ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಚೈತ್ರಾ; ಪರಿಸ್ಥಿತಿ ಗಂಭೀರ

ಈ ವಾರದ ಬಿಗ್ ಬಾಸ್ ಆಟದಲ್ಲಿ ಕಳಪೆ ಯಾರು ಎಂಬುದನ್ನು ಆಯ್ಕೆ ಮಾಡುವುದಕ್ಕೂ ಕೆಲವೇ ಗಂಟೆಗಳ ಮುನ್ನ ಚೈತ್ರಾ ಕುಂದಾಪುರ ಅವರು ಕುಸಿದು ಬಿದ್ದಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಪ್ರಜ್ಞೆ ಬರಲಿಲ್ಲ. ನಂತರ ಚಿಕಿತ್ಸೆಗಾಗಿ ಅವರನ್ನು ಕರೆದುಕೊಂಡು ಹೋಗಲಾಯಿತು. ಅವರಿಗೆ ನಿಜಕ್ಕೂ ಏನಾಗಿದೆ ಎಂಬುದು ಗೊತ್ತಾಗುವುದು ಬಾಕಿ ಇದೆ.

ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಚೈತ್ರಾ; ಪರಿಸ್ಥಿತಿ ಗಂಭೀರ
ಚೈತ್ರಾ ಕುಂದಾಪುರ

Updated on: Nov 15, 2024 | 10:56 PM

ಜೋಡಿ ಟಾಸ್ಕ್ ಮುಗಿದ ಬಳಿಕ ಚೈತ್ರಾ ಕುಂದಾಪುರ ಅವರು ಕುಸಿದು ಬಿದ್ದಿದ್ದಾರೆ. ಬಾತ್​ರೂಮ್​ ಏರಿಯಾಲ್ಲಿ ಒಬ್ಬರೇ ಇದ್ದಾಗ ಅವರು ಪ್ರಜ್ಞೆ ತಪ್ಪಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಕೂಡಲೇ ಅವರ ನೆರವಿಗಾಗಿ ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ಅವರನ್ನು ಕಳಿಸಿದ್ದಾರೆ. ಅವರಿಬ್ಬರು ಓಡಿ ಬಂದು ನೋಡಿದಾಗ ಚೈತ್ರಾ ಕುಂದಾಪುರ ಅವರು ನೆಲದ ಮೇಲೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರು ಕೂಡ ಓಡೋಡಿ ಬಂದರು. ಎಷ್ಟು ಪ್ರಯತ್ನಿಸಿದರೂ ಕೂಡ ಚೈತ್ರಾ ಅವರಿಗೆ ಪ್ರಜ್ಞೆ ಬಂದಿಲ್ಲ.

ಪ್ರಜ್ಞೆ ತಪ್ಪಿ ಬಿದ್ದಿದ್ದ ಚೈತ್ರಾ ಕುಂದಾಪುರ ಅವರ ಮುಖದ ಮೇಲೆ ನೀರು ಚಿಮುಕಿಸಲಾಯಿತು. ಆದರೂ ಸಹ ಅವರ ಎಚ್ಚರಗೊಳ್ಳಲಿಲ್ಲ. ಕೂಡಲೇ ಅವರನ್ನು ಕನ್ಫೆಷನ್​ ರೂಮಿಗೆ ಕರೆದುಕೊಂಡು ಬರುವಂತೆ ಬಿಗ್ ಬಾಸ್ ಆದೇಶಿಸಿದರು. ತ್ರಿವಿಕ್ರಮ್ ಅವರು ಚೈತ್ರಾ ಅವರನ್ನು ಎತ್ತಿಕೊಂಡು ಬಂದು ಕನ್ಫೆಷನ್​ ರೂಮ್​ನಲ್ಲಿ ಮಲಗಿಸಿದರು. ಎತ್ತಿಕೊಂಡ ಬರುವಾಗ ಚೈತ್ರಾ ಪರಿಸ್ಥಿತಿ ಗಂಭೀರವಾಗಿದ್ದಂತೆ ಕಾಣಿಸಿದೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಟಾಸ್ಕ್ ಇರುತ್ತದೆ. ಹಾಗಾಗಿ ಎನರ್ಜಿ ಲೆವೆಲ್ ಕಾಪಾಡಿಕೊಳ್ಳುವುದು ಮುಖ್ಯ. ಚೈತ್ರಾ ಅವರು ಹೀಗೆ ಏಕಾಏಕಿ ಪ್ರಜ್ಞೆ ತಪ್ಪಿ ಬೀಳಲು ಕಾರಣ ಆಗಿದ್ದು ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಕಳಪೆ ಮತ್ತು ಉತ್ತಮ ಯಾರು ಎಂಬುದನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಚೈತ್ರಾ ಅವರು ಕಾಣಿಸಿಕೊಳ್ಳಲಿಲ್ಲ. ಅವರನ್ನು ಈ ಪ್ರತಿಕ್ರಿಯೆಯಿಂದಲೇ ಹೊರಗೆ ಇಡಲಾಗಿದೆ.

ಇದನ್ನೂ ಓದಿ: ಮಾಡೋದೆಲ್ಲ ಮಾಡಿ ಮಳ್ಳಿಯಂತೆ ಕುಳಿತ ಚೈತ್ರಾ; ತಮಗಾದ ಮೋಸಕ್ಕೆ ತಿರುಗಿ ಬಿದ್ದ ಶಿಶಿರ್

ಈ ಮೊದಲಿನ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಮತ್ತು ಶಿಶಿರ್ ನಡುವೆ ದೊಡ್ಡ ಜಗಳ ಆಗಿತ್ತು. ಆಗ ಚೈತ್ರಾ ಮೇಲೆ ಶಿಶಿರ್ ಅವರು ಸಿಕ್ಕಾಪಟ್ಟೆ ಕೂಗಾಡಿದ್ದರು. ಅನೇಕರ ಜೊತೆ ಚೈತ್ರಾ ಕಿರಿಕ್ ಮಾಡಿಕೊಂಡಿದ್ದಾರೆ. ಅನಗತ್ಯವಾಗಿ ಜೋರು ಧ್ವನಿಯಲ್ಲಿ ಮಾತನಾಡುವ ಮೂಲಕ ಅವರು ಕಿರಿಕ್​ಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹಾಗಾಗಿ ನಾಮಿನೇಷನ್​ ವೇಳೆ ಅವರು ಅನೇಕರ ಟಾರ್ಗೆಟ್ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us