ಬಿಗ್ ಬಾಸ್ನ (Bigg Boss) ಭಾನುವಾರದ ಎಪಿಸೋಡ್ ಸಖತ್ ಫನ್ ಆಗಿರುತ್ತದೆ. ಕಳೆದ ವಾರದ ಎಪಿಸೋಡ್ ಕೂಡ ಸಾಕಷ್ಟು ಎಂಟರ್ಟೇನಿಂಗ್ ಆಗಿತ್ತು. ಈಗ ಸುದೀಪ್ (Sudeep) ಅವರು ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಓಡಿ ಹೋಗೋಕೆ ನಿರ್ಧರಿಸಿದ್ದರಂತೆ. ಇದಕ್ಕೆ ಕಾರಣ ಏನು ಎಂಬುದನ್ನು ಸುದೀಪ್ ಅವರು ವಿವರಿಸಿದ್ದಾರೆ. ಇದನ್ನು ಕೇಳಿ ಎಲ್ಲರೂ ನಕ್ಕಿದ್ದಾರೆ. ಜೊತೆಗೆ ಬಿಗ್ ಬಾಸ್ಗೆ ಸ್ಪರ್ಧಿಗಳು ಕ್ಷಮೆ ಕೇಳಿದ್ದಾರೆ.
ಕಳೆದ ವಾರ ಮಕ್ಕಳಿಗೆ ಸ್ಕೂಲ್ ಟಾಸ್ಕ್ ನೀಡಲಾಯಿತು. ಎಲ್ಲರೂ ಮಕ್ಕಳಂತೆ ಆಗಿದ್ದರು. ಈ ವೇಳೆ ಬಿಗ್ ಬಾಸ್ ಹೇಗಿರಬಹುದು ಎಂಬದನ್ನು ಕಲ್ಪಿಸಿಕೊಂಡು ಚಿತ್ರ ಬಿಡಿಸಲು ಅವಕಾಶ ನೀಡಲಾಯಿತು. ಒಬ್ಬೊಬ್ಬರು ಒಂದೊಂದು ರೀತಿಯ ಕಲ್ಪನೆ ಮಾಡಿಕೊಂಡರು. ತುಕಾಲಿ ಸಂತೋಷ್ ಅವರಂತೂ ಕಲ್ಪನೆಯ ತುತ್ತತುದಿಗೆ ಹೋಗಿ ಮೊಟ್ಟೆ ಇಡುವ ಕೋಳಿಯನ್ನು ಬಿಡಿಸಿದ್ದರು. ‘ಬಿಗ್ ಬಾಸ್ 17 ಮೊಟ್ಟೆಗಳನ್ನು ಇಟ್ಟು, ಕಾವುಕೊಟ್ಟು ಮರಿ ಮಾಡಿ ಅವುಗಳನ್ನು ಬೆಳೆಸುವ ಕೆಲಸ ಮಾಡುತ್ತಾರೆ’ ಎಂದು ಅದಕ್ಕೆ ವಿವರಣೆ ನೀಡಿದರು. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
‘ನೀವು ಈ ವಾರ ಬಿಗ್ ಬಾಸ್ ಹೇಗಿರುತ್ತಾರೆ ಎಂಬುದನ್ನು ಬಿಡಿಸಿದ್ದನ್ನು ನೋಡಿ ಸ್ವತಃ ಬಿಗ್ ಬಾಸ್ ಕಂಗಾಲಾದರು. ಅವರು ಕಂಪೌಡ್ ಹಾರಿ ಜಿಗಿದು ಹೋಗುವವರಿದ್ದರು. ನಾವು ಅವರನ್ನು ತಡೆ ಹಿಡಿದು ಸಮಾಧಾನ ಮಾಡಿದೆವು. ಏನೋ ತಪ್ಪಾಗಿದೆ ಕ್ಷಮಿಸಿ ಎಂದು ಕೇಳಿಕೊಂಡೆವು’ ಎಂದು ಸುದೀಪ್ ಹೇಳಿದರು. ಇದನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.
ಇದನ್ನೂ ಓದಿ: ‘ಈ ರೀತಿ ಬದುಕಿರೋಕಾಗಲ್ಲ, ಮನೆಗೆ ಕಳುಹಿಸಿ’; ಬಿಗ್ ಬಾಸ್ ಎದುರು ವಿನಯ್ ಹೊಸ ಬೇಡಿಕೆ
ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೋಡಬಹುದು. ಭಾನುವಾರದ (ಡಿಸೆಂಬರ್ 17) ಎಪಿಸೋಡ್ನಲ್ಲಿ ಪವಿ ಪೂವಪ್ಪ ಎಲಿಮಿನೇಟ್ ಆಗಿದ್ದಾರೆ. ಎಲ್ಲರೂ ಇದನ್ನು ನಿರೀಕ್ಷಿಸಿದ್ದರು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರಿಗೆ ಮೋಡಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕೆಲವೇ ವಾರಗಳಲ್ಲಿ ಅವರು ಔಟ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ