ಹೆಚ್ಚುತ್ತಲೇ ಇದೆ ಬಿಗ್ ಬಾಸ್ ಟಿಆರ್​ಪಿ; ಸಂಕಷ್ಟದಲ್ಲಿ ‘ಸೀತಾ ರಾಮ’ ಧಾರಾವಾಹಿ

|

Updated on: Dec 14, 2023 | 1:04 PM

Kannada Serials TRP: ನಗರ ಭಾಗದಲ್ಲಿ ವಾರದ ದಿನಗಳಲ್ಲಿ 7.6 ಹಾಗೂ ವಾರಾಂತ್ಯದಲ್ಲಿ 8.4 ರೇಟಿಂಗ್ ಪಡೆದಿದೆ. ಬಿಗ್ ಬಾಸ್​ನಲ್ಲಿ ಈ ಬಾರಿ ಜಗಳ ಜೋರಾಗಿದೆ. ಈ ಕಾರಣಕ್ಕೆ ವೀಕ್ಷಕರನ್ನು ಶೋ ಸೆಳೆಯುತ್ತಿದೆ.

ಹೆಚ್ಚುತ್ತಲೇ ಇದೆ ಬಿಗ್ ಬಾಸ್ ಟಿಆರ್​ಪಿ; ಸಂಕಷ್ಟದಲ್ಲಿ ‘ಸೀತಾ ರಾಮ’ ಧಾರಾವಾಹಿ
ಸುದೀಪ್​-ವೈಷ್ಣವಿ
Follow us on

ಈ ಬಾರಿ ಬಿಗ್ ಬಾಸ್ (Bigg Boss) ಎಲ್ಲರ ಗಮನ ಸೆಳೆಯುತ್ತಿದೆ. ಒಳ್ಳೆಯ ಟಿಆರ್​ಪಿ ಪಡೆದುಕೊಂಡು ಈ ಶೋ ಮುನ್ನುಗ್ಗುತ್ತಿದೆ. ವಾರ ಕಳೆದಂತೆ ಬಿಗ್ ಬಾಸ್ ನೋಡುವರ ಸಂಖ್ಯೆ ಹೆಚ್ಚುತ್ತಿದೆ. ಇತರ ವಾಹಿನಿಗಳಲ್ಲಿ ಆ ಸಂದರ್ಭದಲ್ಲಿ ಪ್ರಸಾರ ಆಗುವ ಧಾರಾವಾಹಿಗಳ ಟಿಆರ್​ಪಿ ಮೇಲೆ ಬಿಗ್ ಬಾಸ್ ಪ್ರಭಾವ ಬೀರಿದೆ. ಹಾಗಾದರೆ, ಬಿಗ್ ಬಾಸ್​​ಗೆ ಸಿಗುತ್ತಿರುವ ಟಿಆರ್​ಪಿ ಎಷ್ಟು? ಉಳಿದ ಧಾರಾವಾಹಿಗಳು ಪಡೆಯುತ್ತಿರುವ ಟಿಆರ್​ಪಿ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್

ಬಿಗ್ ಬಾಸ್​​ ವಾರದ ದಿನ ಹಾಗೂ ವಾರಾಂತ್ಯದಲ್ಲಿ ಒಳ್ಳೆಯ ಟಿಆರ್​ಪಿಯನ್ನೇ ಪಡೆಯುತ್ತಿದೆ. ಈ ಶೋ ರಾತ್ರಿ 9:30ಕ್ಕೆ ಪ್ರಸಾರ ಆರಂಭಿಸುವುದರಿಂದ ಇದನ್ನು ನೋಡುಗರ ಸಂಖ್ಯೆ ಕಡಿಮೆ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಈ ಊಹೆ ತಪ್ಪಾಗಿತ್ತು. ನಗರ ಭಾಗದಲ್ಲಿ ವಾರದ ದಿನಗಳಲ್ಲಿ 7.6 ಹಾಗೂ ವಾರಾಂತ್ಯದಲ್ಲಿ 8.4 ರೇಟಿಂಗ್ ಪಡೆದಿದೆ. ಬಿಗ್ ಬಾಸ್​ನಲ್ಲಿ ಈ ಬಾರಿ ಜಗಳ ಜೋರಾಗಿದೆ. ಈ ಕಾರಣಕ್ಕೆ ವೀಕ್ಷಕರನ್ನು ಶೋ ಸೆಳೆಯುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋ ಸಿನಿಮಾ ಒಟಿಟಿಯಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.

ಧಾರಾವಾಹಿಗಳ ಟಿಆರ್​ಪಿ.. (ನಗರ ಹಾಗೂ ಗ್ರಾಮೀಣ ಭಾಗ)

ಟಿಆರ್​ಪಿ ಲಿಸ್ಟ್​ನಲ್ಲಿ ಮೊದಲ ಸ್ಥಾನದಲ್ಲಿ ಎಂದಿನಂತೆ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಈ ಧಾರಾವಾಹಿ ವರ್ಷದಿಂದ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ಟಿಆರ್​ಪಿ ಕೊಂಚ ಕಡಿಮೆ ಆದರೂ, ಮೊದಲ ಸ್ಥಾನಕ್ಕೆ ಕುತ್ತು ಬಂದಿಲ್ಲ. ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಇದೆ.

ಇದನ್ನೂ ಓದಿ: ಶಾಲೆಯಾಗಿ ಬದಲಾದ ಬಿಗ್ ಬಾಸ್ ಮನೆ; ಇಲ್ಲಿದೆ ನೋಡಿ ಫನ್ ವಿಡಿಯೋ

ನಾಲ್ಕನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮಿ’, ಐದನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು ಧಾರಾವಾಹಿ ಇದೆ. ದಿನ ಕಳೆದಂತೆ ‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿ ಕುಗ್ಗುತ್ತಿದೆ. ಆರಂಭದಲ್ಲಿ ಈ ಧಾರಾವಾಹಿ ಎಲ್ಲರಿಂದ ಮೆಚ್ಚುಗೆ ಪಡೆದಿತ್ತು. ಆದರೆ, ದಿನ ಕಳೆದಂತೆ ಧಾರಾವಾಹಿಗೆ ಬೇಡಿಕೆ ಕಡಿಮೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ