ಮೊದಲ ವಾರವೇ ಟಾಸ್ಕ್ ರದ್ದು; ಮಿತಿ ಮೀರಿತು ಬಿಗ್ ಬಾಸ್ ಕೋಪ
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಸ್ಪರ್ಧಿಗಳ ಮಧ್ಯೆ ಕಾವು ಜೋರಾಗಿದೆ. ಸ್ಪರ್ಧಿಗಳು ಮೊದಲ ವಾರವೇ ಮಿತಮೀತಿ ನಡೆದುಕೊಂಡಿದ್ದಾರೆ. ಇದರಿಂದ ಮೊದಲ ವಾರವೇ ಟಾಸ್ಕ್ಗಳು ರದ್ದಾಗಿ ಹೋಗಿವೆ. ಈ ವಿಚಾರ ಸಾಕಷ್ಟು ಚರ್ಚೆ ಆಗಿದೆ. ಅಷ್ಟಕ್ಕೂ ರದ್ದಾಗಲು ಕಾರಣ ಇಲ್ಲಿದೆ .
‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭ ಆಗಿ ಇನ್ನೂ ಸರಿಯಾಗಿ ಒಂದು ವಾರ ಆಗಿಲ್ಲ. ಆಗಲೇ ಬಿಗ್ ಬಾಸ್ನಲ್ಲಿ ಟಾಸ್ಕ್ ಒಂದು ರದ್ದಾಗಿ ಹೋಗಿದೆ. ಧನುಷ್ ಮಾಡಿದ ಹಠಕ್ಕೆ ಟಾಸ್ಕ್ ಅರ್ಧಕ್ಕೆ ನಿಂತಿದೆ. ಇದರಿಂದ ಕಾಕ್ರೋಚ್ ಸುಧಿ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಅವರು ಇತರ ಸ್ಪರ್ಧಿಗಳ ಮೇಲೆ ಕೂಗಾಡಿದ್ದಾರೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




