ಕೊನೆಯ ಕ್ಷಣದಲ್ಲಿ ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದ್ದೇಕೆ? ಬಿಗ್ ಬಾಸ್ ಕೊಟ್ಟರು ಕಾರಣ

Bigg Boss Midweek Elimination: ಈ ವಾರದ ಮಧ್ಯದಲ್ಲಿ ಬಿಗ್ ಬಾಸ್ ಕನ್ನಡದಲ್ಲಿ ಒಬ್ಬ ಸ್ಪರ್ಧಿಯನ್ನು ಹೊರಹಾಕುವುದಾಗಿ ಘೋಷಿಸಲಾಗಿತ್ತು. ಆದರೆ, ಅನಿರೀಕ್ಷಿತ ತಿರುವಿನಲ್ಲಿ, ಯಾರನ್ನೂ ಹೊರಹಾಕಲಾಗಿಲ್ಲ. ಕೊನೆಯಲ್ಲಿ ಭವ್ಯಾ ಹಾಗೂ ಗೌತಮಿ ಇದ್ದರು. ಆದರೆ, ತಾತ್ಕಾಲಿಕವಾಗಿ ಇದನ್ನು ನಡೆಸುತ್ತಿಲ್ಲ ಎಂದು ಬಿಗ್ ಬಾಸ್ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಕೊನೆಯ ಕ್ಷಣದಲ್ಲಿ ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದ್ದೇಕೆ? ಬಿಗ್ ಬಾಸ್ ಕೊಟ್ಟರು ಕಾರಣ
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on:Jan 16, 2025 | 8:47 AM

ಈ ವಾರದ ಮಧ್ಯದಲ್ಲಿ ಒಬ್ಬರು ಬಿಗ್ ಬಾಸ್​ನಿಂದ ಹೊರ ಹೋಗಲಿದ್ದಾರೆ ಎಂದು ಸುದೀಪ್ ಘೋಷಿಸಿದ್ದರು. ಈ ಮೂಲಕ ದೊಡ್ಮನೆಯ ಸದಸ್ಯರ ಸಂಖ್ಯೆ 8ರಿಂದ ಏಳಕ್ಕೆ ಇಳಿಕೆ ಆಗಲಿದೆ ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೆ, ಸದ್ಯಕ್ಕೆ ಅದು ಸುಳ್ಳಾಗಿದೆ. ಮಿಡ್ ವೀಕ್ ಎಲಿಮಿನೇಷನ್ ಡ್ರಾಮಾ ನಡೆಸಿ ನಂತರ ಕೊನೆಯ ಕ್ಷಣದಲ್ಲಿ ಅದನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ. ಹಾಗಾದರೆ ಯಾರೂ ದೊಡ್ಮನೆಯಿಂದ ಹೊರ ಹೋಗಿಲ್ಲವೇ? ಹೋಗುತ್ತಾರೆ ಎಂದಾದರೆ ಯಾವಾಗ? ಆ ಎಲ್ಲ ಪ್ರಶ್ನೆಗೆ ಈ ಸ್ಟೋರಿಯಲ್ಲಿ ಉತ್ತರ ಇದೆ.

‘ಬಿಗ್ ಬಾಸ್’ನಲ್ಲಿ ಹನುಮಂತ ಅವರು ಫಿನಾಲೆ ವೀಕ್ ತಲುಪಿಯಾಗಿದೆ. ಧನರಾಜ್ ಅವರು ಟಾಸ್ಕ್ ಆಡಿ ಮಧ್ಯ ವಾರದ ಎಲಿಮಿನೇಷ್​​ನಿಂದ ಬಚಾವ್ ಆದರು. ಸದ್ಯ ಗೌತಮಿ, ಭವ್ಯಾ ಗೌಡ, ಮಂಜು, ತ್ರಿವಿಕ್ರಂ, ರಜತ್ ಹಾಗೂ ಮೋಕ್ಷಿತಾ ನಾಮಿನೇಷನ್​ ಲಿಸ್ಟ್​ನಲ್ಲಿ ಇದ್ದರು. ಇವರ ಪೈಕಿ ಒಬ್ಬರು ಎಲಿಮಿನೇಟ್ ಆಗೋದು ಪಕ್ಕಾ ಎನ್ನಲಾಗಿತ್ತು. ಅದರಂತೆ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಸಲಾಯಿತು.

ಮೊದಲು ಬಿಗ್ ಬಾಸ್ ಮನೆಯ ಮುಖ್ಯದ್ವಾರ ತೆಗೆಯಲಾಯಿತು. ಆ ಬಳಿಕ ಒಬ್ಬೊಬ್ಬರಾಗಿ ಸ್ಪರ್ಧಿಗಳನ್ನು ಕರೆದರು ಬಿಗ್ ಬಾಸ್. ‘ಇಂದು ಈ ಮುಖ್ಯದ್ವಾರ ತೆಗೆದಿರುವುದು ನಿಮಗಾಗಿ ಅಲ್ಲ’ ಎಂದು ಹೇಳುತ್ತಾ ಬಂದರು. ಕೊನೆಯಲ್ಲಿ ಭವ್ಯಾ ಹಾಗೂ ಗೌತಮಿಯನ್ನು ಕರೆಯಲಾಯಿತು. ಮೊದಲು ಗೌತಮಿಯನ್ನು ನಿಲ್ಲಿಸಿ, ‘ಈ ಬಾಗಿಲು ತೆರೆದಿರುವುದು ನಿಮಗಾಗಿ..’ ಎಂದು ಪೌಸ್ ಕೊಟ್ಟ ಬಿಗ್​ ಬಾಸ್ ಕೊನೆಯಲ್ಲಿ ‘ಅಲ್ಲ’ ಎಂದರು.

ಹೀಗಾಗಿ ಭವ್ಯಾ ಹೊರ ಹೋಗೋದು ಖಚಿತ ಎಂದು ಎಲ್ಲರೂ ಅಂದುಕೊಂಡರು. ಭವ್ಯಾ ಕೂಡ ಕಣ್ಣೀರು ಹಾಕಿದರು. ಅವರಿಗೂ ನೀವು ಹೊರ ಹೋಗುತ್ತಿಲ್ಲ ಎಂದು ಬಿಗ್ ಬಾಸ್ ಘೋಷಿಸಿದರು. ‘ನಂಗೆ ಯಾಕೆ ಹೀಗೆ ಮಾಡುತ್ತೀರಾ ಬಿಗ್ ಬಾಸ್’ ಎಂದು ಭವ್ಯಾ ಗಳಗಳನೆ ಅತ್ತರು. ಈ ಮೊದಲು ಕೂಡ ಭವ್ಯಾಗೆ ಈ ರೀತಿಯ ಪ್ರ್ಯಾಂಕ್ ಮಾಡಲಾಗಿತ್ತು.

ಇದನ್ನೂ ಓದಿ: ತಮಗಿಂತ ಕೆಳಗಿದ್ದಾರೆ ಎಂದು ನಕ್ಕಿದ್ದ ತ್ರಿವಿಕ್ರಂ-ರಜತ್​ಗೆ ಸುತ್ತಿ ಬಂತು ಕರ್ಮ

‘ಮಕರ ಸಂಕ್ರಾಂತಿ ಹಬ್ಬದ ಈ ಶುಭ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರ ಹೋಗುತ್ತಿಲ್ಲ. ಆದರೆ, ನಡುವಾರದ ಎಲಿಮಿನೇಷನ್ ನಡೆಯಲೇಬೇಕು. ಅಲ್ಲಿಯವರೆಗೆ ಮುಖ್ಯದ್ವಾರ ತೆಗೆದೇ ಇರುತ್ತದೆ’ ಎಂದು ಬಿಗ್ ಬಾಸ್ ಘೋಷಿಸಿದರು. ಸದ್ಯ ಗೌತಮಿ ಹೊರ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಪಿಸೋಡ್ ಇಂದು (ಜನವರಿ 16) ಪ್ರಸಾರ ಕಾಣಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:05 am, Thu, 16 January 25

ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ