
ಬಿಗ್ ಬಾಸ್ನ (Bigg Boss) ಏಳನೇ ವಾರದಲ್ಲಿ ಸುಧಿ ಅವರು ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಎಪಿಸೋಡ್ 50ನೇ ದಿನ ಸಮೀಪಿಸುತ್ತಿರುವ ಸಮಯಧಲ್ಲೇ ಸುಧಿ ಅವರು ಹೊರ ಹೋದರು. ಬಿಗ್ ಬಾಸ್ನಿಂದ ಹೋಗುವುದಕ್ಕೂ ಮೊದಲು ವೇದಿಕೆ ಮೇಲೆ ಸುದೀಪ್ ಜೊತೆ ಅವರು ಚರ್ಚೆ ಮಾಡಿದರು. ಈ ವೇಳೆ ವೇದಿಕೆ ಮೇಲೆ ಅವರ ಪತ್ನಿ ಕೂಡ ಇದ್ದರು. ಈ ಸಂದರ್ಭದಲ್ಲಿ ಸುಧಿ ಪತ್ನಿ ಇಬ್ಬರ ಮೇಲೆ ನೇರ ಆರೋಪ ಮಾಡಿದರು.
ಸುಧಿ ಅವರು ವಿಲನ್ ಪಾತ್ರಗಳ ಮೂಲಕ ಸಾಕಷ್ಟು ಫೇಮಸ್ ಆದವರು. ವಿಲನ್ ಪಾತ್ರ ಮಾಡುವುದರಿಂದ ಅವರು ಖಡಕ್ ಆಗಿ ನಡೆದುಕೊಳ್ಳಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಅವರು ಮಾಡುವ ಪಾತ್ರಕ್ಕೂ ವ್ಯಕ್ತಿತ್ವಕ್ಕೂ ಯಾವುದೇ ಸಂಬಂಧ ಇಲ್ಲ. ಅದು ಬಿಗ್ ಬಾಸ್ ಮನೆಯಲ್ಲಿ ಸಾಬೀತಾಗಿದೆ. ಅವರು ಮೃದುವಾಗಿ ನಡೆದುಕೊಂಡಿದ್ದೇ ಹೆಚ್ಚು. ಅಲ್ಲದೆ, ಅಶ್ವಿನಿ ಹಾಗೂ ಜಾನ್ವಿ ಜೊತೆ ಹೆಚ್ಚು ಸಮಯ ಕಳೆದರು. ಇದು ಅವರಿಗೆ ನೆಗೆಟಿವ್ ಆಯಿತು ಎಂದು ಅವರ ಪತ್ನಿ ಅಭಿಪ್ರಾಯಪಟ್ಟರು.
ಸುಧಿ ಪತ್ನಿ ಸುದೀಪ್ ಅವರ ದೊಡ್ಡ ಅಭಿಮಾನಿಯಂತೆ. ಈ ಕಾರಣದಿಂದಲೇ ಸುದೀಪ್ ಅವರು ಸುಧಿ ಪತ್ನಿಯನ್ನು ವೇದಿಕೆ ಮೇಲೆ ಕರೆದರು. ಈ ವೇಳೆ ಸುದೀಪ್ ಅವರು, ‘ಎಲ್ಲಿ ತಪ್ಪಾಯಿತು ಎಂದು ನಿಮಗೆ ಅನಿಸುತ್ತದೆ’ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಅವರು ಮುಚ್ಚುಮರೆ ಇಲ್ಲದೆ ಉತ್ತರ ನೀಡಿದರು.
‘ಇನ್ನೂ ಎಫರ್ಟ್ ಹಾಕಿ ಆಡಬೇಕಿತ್ತು. ಅವರಲ್ಲಿ ಆ ಸಾಮರ್ಥ್ಯ ಇತ್ತು. ಅಶ್ವಿನಿ, ಜಾನ್ವಿ ಅವರ ಗುಂಪಿನಿಂದ ಹೊರ ಬಂದು ಆಡಬೇಕಿತ್ತು’ ಎಂದು ಸುದೀಪ್ ಎದುರು ನೇರವಾಗಿ ಹೇಳಿದರು ಸುಧಿ ಪತ್ನಿ. ಈ ಮೂಲಕ ಅವರಿಬ್ಬರ ಸಹವಾಸ ಕಡಿಮೆ ಮಾಡಿದ್ದರೆ ಪತಿ ಇನ್ನೂ ಕೆಲವು ದಿನ ಇರುತ್ತಿದ್ದರು ಎಂಬುದು ಅವರ ಅಭಿಪ್ರಾಯ ಆಗಿದೆ.
ಇದನ್ನೂ ಓದಿ: ಯಾರೂ ಒಪ್ಪದ ಕೆಲಸ ಮಾಡಿದ ಜಾನ್ವಿ ಆ್ಯಂಡ್ ಟೀಂ; ಬಿಗ್ ಬಾಸ್ ದೊಡ್ಡ ಶಿಕ್ಷೆ
ಕಳೆದ ವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸುಧಿ ಅವರು ನಾಮಿನೇಷನ್ನಿಂದ ಬಚಾವ್ ಆಗುತ್ತಾ ಬಂದಿದ್ದರು. ಕೊನೆಗೆ ಕ್ಯಾಪ್ಟನ್ ಮಾಳು ಬಳಿ ಅವರು ಸಿಕ್ಕಿ ಬಿದ್ದರು. ಮಾಳು ಅವರು ಸುಧಿಯನ್ನು ನೇರವಾಗಿ ನಾಮಿನೇಟ್ ಮಾಡಿದರು. ಇದು ಅವರಿಗೆ ದುಬಾರಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:06 am, Mon, 17 November 25