ಇತ್ತ ಕಿತ್ತಾಟ, ಅತ್ತ ಸಲ್ಲಾಪ; ಬಿಗ್ ಬಾಸ್​ನಲ್ಲಿ ಜಗಳ ನಡೆಯುವಾಗಲೇ ಅನುಷಾ-ಧರ್ಮ ರೊಮ್ಯಾನ್ಸ್

ಧರ್ಮ ಹಾಗೂ ಅನುಷಾ ರೈ ಮಧ್ಯೆ ಮೊದಲೇ ಪರಿಚಯ ಇತ್ತು. ಇಬ್ಬರೂ ಸಿನಿಮಾ ಹಿನ್ನೆಲೆಯಿಂದ ಬಂದವರು. ಇಬ್ಬರೂ ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದಾರೆ. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಇದು ಬಿಗ್ ಬಾಸ್​ ಮನೆಯಲ್ಲೂ ಮುಂದುವರಿದಿದೆ.

ಇತ್ತ ಕಿತ್ತಾಟ, ಅತ್ತ ಸಲ್ಲಾಪ; ಬಿಗ್ ಬಾಸ್​ನಲ್ಲಿ ಜಗಳ ನಡೆಯುವಾಗಲೇ ಅನುಷಾ-ಧರ್ಮ ರೊಮ್ಯಾನ್ಸ್
ಅನುಷಾ-ಧರ್ಮ
Follow us
ರಾಜೇಶ್ ದುಗ್ಗುಮನೆ
|

Updated on: Oct 18, 2024 | 10:01 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಜಗಳವೇ ನಡೆದು ಹೋಗಿದೆ. ಬಹುತೇಕ ಎಲ್ಲಾ ಸ್ಪರ್ಧಿಗಳು ಇದರಲ್ಲಿ ಭಾಗಿ ಆಗಿದ್ದರು. ಒಬ್ಬರಿಗೊಬ್ಬರು ಬೈದುಕೊಳ್ಳುತ್ತಿದ್ದರು. ಅಲ್ಲಿ ಅವಾಚ್ಯ ಶಬ್ದಗಳ ಬಳಕೆ ಆಯಿತು. ಹೀಗಿರುವಾಗಲೇ ಧರ್ಮ ಹಾಗೂ ಅನುಷಾ ತಮ್ಮದೇ ಆದ ಲೋಕದಲ್ಲಿ ತೇಲುತ್ತಾ ಇದ್ದರು. ಆ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಧರ್ಮ ಹಾಗೂ ಅನುಷಾ ರೈ ಮಧ್ಯೆ ಮೊದಲೇ ಪರಿಚಯ ಇತ್ತು. ಇಬ್ಬರೂ ಸಿನಿಮಾ ಹಿನ್ನೆಲೆಯಿಂದ ಬಂದವರು. ಇಬ್ಬರೂ ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದಾರೆ. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಇದು ಬಿಗ್ ಬಾಸ್​ ಮನೆಯಲ್ಲೂ ಮುಂದುವರಿದಿದೆ. ಧರ್ಮ ಬಗ್ಗೆ ನನಗೆ ಕ್ರಶ್ ಇದೆ ಎಂದು ಓಪನ್ ಆಗಿ ಹೇಳಿಕೊಂಡಿದ್ದರು. ಐಶ್ವರ್ಯಾ ಹಾಗೂ ಧರ್ಮ ಕ್ಲೋಸ್ ಆಗುತ್ತಿರುವದನ್ನು ನೋಡಿದ ಅನುಷಾ ಸಿಟ್ಟಾಗಿದ್ದೂ ಇತ್ತು. ಈಗ ಇವರ ರೊಮ್ಯಾನ್ಸ್ ಮುಂದುವರಿದಿದೆ.

ದೊಡ್ಮನೆಯಲ್ಲಿ ಜಗದೀಶ್ ಹಾಗೂ ರಂಜಿತ್ ಹೊಡೆದಾಡಿಕೊಳ್ಳುತ್ತಿದ್ದರು. ಇತ್ತ ಅಡುಗೆ ಮನೆಯಲ್ಲಿ ಧರ್ಮ ಹಾಗೂ ಅನುಷಾ ಚಪಾತಿ ಬೇಯಿಸುತ್ತಿದ್ದರು. ಅವರು ಕಿತ್ತಾಟ ಆಯಿತು ಎಂಬ ಕಾರಣಕ್ಕೆ ಅಲ್ಲಿಗೆ ತೆರಳಿಲ್ಲ. ಬದಲಿಗೆ ಅಡುಗೆ ಮನೆಯಿಂದಲೇ ಎಲ್ಲವನ್ನೂ ನೋಡುತ್ತಾ ನಿಂತಿದ್ದರು.

ದೊಡ್ಡದಾಗಿ ಕಿತ್ತಾಟ ನಡೆಯುವಾಗ ಅನುಷಾ ಅವರು ಪ್ರೀತಿಯಿಂದ ಧರ್ಮಗೆ ಚಪಾತಿ ತಿನ್ನಿಸಿದ್ದಾರೆ. ಈ ಫೋಟೋಗೆ ನಾನಾ ರೀತಿಯ ಕಮೆಂಟ್ ಬಂದಿದೆ. ಇವರನ್ನು ಅನೇಕರು ‘ರೊಮ್ಯಾಂಟಿಕ್ ಜೋಡಿ’ ಎಂದು ಕರೆದಿದ್ದಾರೆ. ಅನುಷಾ ರೈ ಅವರು ದೊಡ್ಮನೆಯಲ್ಲಿ ರಿಲೇಶನ್​ಶಿಪ್ ಬೆಳೆಸೋಕೆ ರೆಡಿ ಇದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದರು. ಈಗ ಅದರ ಮುಂದುವರಿದ ಭಾಗ ಇದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಅನುಷಾ ರೈಗೆ ಬರ್ತಿದೆ ಬಿಗ್ ಬಾಸ್ ಬಿಟ್ಟು ಹೋಗುವ ಆಲೋಚನೆ

ಧರ್ಮ ಅವರ ವ್ಯಕ್ತಿತ್ವದಲ್ಲಿ ಸಖತ್ ಸಾಫ್ಟ್. ಯಾರ ವಿರುದ್ಧವೂ ಪಿತೂರಿ ಮಾಡಿದವರಲ್ಲ. ಸಖತ್ ಕೂಲ್ ಆಗಿ ಅವರು ಇರುತ್ತಾರೆ. ಯಾವಾಗಲೂ ಪಾಸಿಟಿವ್ ಆಗಿ ಯೋಚನೆ ಮಾಡುತ್ತಾರೆ. ಧರ್ಮ ಹಾಗೂ ಅನುಷಾ ಕ್ಲೋಸ್ ಆಗುತ್ತಿದ್ದು, ಲವ್ ಸ್ಟೋರಿ ಹುಟ್ಟಿಕೊಳ್ಳೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.