ವಾರ ಪೂರ್ತಿ ಪ್ರಸಾರ ಆಗಲಿದೆ ಕಲರ್ಸ್​ನ ನಿಮ್ಮ ಈ ನಾಲ್ಕು ಫೇವರಿಟ್ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯು ಭಾಗ್ಯಲಕ್ಷ್ಮೀ, ಮುದ್ದು ಸೊಸೆ, ನಿನಗಾಗಿ ಮತ್ತು ಭಾರ್ಗವಿ LL.B ಧಾರಾವಾಹಿಗಳನ್ನು ಈಗ ವಾರದ ಏಳು ದಿನಗಳೂ ಪ್ರಸಾರ ಮಾಡಲು ನಿರ್ಧರಿಸಿದೆ. ಇದು ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದ ಅಂತ್ಯದ ನಂತರ ತೆಗೆದುಕೊಂಡ ನಿರ್ಧಾರವಾಗಿದೆ. ಈ ಹೊಸ ವೇಳಾಪಟ್ಟಿಯಿಂದ ಧಾರಾವಾಹಿ ಪ್ರೇಮಿಗಳಿಗೆ ಒಳ್ಳೆಯ ಸುದ್ದಿಯಾಗಿದೆ.

ವಾರ ಪೂರ್ತಿ ಪ್ರಸಾರ ಆಗಲಿದೆ ಕಲರ್ಸ್​ನ ನಿಮ್ಮ ಈ ನಾಲ್ಕು ಫೇವರಿಟ್ ಧಾರಾವಾಹಿ
ಕಲರ್ಸ್ ಧಾರಾವಾಹಿ

Updated on: Apr 30, 2025 | 11:54 AM

ಸಾಮಾನ್ಯವಾಗಿ ಧಾರಾವಾಹಿಗಳು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಪ್ರಸಾರ ಕಾಣುತ್ತವೆ. ವೀಕೆಂಡ್​ನಲ್ಲಿ ಧಾರಾವಾಹಿಗಳಿಗೆ ರೆಸ್ಟ್ ನೀಡಿ, ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡಲಾಗುತ್ತದೆ. ಆದರೆ, ಕಲರ್ಸ್ ಕನ್ನಡ ಈ ವಾರದಿಂದ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಉತ್ತಮ ಟಿಆರ್​ಪಿ (TRP) ಹೊಂದಿರೋ ನಾಲ್ಕು ಧಾರಾವಾಹಿಗಳನ್ನು ವಾರದ ಏಳೂ ದಿನ ಪ್ರಸಾರ ಮಾಡಲು ನಿರ್ಧರಿಸಿದೆ. ಅದಕ್ಕೆ ಕಾರಣ ಕೂಡ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಕಲರ್ಸ್ ಕನ್ನಡದಲ್ಲಿ ಇಷ್ಟು ದಿನ ಎಲ್ಲಾ ಧಾರಾವಾಹಿಗಳು ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರ ಕಾಣುತ್ತಿದ್ದವು. ವೀಕೆಂಡ್​ನಲ್ಲಿ ‘ಬಾಯ್ಸ್ vs ಗರ್ಲ್ಸ್’ ಹಾಗೂ ‘ಮಜಾ ಟಾಕೀಸ್’ ಶೋ ಪ್ರಸಾರ ಕಾಣುತ್ತಿತ್ತು. ಕಳೆದ ವಾರ ‘ಬಾಯ್ಸ್ vs ಗರ್ಲ್ಸ್’ ಶೋ ಪೂರ್ಣಗೊಂಡಿದೆ. ಈ ಶೋ ನಲ್ಲಿ ಬಾಯ್ಸ್ ತಂಡ ಗೆಲುವು ಕಂಡಿದೆ. ಈ ಅವಧಿಯಲ್ಲಿ ಈಗ ಪ್ರಸಾರ ಮಾಡಲು ಬೇರೆ ಯಾವುದೇ ಶೋನ ಪ್ಲ್ಯಾನ್ ನಡೆದಿಲ್ಲ. ಈ ಕಾರಣಕ್ಕೆ ಆ ಅವಧಿಯಲ್ಲಿ ಧಾರಾವಾಹಿಗಳು ಪ್ರಸಾರ ಕಾಣಲಿವೆ.

ಇದನ್ನೂ ಓದಿ
‘ಒಡಹುಟ್ಟಿದವರು’ ಮಾಡಲು ರಾಜ್​ಕುಮಾರ್​ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್
ತಮನ್ನಾ ಹಾಟ್ ಅವತಾರಕ್ಕೆ ಬದಲಾಯ್ತು ‘ರೇಡ್ 2’ ಸೆನ್ಸಾರ್ ಪ್ರಮಾಣಪತ್ರ?  
ಸಂಧ್ಯಾ ಥಿಯೇಟರ್ ಕಾಲ್ತುಳಿತ; ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶ್ರೀತೇಜ್
‘ಬಾಹುಬಲಿ 2’ ಚಿತ್ರಕ್ಕೆ 8 ವರ್ಷ; ರೀ-ರಿಲೀಸ್ ದಿನಾಂಕ ಘೋಷಣೆ

ಇದನ್ನೂ ಓದಿ: ಕಲರ್ಸ್ ಕನ್ನಡ ತೊರೆದ ನಿರಂಜನ್ ದೇಶ್​ಪಾಂಡೆ 

ಹಾಗಾದರೆ ಯಾವುದು ಆ ನಾಲ್ಕು ಧಾರಾವಾಹಿಗಳು? ಅದಕ್ಕೂ ಉತ್ತರ ಇದೆ. ಸಂಜೆ 7 ಗಂಟೆಗೆ ‘ಭಾಗ್ಯಲಕ್ಷ್ಮೀ’ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಶನಿವಾರ ಹಾಗೂ ಭಾನುವಾರವರೂ ಇರಲಿದೆ. ಅದೇ ರೀತಿ ತ್ರಿವಿಕ್ರಂ ನಟನೆಯ ‘ಮುದ್ದು ಸೊಸೆ’, ದಿವ್ಯಾ ಉರುಡುಗ ಮುಖ್ಯ ಭೂಮಿಕೆಯಲ್ಲಿರೋ ‘ನಿನಗಾಗಿ’ (8 ಗಂಟೆ)ಮತ್ತು 8.30ಕ್ಕೆ ಪ್ರಸಾರ ಆಗೋ ‘ಭಾರ್ಗವಿ LL.B’ ಧಾರಾವಾಹಿಗಳು ವಾರದ ಏಳೂ ದಿನ ಪ್ರಸಾರ ಕಾಣಲಿದೆ. 9 ಗಂಟೆಗೆ ವೀಕೆಂಡ್​ನಲ್ಲಿ ಎಂದಿನಂತೆ ‘ಮಜಾ ಟಾಕೀಸ್’ ಪ್ರಸಾರ ಕಾಣಲಿದೆ.


ಬಿಗ್ ಬಾಸ್ ಪೂರ್ಣಗೊಂಡ ಬಳಿಕ ‘ಬಾಯ್ಸ್ vs ಗರ್ಲ್ಸ್’ ಹಾಗೂ ‘ಮಜಾ ಟಾಕೀಸ್’ ಪ್ರಸಾರ ಆರಂಭಿಸಿದವು. ಆದರೆ, ಈಗ ‘ಬಾಯ್ಸ್ vs ಗರ್ಲ್ಸ್’ ಶೋ ಪೂರ್ಣಗೊಂಡಿದೆ. ಈ ಸ್ಥಾನಕ್ಕೆ ಬೇರೆ ಶೋ ಬರೋವರೆಗೆ ಈ ಧಾರಾವಾಹಿಗಳು ಪ್ರಸಾರ ಕಾಣಲಿವೆ ಎನ್ನಲಾಗುತ್ತಿದೆ. ಸದ್ಯ ರಿಯಾಲಿಟಿ ಶೋಗಳನ್ನು ಇಷ್ಟಪಡದೇ ಕೇವಲ ಧಾರಾವಾಹಿಗಳನ್ನು ಮಾತ್ರ ವೀಕ್ಷಿಸೋರಿಗೆ ಇದು ಒಂದೊಳ್ಳೆಯ ಸುದ್ದಿ ಎಂದೇ ಹೇಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.