಿರದಂತಹ ಒಂದು ಸೀಕ್ರೆಟ್ ಅನ್ನು ತೋಡಿಕೊಳ್ಳಲು ಬಿಗ್ ಬಾಸ್ ನಿಮಗೆಲ್ಲಾ ಒಂದು ಅವಕಾಶ ನೀಡುತ್ತಾರೆ’ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ಅದರಂತೆ ಸ್ಪರ್ಧಿಗಳು ತಮ್ಮ ವೈಯಕ್ತಿಕ ರಹಸ್ಯಗಳನ್ನು ಸೀಕ್ರೆಟ್ ರೂಮ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ.
ಮನೆಯ ಕ್ಯಾಪ್ಟನ್ಸಿ ಓಟಕ್ಕೆ ನೇರವಾಗಿ ಆಯ್ಕೆಯಾಗಲು ಬಿಗ್ ಬಾಸ್ ಒಂದು ಷರತ್ತು ವಿಧಿಸಿದ್ದರು. ಅದರಂತೆ ಸ್ಪರ್ಧಿಯೊಬ್ಬರನ್ನು ಆಯ್ಕೆ ಮಾಡಿ, ಅವರ ಸೀಕ್ರೆಟ್ ಅನ್ನು ಇಡೀ ಮನೆಯ ಮುಂದೆ ಬಹಿರಂಗಪಡಿಸಬೇಕಿತ್ತು. ಈ ಅವಕಾಶವನ್ನು ಬಳಸಿಕೊಂಡ ಗಾನವಿ ಅವರು, ‘ಗಗನ್ ಚಿನ್ನಪ್ಪ ಅವರ ಸೀಕ್ರೆಟ್ ಅನ್ನು ಎಕ್ಸ್‌ಪೋಸ್ ಮಾಡುತ್ತೇನೆ’ ಎಂದು ಘೋಷಿಸಿ ಬಜರ್ ಒತ್ತಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ 13’ ಫಿನಾಲೆ ಸಮೀಪಿಸುವಾಗ ಯಶಸ್ ಆಟಕ್ಕೆ ಆಘಾತ; ಸೌಂದರ್ಯಾಗೆ ಬೇಸರ
ತಮ್ಮ ರಹಸ್ಯವನ್ನು ಇಡೀ ಮನೆಯ ಮುಂದೆ ಬಯಲು ಮಾಡಿದ್ದಕ್ಕೆ ಗಗನ್ ಚಿನ್ನಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾನವಿ ನಿರ್ಧಾರಕ್ಕೆ ಕೆಂಡಾಮಂಡಲವಾಗಿರುವ ಗಗನ್, ‘ಎಲ್ಲಿ ಇಡಬೇಕು ಅಲ್ಲಿ ಇಡ್ತೀನಿ ನೋಡು, ಇನ್ಮೇಲಿಂದ ಗೇಮ್ ಇವಾಗ ಸ್ಟಾರ್ಟ್, ತಗೋ’ ಎಂದು ನೇರವಾಗಿ ಸವಾಲು ಹಾಕಿದ್ದಾರೆ. ಒಟ್ಟಿನಲ್ಲಿ ಗಗನ್ ಅವರ ಆ ರಹಸ್ಯ ಏನು ಮತ್ತು ಮುಂದೆ ಮನೆಯಲ್ಲಿ ಯಾವ ರೀತಿಯ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:22 am, Wed, 25 November 26