ಸುದೀಪ್ ಹೇಳಿದ್ದ ವಿಚಾರವನ್ನು ಚಕ್ರವರ್ತಿ ಚಂದ್ರಚೂಡ್ ಅವರು ತಿರುಚಿ ಹೇಳಿದ್ದರು. ಇದನ್ನು ವಾರಾಂತ್ಯದಲ್ಲಿ ಸುದೀಪ್ ಚರ್ಚೆಗೆ ತೆಗೆದುಕೊಂಡರು. ಪದೇಪದೇ ಚಕ್ರವರ್ತಿ ಅವರದ್ದೇ ತಪ್ಪು ಎಂದು ಸುದೀಪ್ ಹೇಳಿದರು. ಇದು ಚಕ್ರವರ್ತಿ ಕೋಪಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಸುದೀಪ್ ವಿರುದ್ಧ ಚಕ್ರವರ್ತಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಕೇಳಿದ ಸುದೀಪ್ ಕೂಲ್ ಆಗಿಯೇ ತಿರುಗೇಟು ನೀಡಿದ್ದಾರೆ.
‘ಬಿಗ್ ಬಾಸ್ ಮನೆಯಲ್ಲಿ ಪದೇಪದೇ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನ್ನನ್ನು ಸುದೀಪ್ ಸ್ತ್ರೀ ಪೀಡಕ ಎಂಬಂತೆ ಮಾಡಿದ್ದಾರೆ. ನಾನು ಟಾರ್ಗೆಟ್ ಆಗುತ್ತಿದ್ದೇನೆ’ ಎಂದು ಬ್ರೇಕ್ ಸಂದರ್ಭದಲ್ಲಿ ಚಕ್ರವರ್ತಿ ಸ್ಪರ್ಧಿಗಳ ಜತೆ ಅಭಿಪ್ರಾಯ ಹಂಚಿಕೊಂಡರು. ಬ್ರೇಕ್ ತೆಗೆದುಕೊಂಡ ಬಂದ ನಂತರದಲ್ಲಿ ಚಕ್ರವರ್ತಿಯನ್ನು ಸುದೀಪ್ ಹೊಗಳಿದರು. ಆದರೆ, ಈ ಹೊಗಳಿಕೆ ಚಕ್ರವರ್ತಿಗೆ ಇಷ್ಟವಾಗಿಲ್ಲ.
‘ಪ್ರತಿ ವಾರವೂ ನನಗೊಂದು ಎಪಿಸೋಡ್ ಮೀಸಲಿಡುತ್ತಿದ್ದೀರಿ. ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ. ಅಂತೂ ಈಗ ನಾಲ್ಕು ಸಾಲು ಒಳ್ಳೆದನ್ನು ಹೇಳಿದ್ದೀರಿ. ಸಾಧು ಸಂತರ ಮಧ್ಯೆ ನಾನು ಕ್ರಿಮಿನಲ್ ಆಗಿದ್ದೇನೆ’ ಎಂದು ದೂರಿದರು ಚಕ್ರವರ್ತಿ.
ಇದಕ್ಕೆ ಕೊಟ್ಟ ಸುದೀಪ್ ಸಖತ್ ಖಡಕ್ ಆಗಿತ್ತು. ‘ನೀವು ಹೇಳಿರೋದನ್ನೇ, ಮಾಡಿದ್ದನ್ನೇ ನಾನು ಹೇಳಿದ್ದೀನಿ. ನಂದೇನಾದರೂ ಇದೆಯಾ? ಒಳ್ಳೇದನ್ನೂ ಹೇಳಿದ್ದೀನಿ. ನಿಮ್ಮ ಜ್ಞಾನಕ್ಕೆ ನಾನು ಫ್ಯಾನ್ ಎಂದು ಹೇಳಿದೀನಿ. ಈ ಮನೆಯಲ್ಲಿ ಎಷ್ಟು ಜನಕ್ಕೆ ಇದನ್ನು ಹೇಳಿದ್ದೇನೆ? ನಿಮ್ಮಲ್ಲಿ ಒಳ್ಳೆತನ ಇದೆ. ಈ ವಾರ ಕೋಪ ಕಂಟ್ರೋಲ್ ಮಾಡಿಕೊಂಡ್ರಿ. ಅದನ್ನು ಹೇಳ್ತಾ ಇದೀನಿ. ನೀವು ಕೊಟ್ಟಿರೋ ಬೇಜಾರನ್ನು ಬೇಜಾರಿಂದಲೇ ಹೇಳದೇ ತುಪ್ಪ ಹಚ್ಚಿ ಹೇಳಲಾ? ನಿಮ್ಮ ವೇದಿಕೆಯಿಂದ ನಾಲ್ಕು ಜನ ಕಲಿಯಲಿ ಅನ್ನೋದು ನನ್ನ ಅರ್ಥ’ ಎಂದು ಸುದೀಪ್ ತಿರುಗೇಟು ನೀಡಿದರು.
ಇದನ್ನೂ ಓದಿ:
‘ನಿಮಗೂ ಮಧ್ಯಬೆಟ್ಟು ತೋರಿಸೋಕೆ ಕಾಯುತ್ತಿದ್ದೇವೆ’; ಚಕ್ರವರ್ತಿ ಚಂದ್ರಚೂಡ್ ಹೊರಹಾಕಲು ಆರಂಭವಾಗಿದೆ ಅಭಿಯಾನ
ಅಶ್ಲೀಲ ಸನ್ನೆ ಮಾಡಿ ಸಮತೋಲನದ ನೆಪ ಹೇಳಿದ ಚಕ್ರವರ್ತಿಗೆ ಸುದೀಪ್ ಸಖತ್ ಕ್ಲಾಸ್