ಖ್ಯಾತ ಕಿರುತೆರೆ ನಟಿ ಚಾಹತ್ ಪಾಂಡೆ ‘ಬಿಗ್ ಬಾಸ್ 18′ ಶೋನಿಂದ ಇತ್ತೀಚೆಗೆ ಹೊರಬಿದ್ದಿದ್ದಾರೆ. ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳ ಮೊದಲು ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಾಹತ್ ಅವರ ಪ್ರಯಾಣವು ಕೊನೆಗೊಂಡಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕಳೆದ ವಾರ ಇಬ್ಬರು ಸ್ಪರ್ಧಿಗಳನ್ನು ಹೊರಹಾಕಲಾಗಿದೆ. ಅದರಲ್ಲಿ ಚಾಹತ್ ಕೂಡ ಇದ್ದರು. ಮೊದಲು ಶ್ರುತಿಕಾ ನಂತರ ಚಾಹತ್ ಎಲಿಮಿನೇಟ್ ಆದರು. ಈಗ ಚಾಹತ್ ಪಾಂಡೆ ಸಂಭಾವನೆ ವಿಚಾರ ಅಚ್ಚರಿ ಮೂಡಿಸಿದೆ.
ಬಿಗ್ ಬಾಸ್ ಮನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮೊದಲ ದಿನವೇ ಚಾಹತ್ ಚರ್ಚೆಯಾಗಿದ್ದರು. ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ವಿವಾದಗಳು ನಡೆದಿವೆ. ಚಾಹತ್ ಬಿಗ್ ಬಾಸ್ ಮನೆಯಲ್ಲಿ ಸುಮಾರು 98 ದಿನಗಳ ಕಾಲ ಇದ್ದರು. 15 ವಾರಗಳ ಪೈಕಿ 14 ವಾರ ಅವರು ದೊಡ್ಮನೆಯಲ್ಲಿ ಇದ್ದರು. ಈ ಬಗ್ಗೆ ಅವರಿಗೆ ಖುಷಿ ಇದೆ.
ಎಲಿಮಿನೇಷನ್ ಬಳಿಕ ಮಾತನಾಡಿರುವ ಅವರು, ‘ಬಹುಶಃ ದೇವರು ಇಲ್ಲಿಯವರೆಗಿನ ಪ್ರಯಾಣವನ್ನು ಬರೆದಿರಬಹುದು. ಸ್ವಲ್ಪ ಖುಷಿ, ಸ್ವಲ್ಪ ದುಃಖ ಇದೆ. ಇನ್ನೊಂದು ವಾರ ಕಳೆದಿದ್ದರೆ ಟ್ರೋಫಿ ನನ್ನ ಕೈಯಲ್ಲಿರುತ್ತಿತ್ತು. ಆದರೆ ಪರವಾಗಿಲ್ಲ. 15 ವಾರಗಳಲ್ಲಿ 14 ವಾರಗಳ ಕಾಲ ನಾನು ಶೋನಲ್ಲಿ ಇರೋದು ಖುಷಿಯ ವಿಷಯ. ಇದು ಮೇಲಿನ ದೇವರ ಆಶೀರ್ವಾದ. ನನ್ನ ತಾಯಿ ನನ್ನನ್ನು ಆಶೀರ್ವದಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಮಧ್ಯರಾತ್ರಿ ಬಿಗ್ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಚಾಹತ್ 14 ವಾರಗಳ ಕಾಲ ಆಟದಲ್ಲಿದ್ದರು ಯಾರ ಜೊತೆಯೂ ಗ್ಯಾಂಗ್ ಕಟ್ಟಿಕೊಂಡಿರಲಿಲ್ಲ. ಅವರು ಒಬ್ಬರೆ ಆಡುತ್ತಿದ್ದಳು. ಬಹುಶಃ ಈ ಕಾರಣದಿಂದ ಆಕೆ ಮನೆ ಬಿಟ್ಟು ಹೋಗಬೇಕಾಯಿತು ಎನ್ನಲಾಗಿದೆ. ಈ 98 ದಿನಗಳಲ್ಲಿ, ಚಾಹತ್ ಉತ್ತಮ ಸಂಭಾವನೆ ಗಳಿಸಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ, ಚಾಹತ್ ಪ್ರತಿ ವಾರ ಸಂಭಾವನೆಯಾಗಿ 1 ರಿಂದ 2 ಲಕ್ಷ ರೂಪಾಯಿ ಪಡೆಯುತ್ತಿದ್ದರಂತೆ. ಇದರ ಪ್ರಕಾರ ಇದುವರೆಗೆ ಆಕೆ 14 ರಿಂದ 28 ಲಕ್ಷ ರೂಪಾಯಿ ಗಳಿಸಿದ್ದಾರೆ ಎನ್ನಲಾಗಿದೆ.
ಕನ್ನಡ ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆ ವಿಚಾರವೂ ಆಗಾಗ ಚರ್ಚೆ ಆಗುತ್ತದೆ. ಆದರೆ, ಕನ್ನಡ ಬಿಗ್ ಬಾಸ್ ಸ್ಪರ್ಧಿಗಳಿಗೆ ಎಷ್ಟು ಸಂಭಾವನೆ ಸಿಗುತ್ತದೆ ಎಂಬ ವಿಚಾರ ರಿವೀಲ್ ಆಗಿಲ್ಲ. ‘ಬಿಗ್ ಬಾಸ್ 18’ರ ಗ್ರ್ಯಾಂಡ್ ಫಿನಾಲೆ ಜನವರಿ 19 ರಂದು ನಡೆಯಲಿದೆ. ಪ್ರಸ್ತುತ, ಮನೆಯಲ್ಲಿ ಕರಣ್ವೀರ್ ಮೆಹ್ರಾ, ವಿವಿಯನ್ ದ್ಸೇನಾ, ಚುಮ್ ದರಾಂಗ್, ಶಿಲ್ಪಾ ಶಿರೋಡ್ಕರ್, ಅವಿನಾಶ್ ಮಿಶ್ರಾ, ಇಶಾ ಸಿಂಗ್ ಮತ್ತು ರಾಜಲ್ ದಲಾಲ್ ಸ್ಪರ್ಧಿಗಳು ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ