‘ಅನುಬಂಧ’ ಅವಾರ್ಡ್ಸ್​ಗೆ ದಿನಗಣನೆ; ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ?

ಧಾರಾವಾಹಿಗಳಲ್ಲಿ ನಟಿಸಿದ ಎಲ್ಲರಿಗೂ ಒಂದು ಕುಟುಂಬದ ಭಾವನೆ ಮೂಡಿದೆ. ಈ ಭಾವನೆಯನ್ನು ಮತ್ತಷ್ಟು ಗಟ್ಟಿ ಮಾಡುವ ಉದ್ದೇಶದಿಂದ ಆರಂಭವಾಗಿದ್ದೇ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ. ಇದರ ಆರಂಭಕ್ಕೆ ಈಗ ದಿನಗಣನೆ ಆರಂಭ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಅನುಬಂಧ’ ಅವಾರ್ಡ್ಸ್​ಗೆ ದಿನಗಣನೆ; ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ?
ಅನುಬಂಧ
Follow us
|

Updated on: Sep 12, 2024 | 10:42 AM

ಕಲರ್ಸ್ ಕನ್ನಡದ ಅವಾರ್ಡ್ ಕಾರ್ಯಕ್ರಮ ‘ಅನುಬಂಧ’ಕ್ಕೆ ದಿನಗಣನೆ ಶುರುವಾಗಿದೆ. ಈ ಕಾರ್ಯಕ್ರಮ ಸೆಪ್ಟೆಂಬರ್ 20, 21 ಹಾಗೂ 22ರಂದು ಕಲರ್ಸ್ ಕನ್ನಡದಲ್ಲಿ ಸಂಜೆ 7 ಗಂಟೆಗೆ ಪ್ರಸಾರ ಕಾಣಲಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋಗಳನ್ನು ಹಂಚಿಕೊಳ್ಳುತ್ತಿದೆ. ಅನೇಕ ಗಣ್ಯರು ಈ ಬಾರಿ ಅವಾರ್ಡ್​ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ವಿವಿಧ ಕಲಾವಿದರಿಗೆ ಈ ಪ್ರಶಸ್ತಿ ಸಿಗುತ್ತಿದೆ.

ಸಿನಿಮಾ ಜಗತ್ತು ಸಾಕಷ್ಟು ವಿಸ್ತಾರವಾಗಿದೆ. ಅಲ್ಲಿ ಪ್ರತಿ ವರ್ಷ ಅವಾರ್ಡ್​ಗಳನ್ನು ನೀಡಲಾಗುತ್ತದೆ. ಅದೇ ರೀತಿ ಕಿರುತೆರೆ ಜಗತ್ತು ಕೂಡ ವಿಸ್ತಾರವಾಗಿ ಬೆಳೆದಿದೆ.  ಇಲ್ಲಿಯೂ ಅವಾರ್ಡ್ ಫಂಕ್ಷನ್​ಗಳು ಅದ್ದೂರಿಯಾಗಿ ನಡೆಯುತ್ತವೆ. ‘ಅನುಬಂಧ’ ಅವಾರ್ಡ್ಸ್’ ಕಾರ್ಯಕ್ರಮ ಕಳೆದ 10 ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಇದು 11ನೇ ವರ್ಷದ ಅನುಬಂಧ ಕಾರ್ಯಕ್ರಮ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಧಾರಾವಾಹಿ ಕಲಾವಿದರಿಗೆ ಇದು ಮನೆಯ ಹಬ್ಬದ ರೀತಿಯೇ. ‘ಜನ ಮೆಚ್ಚಿದ ನಟಿ’, ‘ಜನ ಮೆಚ್ಚಿದ ನಟ’ ಸೇರಿ ಅನೇಕ ಅವಾರ್ಡ್​ಗಳನ್ನು ನೀಡಲಾಗುತ್ತದೆ. ಈ ಬಾರಿಯೂ ಅದ್ದೂರಿಯಾಗಿ ‘ಅನುಬಂಧ’ ಅವಾರ್ಡ್ಸ್ ಕಾರ್ಯಕ್ರಮ ನಡೆಯುತ್ತಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕೂಡ ‘ಅನುಬಂಧ’ ವೇದಿಕೆ ಏರಿದ್ದಾರೆ. ಅವರು ಬರುತ್ತಿದ್ದಂತೆ ಮಕ್ಕಳು ಗುಲಾಬಿ ಹೂ ಹಿಡಿದು ಮುತ್ತಿಕೊಂಡರು. ಅವರೆಲ್ಲರನ್ನೂ ಸಮಾಧಾನಪಡಿಸಿದರು ವೀರೇಂದ್ರ ಹೆಗ್ಗಡೆ. ಆ ಬಳಿಕ ಮಕ್ಕಳ ಪ್ರಶ್ನೆಗೆ ಅವರು ಉತ್ತರ ನೀಡಿದರು. ಕಲರ್ಸ್ ಕನ್ನಡದಲ್ಲಿ ನಟಿಸುತ್ತಿರುವ ತಾರೆಯರು ಸಖತ್ ಗ್ಲಾಮರಸ್ ಆಗಿ ಬಂದು ಕ್ಯಾಮೆರಾ ಎದುರು ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇದನ್ನೂ ಓದಿ: ಮತ್ತೆ ಬಂತು ‘ಅನುಬಂಧ ಅವಾರ್ಡ್ಸ್’; 10 ವರ್ಷಗಳ ಸಂಭ್ರಮಕ್ಕೆ ಹೆಚ್ಚಲಿದೆ ಅದ್ದೂರಿತನ

ಸೆಪ್ಟೆಂಬರ್ 20 ಶುಕ್ರವಾರ. ಅನುಬಂಧ ಅವಾರ್ಡ್​ ಹಿನ್ನೆಲೆಯಲ್ಲಿ ಯಾವುದೇ ಧಾರಾವಾಹಿಗಳು ಪ್ರಸಾರ ಕಾಣುವುದಿಲ್ಲ. ಶನಿವಾರ ಹಾಗೂ ಭಾನುವಾರ ಕೂಡ ಮನರಂಜನೆ ಮುಂದುವರಿಯಲಿದೆ. ಕನ್ನಡದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.