AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲರ್ಸ್ ಕನ್ನಡ’ ವಾಹಿನಿಯ ಧಾರಾವಾಹಿಗಳಲ್ಲಿ ಈ ತಿಂಗಳು ಪೂರ್ತಿ ಕನ್ನಡ ಹಬ್ಬ

ಜನಪ್ರಿಯ ಮನರಂಜನಾ ವಾಹಿನಿಯಾದ ‘ಕಲರ್ಸ್ ಕನ್ನಡ’ ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ರಾಮಾಚಾರಿ, ಮುದ್ದು ಸೊಸೆ, ಗಂಧದ ಗುಡಿ, ಭಾಗ್ಯಲಕ್ಷ್ಮಿ ಮುಂತಾದ ಧಾರಾವಾಹಿಗಳ ಕಥೆಯಲ್ಲಿ ಕನ್ನಡತನ ಕಾಣಿಸಲಿದೆ. ಈ ಬಗ್ಗೆ ‘ಕಲರ್ಸ್ ಕನ್ನಡ’ ವಾಹಿನಿ ಮಾಹಿತಿ ಹಂಚಿಕೊಂಡಿದೆ. ಕನ್ನಡ ರಾಜ್ಯೋತ್ಸವಕ್ಕೆ ವೀಕ್ಷಕರಿಗೆ ವಿಶೇಷ ಅನುಭವ ಸಿಗಲಿದೆ.

‘ಕಲರ್ಸ್ ಕನ್ನಡ’ ವಾಹಿನಿಯ ಧಾರಾವಾಹಿಗಳಲ್ಲಿ ಈ ತಿಂಗಳು ಪೂರ್ತಿ ಕನ್ನಡ ಹಬ್ಬ
Colors Kannada Serial Kannada Rajyotsava
ಮದನ್​ ಕುಮಾರ್​
|

Updated on: Nov 02, 2025 | 2:08 PM

Share

‘ಕಲರ್ಸ್ ಕನ್ನಡ’ (Colors Kannada) ವಾಹಿನಿಯು ಕನ್ನಡ ರಾಜ್ಯೋತ್ಸವವನ್ನು ತನ್ನ ಧಾರಾವಾಹಿಗಳಲ್ಲಿಯೂ ವಿಶಿಷ್ಟವಾಗಿ ಆಚರಿಸಲಿದೆ. ಕತೆಗಳಲ್ಲಿ ಕನ್ನಡತನ ತರುವ ಈ ಪ್ರಯತ್ನವನ್ನು ಪ್ರೋಮೋದಲ್ಲಿ ನೋಡಿರುವ ಕನ್ನಡದ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಕನ್ನಡದ ಸಂಭ್ರಮ ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ಜೋರಾಗಿ ನಡೆಯಲಿದೆ. ಪ್ರೇಮ ಕಾವ್ಯ, ರಾಮಾಚಾರಿ, ಮುದ್ದು ಸೊಸೆ, ಗಂಧದ ಗುಡಿ, ಭಾಗ್ಯಲಕ್ಷ್ಮಿ, ಭಾರ್ಗವಿ LLB, ನಂದ ಗೋಕುಲ ಧಾರಾವಾಹಿಗಳಲ್ಲಿ ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಣೆಯ ಕಂಪು ಹರಡಲಿದೆ. ಅದರ ವಿವರಗಳು ಹೀಗಿವೆ..

ರಾಮಾಚಾರಿ:

ಚಾರು ದೇವಸ್ಥಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಮತ್ತು ಮಗುವಿಗೆ ಅರಿಶಿನ ಮತ್ತು ಕುಂಕುಮದಿಂದ ಕೂಡಿದ ಕನ್ನಡ ಧ್ವಜದ ಬಣ್ಣದ ಸೀರೆ ಹಾಕಲಾಗುತ್ತದೆ. ರಾಮಾಚಾರಿ ತನ್ನ ಮಗುವಿನ ಜನ್ಮವನ್ನು ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದ ಎಂದು ಹೇಳಿ ಅವನು ಮಾಡುವ ಪ್ರತಿಜ್ಞೆ ಏನು?

ಪ್ರೇಮ ಕಾವ್ಯ:

ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ಆಸ್ಪತ್ರೆಯಲ್ಲಿ ಹಬ್ಬದ ಅಲಂಕಾರ ಮಾಡಲಾಗುತ್ತದೆ. ಧನರಾಜ್, ರಾಮ್ ಮತ್ತು ಶ್ರಿಯಾ ವೇದಿಕೆಗೆ ಆಹ್ವಾನಿತರಾಗಿರುತ್ತಾರೆ ಮತ್ತು ರಾಮ್ ತನ್ನ ಹಳ್ಳಿಗೆ ಮಾಡಿದ ಸೇವೆಗೆ ಹೆಮ್ಮೆಪಡುತ್ತಾನೆ. ಅವನಿಗೆ ಹಲವಾರು ವಿದೇಶಿ ಅವಕಾಶಗಳಿದ್ದರೂ ಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾನೆ. ರಾಮ್ ರಾಜ್ಯದ ಪ್ರೀತಿ ಮತ್ತು ಭಾಷೆಯ ಬಗ್ಗೆ ಭಾವುಕನಾಗಿ ಮಾತನಾಡುತ್ತಾನೆ. ಆಗ ಅವನಿಗೆ ಒದಗುವ ಅಚ್ಚರಿ ಏನು?

ಭಾಗ್ಯಲಕ್ಷ್ಮಿ:

ಸಕಲೇಶಪುರದ ಶಾಲೆಯಲ್ಲಿ ಭಾಗ್ಯ ಮತ್ತು ಆದಿಯನ್ನು ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಗೌರವಿಸಲಾಗುತ್ತದೆ. ಬಿಗ್‌ಬಾಸ್ ಸ್ಪರ್ಧಿ ಕರಿಬಸಪ್ಪ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ.

ಮುದ್ದು ಸೊಸೆ:

ವಿದ್ಯಾ ಶಿವರಾಜಯೋಗಿಗಾಗಿ ಗ್ರಾಮದ ಮಟ್ಟದಲ್ಲಿ ಪ್ರಚಾರ ಮಾಡುತ್ತಾಳೆ. ಕನ್ನಡ ರಾಜ್ಯೋತ್ಸವ ಆಚರಣೆಗೆ ಯೋಜನೆ ರೂಪಿಸುತ್ತಾಳೆ. ಈಶ್ವರಿ ಇದನ್ನು ವಿಫಲಗೊಳಿಸಲು ಆಚರಣೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಾಳೆ. ಅದು ನೆರವೇರುತ್ತಾ?

ಗಂಧದ ಗುಡಿ:

ತಿಂಗಳ ಆರಂಭದಲ್ಲಿ ಪೊಲೀಸ್ ಠಾಣೆಯಲ್ಲಿ ವಿಶೇಷ ಪೋಲೀಸ್ ಪಾತ್ರದಲ್ಲಿ ರವಿ ಕಾಳೆ ಕಾಣಿಸಿಕೊಳ್ಳುತ್ತಾರೆ ಮತ್ತು ಕನ್ನಡ ನಾಡಿನ ಹಾಡೊಂದನ್ನು ಹಾಡುತ್ತಾರೆ. ನಂತರ ತಿಂಗಳ ಕೊನೆಯಲ್ಲಿ ನಾಯಕ ನಾಯಕಿಯರು ರಾಜ್ಯೋತ್ಸವ ಸಂಬಂಧಿತ ಹಾಡುಗಳಿಗೆ ನೃತ್ಯ ಮಾಡುತ್ತಾರೆ.

ಭಾರ್ಗವಿ LLB:

ಜೆಪಿ ಪಾಟೀಲ್ ವಿಕಿಯನ್ನು ರಕ್ಷಿಸಲು ಆಗುವುದಿಲ್ಲ. ವಿಕಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗುವುದಿಲ್ಲ. ಭಾರ್ಗವಿ ನ್ಯಾಯಾಲಯದಲ್ಲಿ ವಿಜಯ ಸಾಧಿಸುತ್ತಾಳೆ. ಕನ್ನಡದ ಹೆಣ್ಣುಮಕ್ಕಳಿಗೆ ಅವಮಾನಿಸಿದರೆ ಇದೇ ಗತಿ ಎಂದು ಉದಾಹರಣೆ ಸಮೇತ ವಿಕಿಗೆ ವಾರ್ನಿಂಗ್ ಕೊಡುತ್ತಾಳೆ ಭಾರ್ಗವಿ. ನ್ಯಾಯಾಲಯದ ಹೊರ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ನಡೆಯುತ್ತಿರುತ್ತದೆ.

ಇದನ್ನೂ ಓದಿ: ಜನ ಸಾಮಾನ್ಯರಿಗೂ ಬಿಗ್ ಬಾಸ್ ಮನೆಗೆ ತೆರಳೋ ಅವಕಾಶ; ಚಾಲೆಂಜ್ ನೀಡಿದ ಕಲರ್ಸ್

ನಂದ ಗೋಕುಲ:

ಗಿರಿಜಾ ಯಾವ ರಂಗೋಲಿ ಇಡುವುದೆಂದು ಆಳವಾಗಿ ಯೋಚನೆಯಲ್ಲಿ ತೊಡಗಿರುವಾಗ, ಮೀನಾ ಅವಳಿಗೆ ಇವತ್ತು ವಿಶೇಷ ದಿನ ಎಂದು ನೆನಪಿಸುತ್ತಾಳೆ. ಭುವನೇಶ್ವರಿ ದೇವಿ, ರಾಜ್ಯೋತ್ಸವದ ಆಚರಣೆಯ ಮಾತುಕತೆಯ ನಂತರ ಅಮೂಲ್ಯ ಕೂಡ ಸೇರಿಕೊಂಡು ಅವರು ಕನ್ನಡ ರಾಜ್ಯೋತ್ಸವದ ಪರಿಕಲ್ಪನೆಯ ರಂಗೋಲಿ ಇಡುತ್ತಾರೆ. ಹಾಗೂ ಕನ್ನಡ ಸಾಹಿತ್ಯ ಸಂಸ್ಕೃತಿಯ ಕುರಿತಂತೆ ಮೀನಾ ತನ್ನ ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಕನ್ನಡ ಪುಸ್ತಕ ಮಳಿಗೆ ಇಡುತ್ತಾಳೆ. ಅಲ್ಲಿ ಒಬ್ಬ ಇಂಗ್ಲಿಷ್ ನಲ್ಲಿ ಮಾತನಾಡುವ ವ್ಯಕ್ತಿ ಕನ್ನಡವನ್ನು ನಿಂದಿಸಿದಾಗ, ಮೀನಾ ಅವನಿಗೆ ಹೇಗೆ ಪಾಠ ಕಲಿಸುತ್ತಾಳೆ?

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ