AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಸಂಗೀತಾ ಭಟ್ ಎಂಟ್ರಿ, ಬಿಗ್​​ಬಾಸ್​​ಗೆ ಆಲ್​ ದಿ ಬೆಸ್ಟ್ ಹೇಳಿದ ಸುದೀಪ್

Bigg Boss Kannada Season 13: ಟೀಕೆ, ನಿಂದನೆಗಳಿಂದ ಬೇಸತ್ತು ಚಿತ್ರರಂಗದಿಂದಲೇ ದೂರ ಸರಿದಿದ್ದರು ಸಂಗೀತಾ, ಆದರೆ ಇತ್ತೀಚೆಗೆ ಮತ್ತೆ ಚಿತ್ರರಂಗಕ್ಕೆ ಮರಳಿರುವ ಸಂಗೀತಾ, ಇದೀಗ ಬಿಗ್​​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಸಂಗೀತಾ, ಬಿಗ್​​ಬಾಸ್ ಮನೆಗೆ ಬಂದಿದ್ದಕ್ಕೆ, ಬಿಗ್​​ಬಾಸ್​​ಗೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ ಸುದೀಪ್. ಅಷ್ಟಕ್ಕೂ ಬಿಗ್​ ಬಾಸ್​​ ಗೆ ಸುದೀಪ್ ಆಲ್ ದಿ ಬೆಸ್ಟ್ ಹೇಳಿದ್ದು ಯಾಕೆ?

Bigg Boss Kannada: ಸಂಗೀತಾ ಭಟ್ ಎಂಟ್ರಿ, ಬಿಗ್​​ಬಾಸ್​​ಗೆ ಆಲ್​ ದಿ ಬೆಸ್ಟ್ ಹೇಳಿದ ಸುದೀಪ್
Sangeeta Bhatt
ಮಂಜುನಾಥ ಸಿ.
|

Updated on:Sep 06, 2026 | 9:36 PM

Share

ಮುಖ್ಯಾಂಶಗಳು

  • ನಟಿ ಸಂಗೀತಾ ಭಟ್ ಬಿಗ್​ಬಾಸ್​ ಕನ್ನಡಗೆ ಬಂದಿದ್ದಾರೆ.
  • ಹಲವಾರು ಸಿನಿಮಾಗಳಲ್ಲಿ ಸಂಗೀತಾ ಭಟ್ ನಟನೆ ಮಾಡಿದ್ದಾರೆ.
  • ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಈಗ ಮತ್ತೆ ವಾಪಸ್ ಬಂದಿದ್ದಾರೆ.

ಬಿಗ್​​ಬಾಸ್ ಮನೆಗೆ ನಟಿ ಸಂಗೀತಾ ಭಟ್ ಕಾಲಿರಿಸಿದ್ದಾರೆ. ಸಂಗೀತಾ ಭಟ್, ತಾವಾಯ್ತು ತಮ್ಮ ಸಿನಿಮಾ ಆಯ್ತು ಎಂದು ಇದ್ದಿದ್ದೇ ಹೆಚ್ಚು. ಅವರು ಮಾಡಿದ ಮೀ ಟೂ ಆರೋಪದಿಂದಾಗಿ ಸಾಕಷ್ಟು ಟೀಕೆ, ನಿಂದನೆಗಳಿಗೆ ಗುರಿ ಆಗಿದ್ದರು. ಅವರ ಬೋಲ್ಡ್ ಫೋಟೊಗಳಿಗೂ ಸಾಕಷ್ಟು ನೆಗೆಟಿವ್ ಕಮೆಂಟುಗಳು ಬರುತ್ತಿದ್ದವು. ಇದರಿಂದ ಬೇಸತ್ತು ಚಿತ್ರರಂಗದಿಂದಲೇ ದೂರ ಸರಿದಿದ್ದರು ಸಂಗೀತಾ, ಆದರೆ ಇತ್ತೀಚೆಗೆ ಮತ್ತೆ ಚಿತ್ರರಂಗಕ್ಕೆ ಮರಳಿರುವ ಸಂಗೀತಾ, ಇದೀಗ ಬಿಗ್​​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಸಂಗೀತಾ, ಬಿಗ್​​ಬಾಸ್ ಮನೆಗೆ ಬಂದಿದ್ದಕ್ಕೆ, ಬಿಗ್​​ಬಾಸ್​​ಗೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ ಸುದೀಪ್.

ಸಂಗೀತಾ ಅವರನ್ನು ಬಿಡಲು ಅವರ ಪತಿ, ನಟ ಸುದರ್ಶನ್ ಅವರು ಬಂದಿದ್ದರು. ಪತ್ನಿ ಸಂಗೀತಾ ಅವರ ವ್ಯಕ್ತಿತ್ವವನ್ನು ವಿವರಿಸಿದ ಸುದರ್ಶನ್, ‘ಸಂಗೀತಾ ಬಹಳ ವಿಭಿನ್ನ ವ್ಯಕ್ತಿತ್ವದವರು, ಬಹಳ ಶಿಸ್ತಿನ ವ್ಯಕ್ತಿ. ಪ್ರತಿಯೊಂದು ವ್ಯವಸ್ಥಿತವಾಗಿರಬೇಕು, ವ್ಯವಸ್ಥಿತವಾಗಿ ಇಲ್ಲವೆಂದರೆ ಅವರು ಬಹಳ ಸಿಟ್ಟು ಮಾಡಿಕೊಳ್ಳುತ್ತಾರೆ. ಅವರ ಸಿಟ್ಟು ತಡೆದುಕೊಳ್ಳಲಾಗುವುದಿಲ್ಲ’ ಎಂದೆಲ್ಲ ಸುದರ್ಶನ್ ವಿವರಿಸಿದರು.

ಸುದರ್ಶನ್ ಅವರು ಸಂಗೀತಾ ಅವರು ಗ್ಯಾಸ್ ಆಫ್ ಮಾಡದೇ ಮಲಗುವ ಬಗ್ಗೆ ಸನ್ನಿವೇಶವೊಂದನ್ನು ವಿವರಿಸಿದರು. ಆ ಸನ್ನಿವೇಶ ಇಟ್ಟುಕೊಂಡು ತಮಾಷೆ ಮಾಡಿದ ಸುದೀಪ್, ‘ಬಿಗ್​​ಬಾಸ್ ಮನೆಯಲ್ಲಿ ಹಾಗೆ ಮಾಡಬೇಡಿ, ಆಮೇಲೆ ನಾವು ಬೇರೆ ಸೆಟ್ ಹುಡುಕಿಕೊಳ್ಳಬೇಕಾಗುತ್ತದೆ’ ಎಂದರು.  ಬಳಿಕ ತಮಾಷೆ ಮಾಡುತ್ತಾ, ‘ಬಂದ ಸ್ಪರ್ಧೆಗಳಿಗೆ ಆಲ್​​ ದಿ ಬೆಸ್ಟ್’ ಹೇಳುವುದು ರೂಢಿ ಆದರೆ ಈ ಬಾರಿ ಬಿಗ್​​ಬಾಸ್​ ಗೆ ಆಲ್​ ದಿ ಬೆಸ್ಟ್ ಹೇಳಬೇಕಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ಸಂಗೀತಾ ಭಟ್ ಈ ಸ್ಥಿತಿಗೆ ಕಾರಣವೇನು? ಮಹಿಳೆಯಾಗಿ ಈ ತಪ್ಪು ಮಾಡಬೇಡಿ

ಸಂಗೀತಾ ಭಟ್ ಅವರು ಮೀ ಟೂ ಆರೋಪ ಮಾಡಿದ್ದರು. ಆದರೆ ಅದೇ ಆರೋಪ ಅವರಿಗೆ ತಿರುಗುಬಾಣದಂತಾಗಿಬಿಟ್ಟಿತು. ಸಾಕಷ್ಟು ಟೀಕೆ, ನಿಂದನೆಗಳನ್ನು ಎದುರಿಸಿದರು. ತಾವು ಆರೋಪ ಮಾಡಿದ್ದಕ್ಕೆ ಕಾರಣವನ್ನೂ ಅವರು ಬಿಗ್​​ಬಾಸ್​​ನಲ್ಲಿ ಹೇಳಿದರು. ತಮಗೆ ಪುರುಷರ ಬಗ್ಗೆ ಅಪನಂಬಿಕೆ, ಅಸ್ಪಷ್ಟ ಭಯ ಇರುವುದಾಗಿಯೂ ಹೇಳಿಕೊಂಡರು ಸಂಗೀತಾ, ಆದರೆ ಪತಿ ಸುದರ್ಶನ್ ಅವರ ಬೆಂಬಲ, ಒತ್ತಾಸೆಯಿಂದ ತಾವು ಮತ್ತೆ ಚಿತ್ರರಂಗಕ್ಕೆ ಕಾಲಿರಿಸಿದ್ದಾಗಿ ಸಂಗೀತಾ ಭಟ್ ಹೇಳಿದ್ದಾರೆ.

ಸಂಗೀತಾ ಭಟ್ ಅವರು ಸುಮಾರು 18 ವರ್ಷದಿಂದಲೂ ಚಿತ್ರರಂಗದಲ್ಲಿದ್ದಾರೆ. ‘ಮಾಮೂ ಟೀ ಅಂಗಡಿ’ ಬಳಿಕ ಯೋಗರಾಜ್ ಭಟ್ ಪ್ರಸ್ತುತ ಪಡಿಸಿದ್ದ ‘ಪ್ರೀತಿ, ಗೀತಿ, ಇತ್ಯಾದಿ’, ವಿಜಯ್ ರಾಘವೇಂದ್ರ ನಟಿಸಿದ್ದ ‘ಕಿಸ್ಮತ್’ ಆರಂಭದಲ್ಲಿ ಸಂಗೀತಾ ಭಟ್ ನಟಿಸಿದ ಸಿನಿಮಾಗಳು. ಕನ್ನಡ ಮಾತ್ರವೇ ಅಲ್ಲದೆ ತೆಲುಗು ಹಾಗೂ ತಮಿಳು ಭಾಷೆ ಸಿನಿಮಾಗಳಲ್ಲಿಯೂ ಸಂಗೀತಾ ಭಟ್ ನಟನೆ ಮಾಡಿದ್ದಾರೆ. ತಮಿಳಿನ ‘ಡೂ’, ‘ಕಾ ಕಾ ಕಾ’, ತೆಲುಗಿನ ‘ಕಾಕಿ’ ಇನ್ನೂ ಕೆಲ ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದಾರೆ. ಆದರೆ ಒಂದು ಸಮಯದಲ್ಲಿ ಚಿತ್ರರಂಗದಿಂದ ದೂರವಾಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:58 pm, Sun, 6 September 26

Follow Us