ಹೊಸ ಕಾರು ಖರೀದಿ ಮಾಡಿದ ಮಲ್ಲಮ್ಮ; ಅನೇಕರಿಗೆ ಮಾದರಿಯಾದ ಬಿಗ್​ ಬಾಸ್ ಸ್ಪರ್ಧಿ

ಬಿಗ್ ಬಾಸ್ ಖ್ಯಾತಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಲ್ಲಮ್ಮ ತಮ್ಮ ಕಠಿಣ ಪರಿಶ್ರಮದಿಂದ ಹೊಸ ಮಾರುತಿ ಸುಜುಕಿ ಡಿಸೈರ್ ಕಾರು ಖರೀದಿಸಿದ್ದಾರೆ. ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ಅವರು, ಸಾಮಾಜಿಕ ಜಾಲತಾಣಗಳು ಮತ್ತು ಬಿಗ್ ಬಾಸ್ ಮೂಲಕ ಜನಪ್ರಿಯತೆ ಗಳಿಸಿ, ಈಗ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ. ಅವರ ಈ ಸಾಧನೆ ಅನೇಕರಿಗೆ ಪ್ರೇರಣೆ ನೀಡಿದ್ದು, ಕನಸುಗಳನ್ನು ಬೆನ್ನಟ್ಟಿದರೆ ಯಶಸ್ಸು ಖಂಡಿತ ಎಂಬುದು ಮಲ್ಲಮ್ಮ ಕಥೆಯಿಂದ ಸ್ಪಷ್ಟವಾಗಿದೆ.

ಹೊಸ ಕಾರು ಖರೀದಿ ಮಾಡಿದ ಮಲ್ಲಮ್ಮ; ಅನೇಕರಿಗೆ ಮಾದರಿಯಾದ ಬಿಗ್​ ಬಾಸ್ ಸ್ಪರ್ಧಿ
ಮಲ್ಲಮ್ಮ

Updated on: Jun 05, 2026 | 7:46 AM

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ ಅವರು (Mallama) ತಮ್ಮ ಸಾಧನೆಯ ಮುಕುಟಕ್ಕೆ ಮತ್ತೊಂದು ಹೊಸ ಗರಿ ಸೇರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿ, ನಂತರ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅವಕಾಶ ಪಡೆದರು. ಇದರ ಮೂಲಕ ಮನೆಮಾತಾಗಿರೋ ಮಲ್ಲಮ್ಮ ಈಗ ಹೊಸ ಕಾರೊಂದನ್ನು ಖರೀದಿಸುವ ಮೂಲಕ ತಮ್ಮ ಹೊಸ ಯಶಸ್ಸನ್ನು ಸಂಭ್ರಮಿಸಿದ್ದಾರೆ.

ಈ ಸಂತಸದ ಕ್ಷಣವನ್ನು ಮಲ್ಲಮ್ಮ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಖರೀದಿ ಮಾಡಿದ್ದು ಮಾರುತಿ ಸುಜುಕಿ ಡಿಸೈರ್ ಟೂರ್ ಕಾರು. ಹೊಸ ಕಾರಿನ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಲ್ಲಮ್ಮ ಅವರು ತಮ್ಮ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಸೇರಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಕಾರನ್ನು ಖರೀದಿ ಮಾಡಿದ್ದಾರೆ.
ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದು, ಇಂದು ಸ್ವಂತ ಪರಿಶ್ರಮದಿಂದ ಹೊಸ ಕಾರು ಖರೀದಿಸಿರುವ ಅವರ ಈ ಸಾಧನೆಗೆ ಅಭಿಮಾನಿಗಳಿಂದ ಹಾಗೂ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ವ್ಯಾಪಕ ಪ್ರಶಂಸೆ ಮತ್ತು ಹಾರೈಕೆಗಳು ಹರಿದುಬರುತ್ತಿವೆ.

ಮಲ್ಲಮ್ಮ ಅವರ ಲೈಫ್ ಜರ್ನಿ ನಿಜಕ್ಕೂ ಅನೇಕರಿಗೆ ಪ್ರೇರಣೆಯಾಗಿದೆ. ಆರಂಭದಲ್ಲಿ ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಂತಹ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ವಿಶಿಷ್ಟ ಕಂಟೆಂಟ್, ಹಳ್ಳಿ ಸೊಗಡಿನ ಮಾತುಗಳು ಹಾಗೂ ರೀಲ್ಸ್‌ಗಳ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದರು. ಇವರ ಜನಪ್ರಿಯತೆಯನ್ನು ಗುರುತಿಸಿ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಬರುವ ದೊಡ್ಡ ಅವಕಾಶ ಸಿಕ್ಕಿತು. ಬಿಗ್ ಬಾಸ್ ಮನೆಯಲ್ಲಿ ತಮ್ಮ ನೈಜ ವ್ಯಕ್ತಿತ್ವ, ಮುಗ್ಧತೆ ಹಾಗೂ ಚುರುಕಾದ ಆಟದ ಮೂಲಕ ಕನ್ನಡಿಗರ ಮನ ಗೆದ್ದು ದೊಡ್ಡ ಮಟ್ಟದ ಹೆಸರು ಮಾಡಿದರು.

ಇದನ್ನೂ ಓದಿ: ‘ವಿನಾಶ ಕಾಲೆ’ ಸಿನಿಮಾಗೆ ಸಾಥ್ ನೀಡಿದ ಮಲ್ಲಮ್ಮ, ಡಾಗ್ ಸತೀಶ್, ಕರಿಬಸಪ್ಪ

ಬಿಗ್ ಬಾಸ್‌ನಿಂದ ಹೊರಬಂದ ನಂತರವೂ ತಮ್ಮ ಕ್ರಿಯೇಟಿವಿಟಿಯನ್ನು ಮುಂದುವರಿಸಿರುವ ಮಲ್ಲಮ್ಮ, ಇಂದು ಆರ್ಥಿಕವಾಗಿ ಸ್ವಾವಲಂಬಿಯಾಗಿ ಈ ಮಟ್ಟಕ್ಕೆ ಬೆಳೆದು ನಿಂತಿರುವುದು ಅವರ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ‘ಕನಸುಗಳನ್ನು ಬೆನ್ನಟ್ಟಿದರೆ ಯಶಸ್ಸು ಖಂಡಿತ ಸಿಗುತ್ತದೆ’ ಎಂಬುದಕ್ಕೆ ಮಲ್ಲಮ್ಮ ಅವರ ಈ ಹೊಸ ಕಾರು ಖರೀದಿಯ ಕ್ಷಣವೇ ಸಾಕ್ಷಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Fri, 5 June 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us