
ರಾಶಿಕಾ ಶೆಟ್ಟಿ (Rashika Shetty) ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ತಲುಪುವ ಮೊದಲೇ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ರಾಶಿಕಾಗೂ ಈ ವಿಷಯದಲ್ಲಿ ಕೊಂಚ ಬೇಸರ ಇದೆ. ಆ ವಾರ ಉಳಿದುಕೊಂಡಿದ್ದರೆ ಫಿನಾಲೆ ತಲುಪಬಹುದಿತ್ತಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ. ಈಗ ರಾಶಿಕಾ ಶೆಟ್ಟಿ ಅವರು ತಮ್ಮ ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ್ದಾರೆ.ಅವರು ಬಿಗ್ ಬಾಸ್ ಮನೆಯಲ್ಲಿ ಬಟ್ಟೆಗಾಗಿ ಸಾಕಷ್ಟು ಹಣ ವ್ಯಯಿಸಿದ್ದಾರೆ.
ರಾಶಿಕಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಕ್ವೀನ್ ಎಂದೇ ಫೇಮಸ್ ಆದವರು. ಅವರು ಸಿನಿಮಾಗಳಲ್ಲಿ ಗುರುತಿಸಿಕೊಂಡು, ನಂತರ ಬಿಗ್ ಬಾಸ್ ಪ್ರವೇಶಿಸಿದರು. ಅವರು ಸಂಭಾವನೆ ವಿಷಯ ಮಾತನಾಡಲು ನಿರಾಕರಿಸಿದ್ದಾರೆ. ಆದರೆ, ಹೊರಗೆ ಹರಿದಾಡುತ್ತಿರುವ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವರು ಬಟ್ಟೆಗಾಗಿ ಲಕ್ಷ ಲಕ್ಷ ಸುರಿದಿದ್ದಾರೆ.
‘ಸಂಭಾವನೆ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ತುಂಬಾ ಸಂಭಾವನೆ ತೆಗೆದುಕೊಂಡಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಎಲ್ಲರೂ ಹಾಗೆಯೇ ಅಂದುಕೊಳ್ಳಲಿ. ಆದರೆ, ಸಂಭಾವನೆ ವಿಷಯವನ್ನು ಎಲ್ಲಿಯೂ ರಿವೀಲ್ ಮಾಡುವಂತೆ ಇಲ್ಲ. ಹೀಗಾಗಿ, ಸಂಭಾವನೆ ಬಗ್ಗೆ ಹೇಳಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಹೊರಗೆ ಗಿಲ್ಲಿ ಫ್ಯಾನ್ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
‘ಹೋಗುವಾಗ ಸಾಕಷ್ಟು ಶಾಪಿಂಗ್ ಮಾಡಿಕೊಂಡು ಹೋಗಿದ್ದೆ. ಅದಕ್ಕೆ ಒಂದೂವರೆ ಲಕ್ಷ ಖರ್ಚಾಗಿತ್ತು. ನಂತರ ಅಮ್ಮ ಹಾಗೂ ತಮ್ಮನೇ ನೋಡಿಕೊಂಡರು. ಅವರು ಕಳುಹಿಸುತ್ತಿದ್ದ ಬಟ್ಟೆಗಳು ನನ್ನ ಸ್ಟೈಲ್ಗೆ ಸೆಟ್ ಆಗುತ್ತಿರಲಿಲ್ಲ. ಹೀಗಾಗಿ, ನನಗೆ ಸೆಟ್ ಆಗುವಂತಹದ್ದು ಕಳಿಸಿ ಎಂದು ಕೇಳಿಕೊಳ್ಳುತ್ತಿದೆ. ಅದರ ಮೇಲೆ ಅವರು ತುಂಬಾ ವರ್ಕ್ ಮಾಡಿದ್ದಾರೆ’ ಎಂದು ರಾಶಿಕಾ ಹೇಳಿದ್ದಾರೆ.
ರಾಶಿಕಾ ಅವರು ಫಿನಾಲೆವರೆಗೆ ಇರುತ್ತಾರೆ ಎಂಬ ನಂಬಿಕೆ ಅವರ ಕುಟುಂಬದ್ದಾಗಿತ್ತು. ಹೀಗಾಗಿ ಫಿನಾಲೆಗೂ ಒಂದು ಡ್ರೆಸ್ನ ಸಿದ್ಧ ಮಾಡಲಾಗುತ್ತಿತ್ತು. ಆದರೆ, ಅವರು ಎಲಿಮಿನೇಟ್ ಆದರು. ಆದರೆ, ಫಿನಾಲೆ ದಿನ ರಾಶಿಕಾ ಅತಿಥಿಯಾಗಿ ತೆರಳಲಿದ್ದಾರೆ. ಆ ದಿನ ಈ ಡ್ರೆಸ್ನ ಧರಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.