
ಬಿಗ್ ಬಾಸ್ (Bigg Boss) ಮನೆಯಲ್ಲಿ ನಾನಾ ರೀತಿಯ ಎಲಿಮಿನೇಷನ್ ನಡೆದಿದೆ. ಕೆಲವು ಸ್ಪರ್ಧಿಗಳಿಗೆ ಒಂದು ಹಂತ ಆದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಇರಲೇಬಾರದು ಎಂದು ಅನಿಸಿ ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಮನೆಯ ಒಳಗೆ ಬರೋಕೆ ಸುಲಭದಲ್ಲಿ ಬರಬಹುದು. ಆದರೆ, ಹೊರ ಹೋಗೋದು ಜನರು ಕಡಿಮೆ ವೋಟ್ ಮಾಡಿದ ವಾರವರೇ. ಆದಾಗ್ಯೂ ಹಾಸ್ಯನಟ ಚಂದ್ರಪ್ರಭ ಅವರು ದೊಡ್ಮನೆಯಿಂದ ಹೊರ ಹೋಗೋದಾಗಿ ಹೇಳಿ ಹಠ ಹಿಡಿದಿದ್ದರು. ಇದಕ್ಕೆ ಒಂದು ಘಟನೆ ಕಾರಣ ಆಯಿತಾ ಎಂಬ ಪ್ರಶ್ನೆ ಮೂಡಿದೆ.
ಕಾವ್ಯಾ ಶೈವ ಹಾಗೂ ಗಿಲ್ಲಿ ನಟನ ಗೆಳೆತನದ ಬಗ್ಗೆ ಈ ಮೊದಲು ಚಂದ್ರಪ್ರಭ ಕೆಟ್ಟದಾಗಿ ಮಾತನಾಡಿದ್ದರು. ಮಾತು ಮಿತಿಮೀರಿತ್ತು. ಈ ಪದಗಳು ಕಾವ್ಯಾಗೆ ಬೇಸರ ಮೂಡಿಸಿದ್ದವು. ಇದು ಸರಿ ಅಲ್ಲ ಎಂದು ಕಾವ್ಯಾ ಅವರು ಚಂದ್ರಪ್ರಭಗೆ ಹೇಳಿದ್ದರೂ ಅದನ್ನೂ ಕೇಳಲಿಲ್ಲ. ಶನಿವಾರ ಈ ವಿಚಾರ ಚರ್ಚೆಗೆ ಬಂದಿದೆ. ಸುದೀಪ್ ಇದನ್ನು ಚಂದ್ರಪ್ರಭ ಬಳಿ ಪ್ರಶ್ನೆ ಮಾಡಿದ್ದರು.
‘ಚಂದ್ರಪ್ರಭ ಅವರೇ ಸರಿಯಾಗಿ ಇರಬೇಕು ಎಂದು ನುಡಿಯುವ ನೀವು, ರಿಷಾ ಜೊತೆ ಇದೇ ರೀತಿ ನಡೆದುಕೊಳ್ಳುತ್ತಿದ್ದೀರಲ್ಲ’ ಎಂದು ಪ್ರಶ್ನೆ ಮಾಡಿದರು. ರಿಷಾ ಜೊತೆ ಅವರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದರ ವಿಡಿಯೋನ ಕೂಡ ಹಾಕಿದರು. ಈ ವಿಚಾರ ಚಂದ್ರಪ್ರಭಗೆ ಸಾಕಷ್ಟು ಬೇಸರ ಮೂಡಿಸಿತು. ಆ ಬಳಿಕ ಅವರು ತುಂಬಾನೇ ಸೈಲೆಂಟ್ ಆಗಿ ಬಿಟ್ಟರು.
ಭಾನುವಾರದ ಎಪಿಸೋಡ್ನಲ್ಲೂ ಚಂದ್ರಪ್ರಭ ಅವರಿಗೆ ಊಸರವಳ್ಳಿ ರೀತಿಯ ಟ್ಯಾಗ್ಗಳು ಸಿಕ್ಕವು. ಇದು ಅವರಿಗೆ ಬೇಸರ ಮೂಡಿಸಿದೆ. ಈ ಚಟುವಟಿಕೆ ಮುಗಿಯುತ್ತಿದ್ದಂತೆ ಬಿಗ್ ಬಾಸ್ನ ಮುಖ್ಯದ್ವಾರದಿಂದ ಹೊರ ಹೋಗುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯ ಆಗಲಿಲ್ಲ.
ಇದನ್ನೂ ಓದಿ: ‘ಹೀಗೆ ಆದರೆ ಹೊರ ಹೋಗ್ತೀರಿ’; ಒಂದೇ ಎಪಿಸೋಡ್ನಲ್ಲಿ ಗಿಲ್ಲಿಗೆ ಎರಡೆರಡು ಬಾರಿ ವಾರ್ನಿಂಗ್ ಕೊಟ್ಟ ಸುದೀಪ್
ಅಂತಿಮವಾಗಿ ಸುಧಿ ಹಾಗೂ ಚಂದ್ರಪ್ರಭ ಅವರು ಲಿಸ್ಟ್ನಲ್ಲಿ ಇದ್ದರು. ಸುಧಿ ಅವರು ತಮ್ಮ ವಿಶೇಷ ಅಧಿಕಾರ ಸೇವ್ ಆದರೆ, ಚಂದ್ರಪ್ರಭ ಅವರು ಔಟ್ ಆದರು. ಅವರು ಈ ವಾರ ಉತ್ತಮ ಕೂಡ ಪಡೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:29 am, Mon, 10 November 25