ಸಂಗೀತಾ ಭಟ್ ಈ ಸ್ಥಿತಿಗೆ ಕಾರಣವೇನು? ಮಹಿಳೆಯಾಗಿ ಈ ತಪ್ಪು ಮಾಡಬೇಡಿ
ಸಂಗೀತಾ ಭಟ್ ಅವರು ಸಿನಿಮಾಗಳ ಮೂಲಕ ಗಮನ ಸೆಳೆದವರು. ಆದರೆ, ಈಗ ಅವರು ಬೆಡ್ ಮೇಲೆ ಮಲಗಿದ್ದಾರೆ. ಅವರಿಗೆ ಆಪರೇಷನ್ ಕೂಡ ಆಗಿದೆ. ಮಹಿಳೆಯರಾಗಿ ಈ ತಪ್ಪು ಮಾಡಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಆ ಬಗ್ಗೆ ಇಲ್ಲಿದೆ ವಿವರ.
Updated on: Oct 17, 2025 | 5:00 PM

ನಟಿ ಸಂಗೀತಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾರೆ. ಈ ವೇಳೆ ಅವರು ಇದರ ಹಿಂದಿರುವ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

ಸಂಗೀತಾ ಭಟ್ ಅವರಿಗೆ ಕಳೆದ ಕೆಲವು ತಿಂಗಳಿಂದ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗಿತ್ತು. ಪರೀಕ್ಷೆ ಮಾಡಿದಾಗ ಅವರ ಗರ್ಭಕೋಶದಲ್ಲಿ 1.75 ಸೆಂಟಿಮೀಟರ್ನ ಗಡ್ಡೆ ಕಾಣಿಸಿದೆ. ಇದರಿಂದಾಗಿ ಅವರು ಅತೀವ ನೋವು ಅನುಭವಿಸುತ್ತಿದ್ದರು.

ಗಡ್ಡೆಯನ್ನು ತೆಗೆಯಲು ‘ಹಿಸ್ಟ್ರೋಸ್ಟೋಫಿಕ್ ಪಾಲಿಪೆಕ್ಟ್ರೊಮಿ’ ಹೆಸರಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕಾರಣದಿಂದ ಅವರು ಆಸ್ಪತ್ರೆ ಬೆಡ್ ಮೇಲೆ ಮಲಗಬೇಕಾಯಿತು. ಶೂಟಿಂಗ್ಗಳನ್ನು ಮುಗಿಸಿ ಅವರು ಈ ಶಸ್ತ್ರಚಿಕಿತ್ಸೆ ಮಾಡಿಕೊಂಡರು.

ಈ ಸಮಸ್ಯೆ ಇದ್ದರೆ ಋತುಚಕ್ರ ಸರಿಯಾಗಿ ಆಗುವುದಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ಅಲ್ಲದೆ, ಕೂದಲು ಉದುರುವಿಕೆ ಸಮಸ್ಯೆ ಕೂಡ ಎದುರಾಗುತ್ತದೆಯಂತೆ. ಈಗ ಅವರು ಸಮಸ್ಯೆಯ ವಿರುದ್ಧ ಜಯಿಸಿದ್ದಾರೆ. ಅವರು ಬೇಗ ರಿಕವರಿ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಈ ಕಷ್ಟದ ಸಮಯದಲ್ಲಿ ಅವರ ಪತಿ ಸುದರ್ಶನ್ ರಂಗಪ್ರಸಾದ್ ಕೂಡ ಬೆಂಬಲಕ್ಕೆ ನಿಂತಿದ್ದಾರೆ. ಅವರು ಪತ್ನಿಗೆ ಸಂಪೂರ್ಣ ಸಪೋರ್ಟ್ ಕೊಟ್ಟಿದ್ದಾರೆ. ಅವರು ಆಸ್ಪತ್ರೆಯಲ್ಲಿದ್ದಾಗ ಅವರು ಕಾಳಜಿವಹಸಿದ್ದಾರೆ.




