Comedy Khiladigalu 4: ‘ಕಾಮಿಡಿ ಕಿಲಾಡಿ ಸೀಸನ್ 4’ರ ಫಿನಾಲೆಗೆ ದಿನಾಂಕ ಫಿಕ್ಸ್; ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು

|

Updated on: Feb 09, 2023 | 10:39 PM

Comedy Khiladigalu Season 4 Finale: ‘ಕಾಮಿಡಿ ಕಿಲಾಡಿಗಳು ಸೀಸನ್‌ 4’ ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಇದಕ್ಕಾಗಿ ವೀಕ್ಷಕರು ಕಾಯುತ್ತಿದ್ದಾರೆ. ಈ ಬಗ್ಗೆ ವಾಹಿನಿ ಕಡೆಯಿಂದ ಮಾಹಿತಿ ಸಿಕ್ಕಿದೆ.

Comedy Khiladigalu 4: ‘ಕಾಮಿಡಿ ಕಿಲಾಡಿ ಸೀಸನ್ 4’ರ ಫಿನಾಲೆಗೆ ದಿನಾಂಕ ಫಿಕ್ಸ್; ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು
ಕಾಮಿಡಿ ಕಿಲಾಡಿಗಳು ಸೀಸನ್ 4
Follow us on

ಇತ್ತೀಚೆಗೆ ರಿಯಾಲಿಟಿ ಶೋಗಳು ಪ್ರೇಕ್ಷಕರನ್ನು ಹೆಚ್ಚು ಗಮನ ಸೆಳೆಯುತ್ತಿವೆ. ‘ಜೀ ಕನ್ನಡ’ ವಾಹಿನಿ (Zee Kannada) ಹಲವು ರಿಯಾಲಿಟಿ ಶೋಗಳನ್ನು ಪ್ರೇಕ್ಷಕರ ಮುಂದೆ ಇಟ್ಟಿದೆ. ಆ ಪೈಕಿ ‘ಕಾಮಿಡಿ ಕಿಲಾಡಿ’ (Comedy Khiladigalu) ಕೂಡ ಒಂದು. ಈಗಾಗಲೇ ಮೂರು ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಸರಣಿಯ ನಾಲ್ಕನೇ ಸೀಸನ್ ಪ್ರಸಾರ ಕಾಣುತ್ತಿದೆ. ನಾಲ್ಕನೇ ಸೀಸನ್ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಫಿನಾಲೆ ಬಗ್ಗೆ ಜೀ ಕನ್ನಡ ಕಡೆಯಿಂದ ಮಾಹಿತಿ ಸಿಕ್ಕಿದೆ. ಈ ಕಾರ್ಯಕ್ರಮದ ಫಿನಾಲೆ (Comedy Khiladigalu Season 4 Finale) ಎಲ್ಲಿ ನಡೆಯಲಿದೆ, ಯಾವಾಗ ಟಿವಿಯಲ್ಲಿ ಪ್ರಸಾರ ಕಾಣಲಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

‘ಕಾಮಿಡಿ ಕಿಲಾಡಿ ಸೀಸನ್ 4’ ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದೆ. 22 ವಾರಗಳ ಕಾಲ ವೀಕ್ಷಕರಿಗೆ ಈ ಶೋ ಮನರಂಜನೆ ನೀಡಿದೆ. ಇಲ್ಲಿಯವರೆಗೆ 150ಕ್ಕೂ ಹೆಚ್ಚು ಸ್ಕಿಟ್‌ಗಳ ಮೂಲಕ ತಮ್ಮ ಪ್ರತಿಭೆಗಳನ್ನು ಸ್ಪರ್ಧಿಗಳು ಅನಾವರಣ ಮಾಡಿದ್ದಾರೆ. ಈಗ ‘ಕಾಮಿಡಿ ಕಿಲಾಡಿಗಳು ಸೀಸನ್‌ 4’ ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಇದಕ್ಕಾಗಿ ವೀಕ್ಷಕರು ಕಾಯುತ್ತಿದ್ದಾರೆ. ಈ ಬಗ್ಗೆ ವಾಹಿನಿ ಕಡೆಯಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:  ‘ವಾಹಿನಿ ಹಾಗೂ ನಿರ್ದೇಶಕರ ಖ್ಯಾತಿ ಹೆಚ್ಚಿದ್ದು ಜೊತೆ ಜೊತೆಯಲಿ ಧಾರಾವಾಹಿಯಿಂದ’; ಅನಿರುದ್ಧ ಜತ್ಕರ್ ನೇರ ಮಾತು

ಇದನ್ನೂ ಓದಿ
Pathaan Movie: ‘ಶ್ರೀನಗರದಲ್ಲಿ ದಶಕಗಳ ಬಳಿಕ ಹೌಸ್​ಫುಲ್​ ಆಗಿದೆ’: ‘ಪಠಾಣ್​’ ಗೆಲುವಿನ ಬಳಿಕ ಸಂಸತ್ತಿನಲ್ಲಿ ಮೋದಿ ಭಾಷಣ
‘ಬಟ್ಟೆ ಕಡಿಮೆ ಹಾಕಿ ಬೋಲ್ಡ್​ ಎನಿಸಿಕೊಳ್ಳೋದಲ್ಲ, ಪಾತ್ರವೇ ಬೋಲ್ಡ್ ಆಗಿರಬೇಕು’; ‘ಬೆಂಗಳೂರು 69’ ನಟಿ ಅನಿತಾ ಭಟ್  
‘ಅರ್ಬನ್ ನಕ್ಸಲ್ಸ್​ಗೆ ನಿದ್ದೆ ಬರುತ್ತಿಲ್ಲ’; ‘ಬೊಗಳುತ್ತಾರೆ, ಕಚ್ಚಲ್ಲ’ ಎಂಬ ಪ್ರಕಾಶ್​ ರಾಜ್ ಹೇಳಿಕೆಗೆ ತಿರುಗೇಟು ಕೊಟ್ಟ ವಿವೇಕ್ ಅಗ್ನಿಹೋತ್ರಿ
ಕಪಿಲ್ ಶರ್ಮಾ ಭೇಟಿ ಮಾಡಿದ ಗಣೇಶ್; ಜನಪ್ರಿಯ ಶೋಗೆ ಗೋಲ್ಡನ್ ಸ್ಟಾರ್ ಅತಿಥಿ

ಗಮನ ಸೆಳೆದ ಜಡ್ಜ್​ಗಳು

‘ಕಾಮಿಡಿ ಕಿಲಾಡಿಗಳು ಸೀಸನ್​ 4’ರಲ್ಲಿ ಸ್ಪರ್ಧಿಗಳ ಜತೆ ಜಡ್ಜ್​​ಗಳು ಕೂಡ ಗಮನ ಸೆಳೆದಿದ್ದಾರೆ. ನವರಸ ನಾಯಕ ಜಗ್ಗೇಶ್‌, ರಕ್ಷಿತಾ ಪ್ರೇಮ್ ಹಾಗು ‘ಲವ್ಲೀ ಸ್ಟಾರ್‌’ ಪ್ರೇಮ್‌ ಅವರು ಈ ಬಾರಿಯ ‘ಕಾಮಿಡಿ ಕಿಲಾಡಿ’ಯ ಜಡ್ಜ್​ ಆಗಿದ್ದರು. ಅವರು ಫಿನಾಲೆಯ ಮೆರುಗನ್ನು ಹೆಚ್ಚಿಸಲಿದ್ದಾರೆ. ನಿರೂಪಕ ಮಾಸ್ಟರ್‌ ಆನಂದ್‌ ಅವರು ಗ್ರ್ಯಾಂಡ್‌ ಫಿನಾಲೆಯನ್ನು ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: Radhika Madan: ಧಾರಾವಾಹಿಗಳಿಂದ ಫೇಮಸ್​ ಆದ ಬಳಿಕ ಕಿರುತೆರೆ ಬಗ್ಗೆಯೇ ಕಟು ಟೀಕೆ ಮಾಡಿದ ರಾಧಿಕಾ ಮದನ್​

ಫಿನಾಲೆ ಎಲ್ಲಿ?

ರಿಯಾಲಿಟಿ ಶೋಗಳ ಫಿನಾಲೆ ಎಂದರೆ ತುಂಬಾನೇ ಗ್ರ್ಯಾಂಡ್​ ಆಗಿ ಆಯೋಜಿಸಲಾಗುತ್ತದೆ. ಅದೇ ರೀತಿ ‘ಕಾಮಿಡಿ ಕಿಲಾಡಿಗಳು ಸೀಸನ್‌ 4’ ಅದ್ದೂರಿಯಾಗಿ ನಡೆಯುತ್ತಿದ್ದು, ಇದಕ್ಕೆ ಮಹಾವೇದಿಕೆ ಸಿದ್ಧವಾಗುತ್ತಿದೆ. 12 ಸ್ಪರ್ಧಿಗಳು ಫಿನಾಲೆಯಲ್ಲಿದ್ದಾರೆ. ಫೈನಲಿಸ್ಟ್​​ಗಳು ಹಾಸ್ಯ ನಾಟಕಗಳ ಮೂಲಕ ಮನರಂಜನೆ ನೀಡಲಿದ್ದಾರೆ. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಕೆ.ಆರ್.ಪೇಟೆ ಪುರಸಭೆ ಮೈದಾನದಲ್ಲಿ ಫಿನಾಲೆ ನಡೆಯಲಿದೆ. ಫೆಬ್ರವರಿ 11ರ ಸಂಜೆ ಕಾರ್ಯಕ್ರಮ ಆರಂಭವಾಗಲಿದೆ.

ಹಾಗಂತ ಅದೇ ವಾರ ‘ಕಾಮಿಡಿ ಕಿಲಾಡಿಗಳು ಸೀಸನ್‌ 4’ ಟಿವಿಯಲ್ಲಿ ಪ್ರಸಾರ ಆಗುವುದಿಲ್ಲ. ಸೀಸನ್‌ 4 ಗ್ರ್ಯಾಂಡ್‌ ಫಿನಾಲೆ ಸಂಚಿಕೆ ಫೆಬ್ರವರಿ 19ರಂದು ರಾತ್ರಿ 9ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ.

ಶ್ರೀಲಕ್ಷ್ಮಿ ಎಚ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.