‘ರೋಲ್ಕಾಲ್ ಮಾಡ್ತೀಯಾ, ನೀನು ಲಾಯರ್ ಅಲ್ಲ, ಲೈಸನ್ಸೇ ರದ್ದಾಗಿದೆ’; ಜಗದೀಶ್ಗೆ ಗುಮ್ಮಿದ ಚೈತ್ರಾ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆದಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡಿದ್ದು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ ಪದಗಳ ಬಳಕೆ ಮಾಡಿದ್ದಾರೆ. ಇದೇ ವೇಳೆ ಚೈತ್ರಾ ಹಾಗೂ ಜಗದೀಶ್ ಮಧ್ಯೆ ವಾಕ್ಸಮರ ನಡೆದಿದೆ.
ಜಗದೀಶ್ ಅವರು ವಕೀಲರೇ ಅಲ್ಲ ಎನ್ನುವ ಮಾತು ಹೊರಗೆ ಚರ್ಚೆಯಲ್ಲಿದೆ. ಅವರು ವಿದ್ಯಾರ್ಹತೆಗೆ ಸಂಬಂಧಿಸಿದಂತೆ ನಕಲಿ ಪ್ರಮಾಣಪತ್ರ ನೀಡಿದ್ದರಿಂದ ಅವರು ವಕೀಲಗಿರಿ ಮಾಡುವ ಲೈಸೆನ್ಸ್ನ ಕ್ಯಾನ್ಸಲ್ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದನ್ನು ಅವರ ಆಪ್ತ ಬಳಗದವರು ಒಪ್ಪಿಲ್ಲ. ಹೀಗಿರುವಾಗಲೇ ಈ ವಿಚಾರ ದೊಡ್ಮನೆ ಒಳಗೂ ಚರ್ಚೆಗೆ ಬಂದಿದೆ. ಚೈತ್ರಾ ಅವರು ಜಗದೀಶ್ ವಿರುದ್ಧ ಈ ವಿಚಾರದಲ್ಲಿ ಸಿಡಿದೆದಿದ್ದಾರೆ.
‘ಬಿಗ್ ಬಾಸ್’ಗೆ ಬರುವುದಕ್ಕೂ ಮೊದಲು ಚೈತ್ರಾ ಕುಂದಾಪುರ ಅವರು ಜೈಲು ಸೇರಿದ್ದರು. ಇದಕ್ಕೆ ಕಾರಣ ಆಗಿದ್ದು 5 ಕೋಟಿ ರೂಪಾಯಿ ಹಣ ಪಡೆದ ಆರೋಪ. ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಹೇಳಿದ್ದರು ಎನ್ನುವ ಆರೋಪ ಇದೆ. ಈ ವಿಚಾರವನ್ನು ಜಗದೀಶ್ ಅವರು ದೊಡ್ಮನೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಚೈತ್ರಾ ಕೌಂಟರ್ ನೀಡಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಭರ್ಜರಿ ಕಿತ್ತಾಟ ನಡೆದಿದೆ. ಹಂಸಾ ವಿರುದ್ಧ ಮಾಡಿದ ಪದಬಳಕೆಯಿಂದ ಇಡೀ ಮನೆ ಸಿಡಿದೆದ್ದಿದೆ. ಆಗ ಚೈತ್ರಾ ಅವರು ಜಗದೀಶ್ ಅವರ ವಿರುದ್ಧ ಏರು ಧ್ವನಿಯಲ್ಲು ಮಾತನಾಡಿದ್ದಾರೆ. ಇದಕ್ಕೆ ಸಿಟ್ಟಾದ ಜಗದೀಶ್ ‘ಐದು ಕೋಟಿ ರೂಪಾಯಿ ತಂಗೊಂಡಿದೀಯಾ’ ಎನ್ನುವ ಆರೋಪ ಮಾಡಿದ್ದಾರೆ. ಇದಕ್ಕೆ ಚೈತ್ರಾ ಸಾಕ್ಷಿ ಎಲ್ಲಿದೆ ಎಂದು ಕೇಳಿದ್ದಾರೆ. ‘ಹೋಗಿ ಚಾರ್ಜ್ಶೀಟ್ನಲ್ಲಿ ನೋಡಿಕೋ ಕಾಣುತ್ತೆ’ ಎಂದು ಹೊರಗಿನ ವಿಚಾರ ಕೆದಕಿದ್ದಾರೆ.
ಇದನ್ನೂ ಓದಿ: ರಂಜಿತ್, ಜಗದೀಶ್ ಬಿಗ್ ಬಾಸ್ನಿಂದ ಹೊರಕ್ಕೆ; ಇವರು ಹೋಗಿದ್ದೆಲ್ಲಿಗೆ?
ಯಾವಾಗ ಜಗದೀಶ್ ಅವರು ವೈಯಕ್ತಿಕ ವಿಚಾರ ತೆಗೆದು ಮಾತನಾಡೋಕೆ ಶುರು ಮಾಡಿದರೋ ಇದಕ್ಕೆ ಚೈತ್ರಾ ಅವರು ಕೌಂಟರ್ ಕೊಟ್ಟಿದ್ದಾರೆ. ‘ನೀನು ರೋಲ್ ಕಾಲ್ ಮಾಡ್ತೀಯಾ. ಅದನ್ನು ಹೇಳಬೇಕಾ? ಲಾಯರ್ಗಿರಿ ಮಾಡೋಕೆ ನೀನು ಅರ್ಹನಲ್ಲ. ನೀನು ವಕೀಲನೇ ಅಲ್ಲ. ಲೋಕಲ್ ಲಾಯರ್’ ಎಂದಿದ್ದಾರೆ ಜಗದೀಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:22 am, Fri, 18 October 24