- Kannada News Photo gallery Kichcha Sudeep met DK Shivakumar and invited him to inaugurate KCC Cricket tournament
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿದ ಕಿಚ್ಚ ಸುದೀಪ್
Kichcha Sudeep-DKS: ನಟ ಕಿಚ್ಚು ಸುದೀಪ್ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಕಾರಣವೇನು?
Updated on:Dec 17, 2023 | 9:39 PM

ನಟ ಕಿಚ್ಚ ಸುದೀಪ್ ಅವರು ಇಂದು (ಡಿಸೆಂಬರ್ 17) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ.

ಸುದೀಪ್ ಮಾತ್ರವೇ ಅಲ್ಲದೆ ಅವರೊಟ್ಟಿಗೆ ನಿರ್ಮಾಪಕ ಕೆಪಿ ಶ್ರೀಕಾಂತ್, ಕೆಆರ್ಜಿಯ ಕಾರ್ತಿಕ್ ಗೌಡ ಇನ್ನೂ ಹಲವರು ಒಟ್ಟಿಗೆ ಡಿಕೆಶಿ ಅವರನ್ನು ಭೇಟಿಯಾಗಿದ್ದಾರೆ.

ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಕಾರಣದಿಂದ ಸುದೀಪ್ ಹಾಗೂ ಅವರ ತಂಡ ಭೇಟಿ ಆಗಿರಲಿಲ್ಲ.

ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ಕೆಸಿಸಿ ಕ್ರಿಕೆಟ್ ಟೂರ್ನಿಮೆಂಟ್ ನಡೆಸುತ್ತಿದ್ದಾರೆ. ಕೆಸಿಸಿ ಟೂರ್ನಿಯ ಉದ್ಘಾಟನೆಯನ್ನು ಡಿಕೆಶಿ ಯಿಂದ ಉದ್ಘಾಟನೆ ಮಾಡಿಸಲಿದ್ದಾರೆ.

ಕೆಸಿಸಿ ಉದ್ಘಾಟನೆಗೆ ಡಿಕೆಶಿಯವರನ್ನು ಆಹ್ವಾನಿಸಲೆಂದು ಕಿಚ್ಚ ಸುದೀಪ್ ಹಾಗೂ ಕೆಸಿಸಿ ಆಯೋಜಕರ ತಂಡ ಇಂದು ಹೋಗಿತ್ತು.

ಕೆಲವು ತಿಂಗಳ ಹಿಂದೆ ಡಿಕೆ ಶಿವಕುಮಾರ್ ಅವರು ತಮ್ಮ ಹೊಸ ಮಾಲ್ ಉದ್ಘಾಟನೆಯನ್ನು ಕಿಚ್ಚ ಸುದೀಪ್ ಅವರಿಂದ ಮಾಡಿಸಿದ್ದರು.

ಕಳೆದ ಚುನಾವಣೆಯಲ್ಲಿ ಸುದೀಪ್ ಬಿಜೆಪಿ ಪರವಹಿಸಿದ್ದರು, ಡಿಕೆಶಿ, ಕೆಪಿಸಿಸಿ ಅಧ್ಯಕ್ಷರಾಗಿದ್ದರು. ರಾಜಕೀಯವಾಗಿ ಭಿನ್ನ ಹಾದಿ ತುಳಿದಿದ್ದರು ಸಹ ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ.
Published On - 9:38 pm, Sun, 17 December 23




