
ಖ್ಯಾತ ಟಿವಿ ನಿರೂಪಕಕಿ, ಮಾಜಿ ಬಿಗ್ಬಾಸ್ ಸ್ಪರ್ಧಿಯೂ ಆಗಿರುವ ಚೈತ್ರಾ ವಾಸುದೇವನ್ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಮೊದಲ ಮದುವೆ ಬಳಿಕ ದಂಪತಿಗಳು ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ಚೈತ್ರಾ ವಾಸುದೇವನ್ ಎರಡನೇ ಮದುವೆ ಆಗಲಿದ್ದು, ಈ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಖಾತ್ರಿ ಪಡಿಸಿದ್ದಾರೆ. ಚೈತ್ರಾ ವಾಸುದೇವನ್ ಹಾಗೂ ಭಾವಿ ಪತಿ ಪ್ಯಾರಿಸ್ನಲ್ಲಿ ಪರಸ್ಪರ ಉಂಗುರ ಬದಲಿಸಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಚೈತ್ರಾ ವಾಸುದೇವನ್ ಹಾಗೂ ಅವರ ಭಾವಿ ಪತಿ ಹೃದಯದಾಕಾರದ ಉಂಗುರಗಳನ್ನು ತೊಟ್ಟು ಪ್ಯಾರಿಸ್ನಲ್ಲಿ ಓಡಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದರ ವಿಡಿಯೋ ಅನ್ನು ಚೈತ್ರಾ ವಾಸುದೇವನ್ ಹಂಚಿಕೊಂಡಿದ್ದಾರೆ. ಆದರೆ ಚೈತ್ರಾ, ತಾವು ಮದುವೆ ಆಗುತ್ತಿರುವ ಯುವಕನ ಮುಖವನ್ನು ವಿಡಿಯೋದಲ್ಲಿ ತೋರಿಸಿಲ್ಲ. ಚೈತ್ರಾ ಅವರನ್ನು ಮದುವೆ ಆಗುತ್ತಿರುವ ಯುವಕ ಯಾರೆಂಬುದು ಗುಟ್ಟಾಗಿಯೇ ಇದೆ. ಎರಡನೇ ಮದುವೆ ಘೋಷಣೆಗೆ ಶಾಸ್ವಿ ಶ್ರೀವತ್ಸ, ಹರ್ಷಿಕಾ ಪೂಣಚ್ಚ, ದಿವ್ಯಾ ಉರುಡುಗ, ಶ್ವೇತಾ ಚೆಂಗಪ್ಪ, ಕಾವ್ಯಾ ಗೌಡ, ಕಾವ್ಯಾ ಶೆಟ್ಟಿ ಇನ್ನೂ ಅನೇಕ ಟಿವಿ ಮತ್ತು ಸಿನಿಮಾ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.
ಚೈತ್ರಾ ವಾಸುದೇವನ್ ಈ ಹಿಂದೆ ಮದುವೆ ಆಗಿದ್ದರು. ಆದರೆ ದಾಂಪತ್ಯದಲ್ಲಿ ವಿರಸ ಮೂಡಿದ ಕಾರಣ ವಿಚ್ಛೇದನ ಪಡೆದುಕೊಂಡಿದ್ದರು. ಬಿಗ್ಬಾಸ್ 7ರ ಸ್ಪರ್ಧಿ ಆಗಿದ್ದ ಚೈತ್ರಾ ವಾಸುದೇವನ್, ಜನಪ್ರಿಯ ಟಿವಿ ನಿರೂಪಕಿಯೂ ಹೌದು. ಜೊತೆಗೆ ಉದ್ಯಮಿಯೂ ಆಗಿರುವ ಚೈತ್ರಾ ವಾಸುದೇವನ್ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಇದೀಗ ಎರಡನೇ ಮದುವೆ ಆಗುವ ಮೂಲಕ ಬಾಳಿನಲ್ಲಿ ಮತ್ತೆ ಜಂಟಿಯಾಗಲು ಚೈತ್ರಾ ಮುಂದಾಗಿದ್ದಾರೆ.
ಕಳೆದ ಕೆಲ ದಿನಗಳಿಂದಲೂ ಪ್ಯಾರಿಸ್ನಲ್ಲಿರುವ ಚೈತ್ರಾ ವಾಸುದೇವನ್ ಅವರು ಅಲ್ಲಿ ಕೆಲ ಫೋಟೊಶೂಟ್ಗಳನ್ನು ಮಾಡಿಸಿದ್ದಾರೆ. ಕೊನೆಗೆ ಐಫೆಲ್ ಟವರ್ ಎದುರು ನಿಂತು ತಾವು ಮದುವೆ ಆಗಲಿರುವ ವಿಷಯವ ಘೋಷಿಸಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿಯೂ ಈ ವಿಷಯ ಹಂಚಿಕೊಂಡಿರುವ ನಟಿ, ವಿವಿಧ ಆರೋಗ್ಯಕರ ಆಹಾರದ ಚಿತ್ರಗಳನ್ನು ಹಂಚಿಕೊಂಡು ವಧು ಆಗುತ್ತಿದ್ದೇನೆ. ತ್ವಚೆಯನ್ನು ಸುಂದರವಾಗಿಟ್ಟುಕೊಳ್ಳಲು ಇದೆಲ್ಲ ಮಾಡಬೇಕಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:23 am, Wed, 29 January 25