ಬಿಗ್ ಬಾಸ್ ಪ್ರೇಮ್ ಕಹಾನಿ; ಅಶ್ಚಿನಿ ಹಿಂದೆ ಸುತ್ತಿ ಟ್ರೋಲ್ ಆದ ಅಭಿಷೇಕ್
Bigg Boss Abhishek: ಬಿಗ್ ಬಾಸ್ ಕನ್ನಡ 12 ಸ್ಪರ್ಧಿ ಅಭಿಷೇಕ್, ಅಶ್ವಿನಿ ಜೊತೆಗಿನ ಅತಿಯಾದ ಫ್ಲರ್ಟಿಂಗ್ನಿಂದ ಟ್ರೋಲ್ ಆಗುತ್ತಿದ್ದಾರೆ. ದೊಡ್ಮನೆಯಲ್ಲಿ ಹುಡುಗಿಯರ ಜೊತೆ ಸುತ್ತಾಡುವುದರಲ್ಲೇ ತಮ್ಮ ಎನರ್ಜಿ ವ್ಯಯಿಸುತ್ತಿದ್ದಾರೆ. ಇದರಿಂದಾಗಿ, ಅವರು ಮತ್ತು ಅಶ್ವಿನಿ ಮನೆಯಲ್ಲಿ ಮೂಲೆಗುಂಪಾಗಿದ್ದಾರೆ ಎಂಬ ಚರ್ಚೆಯೂ ನಡೆದಿದೆ.

ಅಭಿಷೇಕ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಸ್ಪರ್ಧಿಯಾಗಿದ್ದಾರೆ. ಅವರು ಈ ಮೊದಲು ಅವರು, ‘ಲಕ್ಷಣ’ ಹಾಗೂ ‘ವಧು’ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ಬಿಗ್ ಬಾಸ್ಗೆ ಬಂದಿದ್ದಾರೆ. ಅವರು ‘ಮುದ್ದು ಲಕ್ಷ್ಮೀ’ ಧಾರಾವಾಹಿಯ ನಟಿ ಅಶ್ವಿನಿ ಜೊತೆ ಜಂಟಿ ಆಗಿದ್ದಾರೆ. ಆದರೆ, ಅವರು ತಮ್ಮ ಎನರ್ಜಿಯನ್ನು ಫ್ಲರ್ಟ್ ಮಾಡುವುದರಲ್ಲೇ ಕಳೆಯುತ್ತಿದ್ದಾರೆ. ಈ ವಿಚಾರವಾಗಿ ಅವರು ಟ್ರೋಲ್ ಆಗುತ್ತಿದ್ದಾರೆ.
‘ಬಿಗ್ ಬಾಸ್’ನಲ್ಲಿ ಲವ್ ಸ್ಟೋರಿಗಳು ಹುಟ್ಟಿಕೊಳ್ಳೋದು ಹೊಸದೇನು ಅಲ್ಲ. ಈ ಮೊದಲು ಕೂಡ ಅದೆಷ್ಟೋ ಪ್ರೇಮ ಕಥೆಗಳು ದೊಡ್ಮನೆಯಲ್ಲಿ ಹುಟ್ಟಿಕೊಂಡಿವೆ. ಈ ಸೀಸನ್ನಲ್ಲಿ ಅಭಿಷೇಕ್ ಹಾಗೂ ಅಶ್ವಿನಿ ಈ ರೀತಿಯಲ್ಲಿ ಸುದ್ದಿ ಆಗುವ ಸೂಚನೆ ಸಿಕ್ಕಿದೆ. ಬಂದ ದಿನದಿಂದಲೂ ಅಭಿಷೇಕ್ ಅವರು ಹುಡುಗಿಯರ ಜೊತೆ ಮಾತನಾಡೋದು ಅವರ ಜೊತೆ ಸುತ್ತಾಡೋದು ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
View this post on Instagram
View this post on Instagram
ಸದ್ಯ ಅಭಿಷೇಕ್ ಅವರು ನಡೆದುಕೊಳ್ಳುತ್ತಿರುವ ರೀತಿ ಯಾವ ತರಹ ಇದೆ ಎಂಬ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಪ್ರತಿ ಎಪಿಸೋಡ್ಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಅಭಿಷೇಕ್ ಹಾಗೂ ಅಶ್ವಿನಿ ಹರಟೆ ಹೊಡೆಯುತ್ತಾ ಕುಳಿತುಕೊಳ್ಳುವುದನ್ನು ಮಾತ್ರ ಕಾಣಬಹುದು. ಅವರನ್ನು ಕೆಲವರು ‘ಸಂಗಬುಲ್ಲ’ ಎಂದು ಕರೆದಿದ್ದಾರೆ. ಸಂಗಬುಲ್ಲ ಎಂದರೆ, ಮಹಿಳೆಯರ ಸಹವಾಸವನ್ನು ತುಂಬಾ ಇಷ್ಟಪಡುವ ವ್ಯಕ್ತಿ ಎಂಬರ್ಥವಿದೆ.
ಇದನ್ನೂ ಓದಿ: ಮೊದಲ ವಾರವೇ ಟಾಸ್ಕ್ ರದ್ದು; ಮಿತಿ ಮೀರಿತು ಬಿಗ್ ಬಾಸ್ ಕೋಪ
ಅಭಿಷೇಕ್ ಹಾಗೂ ಅಶ್ವಿನಿ ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಕೂಡ ಮಾಡಿದ್ದಾರೆ. ‘ನಾವಿಬ್ಬರೂ ಹಾಸ್ಯ ಮಾಡುವುದರ ಮೂಲಕ ಸುದ್ದಿ ಆಗುತ್ತಿಲ್ಲ, ಜಗಳ ಕೂಡ ಆಡುತ್ತಿಲ್ಲ. ನಾವು ಮೂಲೆಗುಂಪು ಆಗಿದ್ದೇವೆ ಎಂದು ಅನಿಸುತ್ತಿದೆ’ ಎಂದು ಅಶ್ವಿನಿ ಹೇಳಿದ್ದರು. ಆ ಬಳಿಕ ಅಭಿಷೇಕ್ ಹೋಗಿ ಸುಖಾ ಸುಮ್ಮನೆ ಧ್ವನಿ ಏರಿಸಿ ಮಾತನಾಡಿ ಚರ್ಚೆ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:58 am, Fri, 3 October 25








