ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ನಾಮಿನೇಷನ್: ಡೇಂಜರ್ ಝೋನ್​ನಲ್ಲಿ 8 ಮಂದಿ

‘ಬಿಗ್ ಬಾಸ್ ಕನ್ನಡ 12’ ಆಟದಲ್ಲಿ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಒಟ್ಟು 8 ಜನರು ಡೇಂಜರ್ ಝೋನ್ ತಲುಪಿದ್ದು ಅವರ ಮನದಲ್ಲಿ ಢವಢವ ಶುರುವಾಗಿದೆ. ಅಮಿತ್, ಕರಿಬಸಪ್ಪ, ಕಾವ್ಯಾ, ಗಿಲ್ಲಿ ನಟ, ಅಶ್ವಿನಿ, ಅಭಿಷೇಕ್, ಧನುಶ್, ಸುಧಿ ನಾಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ನಾಮಿನೇಷನ್: ಡೇಂಜರ್ ಝೋನ್​ನಲ್ಲಿ 8 ಮಂದಿ
Bbk 12 Logo

Updated on: Oct 03, 2025 | 10:32 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ 5 ದಿನಗಳು ಕಳೆಯುತ್ತಿದ್ದಂತೆಯೇ ಆಟದ ಆರ್ಭಟ ಜೋರಾಗಿದೆ. ಒಂಟಿಗಳು ಮತ್ತು ಜಂಟಿಗಳು ಎಂಬ ಕಾನ್ಸೆಪ್ಟ್​​ನಲ್ಲಿ ಶುರುವಾದ ಆಟದಲ್ಲಿ ಪೈಪೋಟಿ ಹೆಚ್ಚಾಗಿದೆ. ಮೊದಲ ವಾರದ ನಾಮಿನೇಷನ್ (Bigg Boss Nomination) ಪ್ರಕ್ರಿಯೆ ನಡೆದಿದೆ. ಯಾರು ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಹೊರಗೆ ಹೋಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಒಟ್ಟು 8 ಜನರನ್ನು ನಾಮಿನೇಟ್ ಮಾಡಲಾಗಿದೆ. ಆ 8 ಜನರು ಈಗ ಡೇಂಜರ್​ ಝೋನ್​​ನಲ್ಲಿ ಇದ್ದಾರೆ. ಆ ಪೈಕಿ ಒಬ್ಬರಿಗೆ ಬಿಗ್ ಬಾಸ್ (Bigg Boss Kannada) ಜರ್ನಿ ಅಂತ್ಯವಾಗಲಿದೆ.​

ಒಂಟಿಗಳ ತಂಡದಿಂದ ಧನುಶ್ ಮತ್ತು ಕಾಕ್ರೋಚ್ ಸುಧಿ ಅವರು ನಾಮಿನೇಟ್ ಆಗಿದ್ದಾರೆ. ಟಫ್ ಸ್ಪರ್ಧಿಗಳು ಎಂಬ ಇಮೇಜ್ ಇದ್ದರೂ ಕೂಡ ಅವರು ನಾಮಿನೇಟ್ ಆಗುವಂತಾಗಿದೆ. ಟಾಸ್ಕ್​​ನಲ್ಲಿ ಅಗ್ರೆಸ್ಸಿವ್ ಆಗಿ ಆಟ ಆಡಿದರೂ ಕೂಡ ನಾಮಿನೇಟ್ ಆಗಿದ್ದಾರೆ. ಅದಕ್ಕೆ ಒಂದಷ್ಟು ಕಾರಣಗಳಿವೆ. ಮೊದಲ ಟಾಸ್ಕ್ ರದ್ದಾದಾಗ ಕಾಕ್ರೋಜ್ ಸುಧಿ ಅವರು ಏರುಧ್ವನಿಯಲ್ಲಿ ಮಾತನಾಡಿದ್ದರಿಂದಲೇ ಅವರು ನಾಮಿನೇಟ್ ಆಗಿದ್ದಾರೆ.

ಜಂಟಿಗಳ ತಂಡದಿಂದ ಆರ್​ಜೆ ಅಮಿತ್, ಬಾಡಿ ಬಿಲ್ಡರ್ ಕರಿಬಸಪ್ಪ, ಕಾವ್ಯಾ ಶೈವ, ಗಿಲ್ಲಿ ನಟ, ಅಶ್ವಿನಿ, ಅಭಿಷೇಕ್ ಅವರನ್ನು ನಾಮಿನೇಟ್ ಮಾಡಲಾಗಿದೆ. ಆರ್ಜೆ ಅಮಿತ್ ಮತ್ತು ಕರಿಬಸಪ್ಪ ಅವರು ಎಲ್ಲರ ಜೊತೆ ಹೆಚ್ಚು ಬೆರೆಯುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡಲಾಗಿದೆ. ಪದೇಪದೇ ನಿಯಮ ಉಲ್ಲಂಘನೆ ಮಾಡಿದ್ದರಿಂದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರು ನಾಮಿನೇಟ್ ಆಗಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಹಲವು ಟ್ವಿಸ್ಟ್​​ಗಳನ್ನು ನೀಡಲಾಗುತ್ತಿದೆ. ಮೂರನೇ ವಾರವೇ ಒಂದು ಫಿನಾಲೆ ಆಗಲಿದೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ಹಾಗಾಗಿ ಮೂರನೇ ವಾರದ ಫಿನಾಲೆಯಲ್ಲಿ ವಿನ್ ಆಗಬೇಕು ಎಂಬ ಗುರಿ ಇಟ್ಟುಕೊಂಡು ಎಲ್ಲರೂ ಹರಸಾಹಸ ಮಾಡುತ್ತಿದ್ದಾರೆ. ಆದರೆ 8 ಜನರು ನಾಮಿನೇಟ್ ಆಗಿರುವುದರಿಂದ ಅವರಿಗೆ ಢವಢವ ಶುರುವಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮಲ್ಲಮನ ಎದುರು ಬಯಲಾಯ್ತು ಗಿಲ್ಲಿ ನಟನ ಲವ್ ಮ್ಯಾಟರ್

ಮಲ್ಲಮ್ಮ ಅವರನ್ನು ಕೂಡ ನಾಮಿನೇಟ್ ಮಾಡಲು ಮಂಜು ಭಾಷಿಣಿ ಅವರು ಪ್ರಯತ್ನಿಸಿದರು. ಮಲ್ಲಮ್ಮ ತುಂಬ ಮುಗ್ಧರಾಗಿದ್ದು, ಮುಂದಿನ ದಿನಗಳಲ್ಲಿ ಪೈಪೋಟಿ ಹೆಚ್ಚಿದಾಗ ಅವರು ಈ ಆಟಕ್ಕೆ ಹೊಂದಿಕೊಳ್ಳುವುದು ಕಷ್ಟ ಆಗಬಹುದು ಎಂಬ ಕಾರಣಕ್ಕೆ ನಾಮಿನೇಟ್ ಮಾಡಲು ಮಂಜು ಭಾಷಿಣಿ ಪ್ರಯತ್ನಿಸಿದರು. ಆದರೆ ಅವರ ಅಭಿಪ್ರಾಯಕ್ಕೆ ಹೆಚ್ಚಿನವರ ಬೆಂಬಲ ಬಾರದ ಕಾರಣ ಮಲ್ಲಮ್ಮ ನಾಮಿನೇಟ್ ಆಗಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.