ಕಾರ್ತಿಕ್ ಚಪ್ಪಲಿ ಏಟು: ವಿನಯ್ ಕೆಂಡಾಮಂಡಲ, ನಿಜಕ್ಕೂ ನಡೆದಿದ್ದೇನು?

|

Updated on: Dec 07, 2023 | 11:47 PM

Bigg Boss: ಹತ್ತು ವರ್ಷದ ವಿನಯ್ ಹಾಗೂ ಕಾರ್ತಿಕ್ ಗೆಳೆತನ ಬಿಗ್​ಬಾಸ್ ಮನೆಯಲ್ಲಿ ಬಹುತೇಕ ಅಂತ್ಯವಾಗಿದೆ. ಗುರುವಾರದ ಎಪಿಸೋಡ್​ನಲ್ಲಂತೂ ವಿನಯ್ ಹಾಗೂ ಕಾರ್ತಿಕ್ ವಿಪರೀತ ಕಿತ್ತಾಡಿಕೊಂಡರು. ಇದಕ್ಕೆಲ್ಲ ಕಾರಣವಾಗಿದ್ದು ಕಾರ್ತಿಕ್​ರ ಚಪ್ಪಲಿ.

ಕಾರ್ತಿಕ್ ಚಪ್ಪಲಿ ಏಟು: ವಿನಯ್ ಕೆಂಡಾಮಂಡಲ, ನಿಜಕ್ಕೂ ನಡೆದಿದ್ದೇನು?
Follow us on

ವಿನಯ್ (Vinay) ಹಾಗೂ ಕಾರ್ತಿಕ್​ರ (Karthik) ಹತ್ತು ವರ್ಷದ ಗೆಳೆತನ ಬಿಗ್​ಬಾಸ್ ಮನೆಯಲ್ಲಿ ಬಹುತೇಕ ಅಂತ್ಯವಾಗಿದೆ. ಬಿಗ್​ಬಾಸ್ ಮನೆಗೆ ಬಂದಾಗಿನಿಂದಲೂ ಬಹುತೇಕ ಎದುರಾಳಿ ತಂಡಗಳಲ್ಲಿಯೇ ಇದ್ದು ಆಡುತ್ತಿರುವ ಇಬ್ಬರಿಗೂ ಆರಂಭದಲ್ಲಿ ಟಾಸ್ಕ್ ವಿಷಯವಾಗಿ ಜಗಳಗಳಾಗುತ್ತಿತ್ತು, ಆದರೆ ಬರ ಬರುತ್ತಾ ಈ ಜಗಳ ವೈಯಕ್ತಿಕ ಮಟ್ಟಕ್ಕೆ ಇಳಿದಿದೆ. ಗುರುವಾರ ಪ್ರಸಾರವಾದ ಎಪಿಸೋಡ್​ನಲ್ಲಂತೂ ವಿನಯ್ ಹಾಗೂ ಕಾರ್ತಿಕ್ ನಡುವೆ ದೊಡ್ಡ ಜಗಳವೇ ಆಡಿದ್ದು, ಕಾರ್ತಿಕ್​ ಅನ್ನು ಹೊಡೆಯಲು ವಿನಯ್ ಪದೇ-ಪದೇ ಏರಿ ಹೋದ ಘಟನೆ ನಡೆದಿದೆ. ಇದಕ್ಕೆಲ್ಲ ಕಾರಣವಾಗಿದ್ದು ಕಾರ್ತಿಕ್​ರ ಚಪ್ಪಲಿ.

ಬುಧವಾರದ ಎಪಿಸೋಡ್​ನಲ್ಲಿಯೇ ವಿನಯ್ ಹಾಗೂ ಕಾರ್ತಿಕ್ ನಡುವೆ ಜಗಳವಾಗಿತ್ತು. ಕಾರ್ತಿಕ್ ತಮ್ಮನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂದು ವಿನಯ್ ಜೋರು ಜಗಳ ಮಾಡಿದ್ದರು, ಆದರೆ ಕಾರ್ತಿಕ್, ತಾನು ಹಾಗೆ ಅಂದಿಲ್ಲ, ಒಂದೊಮ್ಮೆ ನಾನು ಹಾಗೆ ಅಂದಿದ್ದೇ ಆದರೆ ನಾನು ಈಗಲೇ ಮನೆಯಿಂದ ಹೊರಗೆ ಹೋಗುತ್ತೇನೆ ಎಂದಿದ್ದರು. ಆದರೆ ವಿನಯ್ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಗಂಧರ್ವ-ರಾಕ್ಷಸ ಟಾಸ್ಕ್​ನಲ್ಲಿ ವಿನಯ್​ ಮೇಲೆ ದೈಹಿಕ ಹಾನಿಯಾಗುವಂತೆ ನಡೆದುಕೊಂಡರು.

ಆರಂಭದಲ್ಲಿ ಕಾರ್ತಿಕ್​ರಿಂದ ಕ್ಲಿಷ್ಟವಾದ ಕೆಲಸಗಳನ್ನು ವಿನಯ್ ಮಾಡಿಸಿದರು, ಸುಸ್ತಾಗಿದ್ದರೂ ಕಾರ್ತಿಕ್ ನಿಧಾನವಾಗಿ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ವಿನಯ್, ನಿನ್ನೆ ನೀನು ಏನಂದೆ, ಏನೋ ಅಂದೆ ಎನ್ನುತ್ತಾ ಕಾರ್ತಿಕ್ ಮೇಲೆ ಏರಿ ಹೋದರು. ಅದೇ ಸಮಯಕ್ಕೆ ಪವಿ ಚಪಾತಿ ಕಲೆಸುವ ಹಿಟ್ಟು ತಂದರು, ಅದನ್ನು ತೆಗೆದುಕೊಂಡು ಜೋರಾಗಿ ಕಾರ್ತಿಕ್ ಮುಖಕ್ಕೆ ವಿನಯ್ ಎಸೆದರು, ಆಗ ಕಾರ್ತಿಕ್​ ಸ್ನೇಹಿತ್​ಗೆ ದೂರು ಹೇಳಲು ಯತ್ನಿಸಿದರು, ಆಗ ವಿನಯ್​ ಹಿಟ್ಟನ್ನು ಕಾರ್ತಿಕ್ ಬಾಯಿಗೆ ತುರುಕಿದರು. ಆಗಲೂ ಕಾರ್ತಿಕ್​ ಹೆಚ್ಚೇನೂ ಪ್ರತಿಕ್ರಿಯಿಸಿರಲಿಲ್ಲ, ಆದರೆ ಪಾತ್ರದಲ್ಲಿ ಇರುವುದಿಲ್ಲ ಎಂದು ಹೇಳುತ್ತಾ ಹೋಗುತ್ತಿದ್ದರು, ಆಗ ವಿನಯ್, ಕಾರ್ತಿಕ್​ಗೆ ಅಡ್ಡಬಂದು ತಡೆಯಲು ಯತ್ನಿಸಿದರು, ಆಗ ಕಾರ್ತಿಕ್ ಜೋರಾಗಿ ವಿನಯ್ ಅನ್ನು ದೂರ ದೂಡಿದರು. ಮುಂದೆ ಹೋದವರೆ ಸಿಟ್ಟಿನಿಂದ ತಮ್ಮ ಚಪ್ಪಲಿ ತೆಗೆದು ನೆಲಕ್ಕೆ ಬಿಸಾಡಿದರು, ದುರಾದೃಷ್ಟವಷಾತ್ ಆ ಚಪ್ಪಲಿ ನೆಲದಿಂದ ಪುಟಿದು ಬಂದು ವಿನಯ್​ಗೆ ತಾಗಿತು.

ಇದನ್ನೂ ಓದಿ:‘ಪ್ಲೀಸ್ ಶಟ್​ಅಪ್​’; ಸಂಗೀತಾ ಹಾಗೂ ವಿನಯ್ ಗೌಡ ಮಧ್ಯೆ ಮತ್ತೆ ದ್ವೇಷದ ಕಿಡಿ

ವಿನಯ್​ಗೆ ಕೋಪಗೊಳ್ಳಲು ಇಷ್ಟೇ ಸಾಕಾಯ್ತು, ಕಾರ್ತಿಕ್​ ಮೇಲೆ ಸಿಟ್ಟಾದ ವಿನಯ್​ ಹೊಡೆಯಲು ಹೋದರು, ಆದರೆ ಸ್ನೇಹಿತ್, ನಮ್ರತಾ ಇನ್ನೂ ಹಲವರು ಅವರನ್ನು ತಡೆದರು. ಎಷ್ಟು ತಡೆದರೂ ಸುಮ್ಮನಾಗದ ವಿನಯ್, ಕಾರ್ತಿಕ್​ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇವನ ಕೈಯಲ್ಲಿ ಚಪ್ಪಲಿ ಏಟು ತಿಂದು ನಾನು ಇಲ್ಲಿರುವುದಿಲ್ಲ ಎನ್ನುತ್ತಾ ಬಾಗಿಲು ತೆಗೆಯುವಂತೆ ಹೇಳಿದರು, ರೂಂಗೆ ಹೋಗಿ ಸೂಟ್​ಕೇಸ್ ಒದ್ದರು ಹೇಗೋ ತಮ್ಮ ತಂಡದವರ ಮಾತು ಕೇಳಿ ಕೊನೆಗೆ ಸಮಾಧಾನ ಮಾಡಿಕೊಂಡು ಸುಮ್ಮನಾದರು.

ಆ ಬಳಿಕ ಕಾರ್ತಿಕ್ ಹಾಗೂ ನಮ್ರತಾ ನಡುವೆಯೂ ಜಗಳವಾಯ್ತು, ಕಾರ್ತಿಕ್ ತಮ್ಮನ್ನು ಅವಾಚ್ಯ ಶಬ್ದದಿಂದ ಬೈದಿದ್ದಾನೆ ಎಂದು ನಮ್ರತಾ ವಾದಿಸಿದರು. ಆದರೆ ಕಾರ್ತಿಕ್, ತಾನು ಹಾಗೆ ಅಂದಿಲ್ಲ ಎಂದರು. ಸ್ನೇಹಿತ್, ಆಟವನ್ನು ರದ್ದು ಮಾಡಲು ಯತ್ನಿಸಿದರಾದರೂ, ಬಿಗ್​ಬಾಸ್ ಅದಕ್ಕೆ ಅವಕಾಶ ಕೊಡದೆ, ಹಿಂಸಾತ್ಮಕವಾದ ಆ ಟಾಸ್ಕ್​ ಅನ್ನು ಮುಂದುವರೆಸುವಂತೆ ಹೇಳಿದರು. ಶುಕ್ರವಾರ ಕೊನೆಯ ಟಾಸ್ಕ್ ಏನಾಗುತ್ತದೆಯೋ ನೋಡಬೇಕು. ಯಾರೇ ಗೆದ್ದರು, ಬಿಗ್​ಬಾಸ್ ಮನೆಯ ಬಹುತೇಕ ಸದಸ್ಯರು ಸೋತತಂತೆಯೇ ಲೆಕ್ಕ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ