ಟಿಆರ್ಪಿ ರೇಸ್ನಲ್ಲಿ ಅಚ್ಚರಿಯ ಕಂಬ್ಯಾಕ್ ಮಾಡಿದ ‘ಲಕ್ಷ್ಮೀ ಬಾರಮ್ಮ’, ‘ರಾಮಾಚಾರಿ’
‘ಲಕ್ಷ್ಮೀ ನಿವಾಸ’ ಧಾರಾವಾಹಿ ಸದ್ಯ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಇತ್ತೀಚೆಗಷ್ಟೇ 300 ಸಂಚಿಕೆಯನ್ನು ಪೂರ್ಣಗೊಳಿಸಿದೆ. ಈ ಸಂಭ್ರಮದಲ್ಲೇ ಧಾರಾವಾಹಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲಿತ್ತು. ಈಗ ಧಾರಾವಾಹಿ ಟಿಆರ್ಪಿ ಕುಸಿದಿದೆ.
‘ಅಣ್ಣಯ್ಯ’ ಧಾರಾವಾಹಿ ಇತ್ತೀಚೆಗಷ್ಟೇ ಆರಂಭ ಆಗಿದೆ. ಈ ಧಾರಾವಾಹಿ ಆರಂಭ ಆದ ಕೆಲ ವಾರ ಒಳ್ಳೆಯ ಟಿಆರ್ಪಿಯನ್ನೇ ಪಡೆದಿತ್ತು. ಆದರೆ, 36ನೇ ವಾರದ ಟಿಆರ್ಪಿಯಲ್ಲಿ ಧಾರಾವಾಹಿ ಸ್ವಲ್ಪ ಡಲ್ ಹೊಡೆದಂತೆ ಕಾಣಿಸುತ್ತಿದೆ. ಕಲರ್ಸ್ ಕನ್ನಡದ ಕೆಲ ಧಾರಾವಾಹಿಗಳು ಒಳ್ಳೆಯ ಟಿಆರ್ಪಿ ಪಡೆದುಕೊಂಡಿರುವುದು ಕೂಡ ‘ಅಣ್ಣಯ್ಯ’ ಧಾರಾವಾಹಿ ಹಿಂದೆ ಬೀಳಲು ಕಾರಣ ಎಂದು ಹೇಳಲಾಗುತ್ತಿದೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿ ಸದ್ಯ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಇತ್ತೀಚೆಗಷ್ಟೇ 300 ಸಂಚಿಕೆಯನ್ನು ಪೂರ್ಣಗೊಳಿಸಿದೆ. ಈ ಸಂಭ್ರಮದಲ್ಲೇ ಧಾರಾವಾಹಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲಿತ್ತು. ಆದರೆ, ಧಾರಾವಾಹಿಯ ಸಮಯ ಬದಲಾದ ಕಾರಣ ಈಗ ‘ಲಕ್ಷ್ಮೀ ನಿವಾಸ’ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ.
ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಸ್ಥಾನ ಪಡೆದುಕೊಂಡಿದೆ. ಈ ಮೊದಲು ಐದು ಅಥವಾ ಆರನೇ ಸ್ಥಾನದಲ್ಲಿ ಇರುತ್ತಿದ್ದ ಧಾರಾವಾಹಿ ಇದು. ಈ ಬಾರಿ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಕಲರ್ಸ್ ಕನ್ನಡದ ಧಾರಾವಾಹಿ ಎರಡನೇ ಸ್ಥಾನ ಪಡೆದಿದ್ದು ಇದೇ ಮೊದಲು.
ಇದನ್ನೂ ಓದಿ: ಒಂದೇ ಧಾರಾವಾಹಿಯಲ್ಲಿ ನಟಿಸಿದ ಈ ನಟಿಯರು ಈಗ ಒಟ್ಟಿಗೆ ಪ್ರೆಗ್ನೆಂಟ್; ಸುಂದರ ಫೋಟೋಶೂಟ್ ವೈರಲ್
ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಸ್ಥಾನಪಡೆದುಕೊಂಡಿದೆ. ಈ ಧಾರಾವಾಹಿ ಈ ಮೊದಲಿಗಿಂತ ಒಳ್ಳೆಯ ಟಿಆರ್ಪಿ ಪಡೆದು ಸಾಗುತ್ತಿದೆ. ಐದನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಅಣ್ಣಯ್ಯ’ ಹಾಗೂ ಕಲರ್ಸ್ ಕನ್ನಡದ ‘ರಾಮಾಚಾರಿ’ ಧಾರಾವಾಹಿ ಇದೆ. ‘ಸೀತಾ ರಾಮ’ ಧಾರಾವಾಹಿ ಆರನೇ ಸ್ಥಾನದಲ್ಲಿ ಇದೆ. ‘ನಿನಗಾಗಿ’ ಧಾರಾವಾಹಿ ಇತ್ತೀಚೆಗೆ ಒಳ್ಳೆಯ ಟಿಆರ್ಪಿ ಪಡೆದುಕೊಂಡು ಸಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.