ಹನುಮಂತ ಅಲ್ಲ, ಚೈತ್ರಾ ಕುಂದಾಪುರ ಪ್ರಕಾರ ಕಪ್ ಎತ್ತೋದು ಇವರೇ

ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆಟದಿಂದ ಹೊರಬಿದ್ದಿದ್ದಾರೆ. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಯಾರು ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ. ಭವ್ಯಾ ಗೌಡ ಮತ್ತು ಗೌತಮಿ ಜಾಧವ್ ಫೈನಲ್‌ನಲ್ಲಿ ಇರಬಹುದು ಎಂದು ಅವರು ಊಹಿಸಿದ್ದಾರೆ.

ಹನುಮಂತ ಅಲ್ಲ, ಚೈತ್ರಾ ಕುಂದಾಪುರ ಪ್ರಕಾರ ಕಪ್ ಎತ್ತೋದು ಇವರೇ
ಹನುಮಂತ-ಚೈತ್ರಾ

Updated on: Jan 14, 2025 | 10:50 AM

ನಟಿ ಚೈತ್ರಾ ಕುಂದಾಪುರ ಅವರ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಗೂ ಮೊದಲೇ ಔಟ್ ಆಗಿದ್ದಾರೆ. 105ಕ್ಕೂ ಹೆಚ್ಚು ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದ ಅವರು ಈಗ ಆಟದಿಂದ ಹೊರ ಹೋಗಿದ್ದಾರೆ. ಅವರು ಆಟವನ್ನು ಹತ್ತಿರದಿಂದ ನೋಡಿದವರು. ಯಾರು ದೊಡ್ಮನೆಯಿಂದ ಹೊರ ಹೋಗುತ್ತಾರೆ ಹಾಗೂ ಯಾರು ಗೆಲ್ಲುತ್ತಾರೆ ಎಂಬುದನ್ನು ಚೈತ್ರಾ ವಿವರಿಸಿದ್ದಾರೆ.

ಬಿಗ್ ಬಾಸ್​ ಮನೆಯಲ್ಲಿ ನಡೆಯುವ 24 ಗಂಟೆಗಳಲ್ಲಿ ತೋರಿಸೋದು ಕೇವಲ ಒಂದು ಗಂಟೆ ಮಾತ್ರ. ಆದರೆ, ದೊಡ್ಮನೆಯಲ್ಲೇ ಇದ್ದವರಿಗೆ ಯಾರ ಆಟ ಹೇಗೆ, ಅವರ ನಿಜವಾದ ವ್ಯಕ್ತಿತ್ವ ಹೇಗೆ ಎಂಬುದು ಗೊತ್ತಿರುತ್ತದೆ. ಅದೇ ರೀತಿ ಚೈತ್ರಾ ಕುಂದಾಪುರ ಅವರು ಎಲ್ಲಾ ಸ್ಪರ್ಧಿಗಳನ್ನು ಹತ್ತಿರದಿಂದ ಕಂಡವರು. ಅವರು ದೊಡ್ಮನೆ ಆಟದ ಬಗ್ಗೆ ಹೇಳಿದ್ದಾರೆ. ಕಪ್​ನ ಯಾರು ಗೆಲ್ಲಬಹುದು ಎಂದು ಹೇಳಿದ್ದಾರೆ.

‘ಹನುಮಂತ ಹಾಗೂ ತ್ರಿವಿಕ್ರಂ ಅವರು ಸುದೀಪ್ ಅಕ್ಕ ಪಕ್ಕ ಇರುತ್ತಾರೆ. ತ್ರಿವಿಕ್ರಂ ಗೆಲ್ಲಬೇಕು. ಅವರು ಸಾಕಷ್ಟು ಶ್ರಮ ಹಾಕಿ ಆಡಿದ್ದಾರೆ. ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಭವ್ಯಾ ಹಾಗೂ ಗೌತಮಿ ಫಿನಾಲೆಯಲ್ಲಿ ಇರಬಹುದು’ ಎಂದಿದ್ದಾರೆ ಚೈತ್ರಾ ಕುಂದಾಪುರ.

ಇದನ್ನೂ ಓದಿ: ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ಕುಂದಾಪುರ ತಿರುಗೇಟು

ಬಿಗ್ ಬಾಸ್​ನಲ್ಲಿ ಅದೃಷ್ಟ ಅನ್ನೋದು ತುಂಬಾನೆ ಮುಖ್ಯವಾಗುತ್ತದೆ. ಚೈತ್ರಾ ಅವರಿಗೆ ಇದು ಚೆನ್ನಾಗಿ ಗೊತ್ತಿದೆ. ಈ ಕಾರಣಕ್ಕೆ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ‘ಅದೃಷ್ಟು ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ತ್ರಿವಿಕ್ರಂ ಅವರು ಎರಡು ಸೆಕೆಂಡ್ ಗ್ಯಾಪ್​​ನಲ್ಲಿ ಫಿನಾಲೆ ಹೋಗುವುದನ್ನು ತಪ್ಪಿಸಿಕೊಂಡರು. ಹೀಗಾಗಿ, ಈ ವಾರ ಟಾಸ್ಕ್ ಕೊಟ್ಟಿದ್ದಾರೆ. ಆಗ ಯಾರು ಹೊರಹೋಗುತ್ತಾರೆ ಎಂದು ಹೇಳೋದು ಕಷ್ಟ’ ಎಂದಿದ್ದಾರೆ ಚೈತ್ರಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.